Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಶನಿವಾರ ಕರೆಂಟ್ ಕಟ್
Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳ ಹಾಗೂ ಅತೀ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಜುಲೈ 26ರಂದು ನಗರದ ಹಲವು ಪ್ರದೇಶಗಳಲ್ಲಿ ಕರೆಂಟ್ ಕಟ್ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದರೆ ಎಲ್ಲೆಲ್ಲಿ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆ ನಗರದ ಈ ಕೆಳಕಂಡ ಪ್ರದೇಶಗಳಲ್ಲಿ ಜುಲೈ 26ರ ಶನಿವಾರ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಅಲ್ಲದೆ, ವಿದ್ಯುತ್ ಕಡಿತಗೊಳ್ಳುವ ಪ್ರದೇಶದ ನಿವಾಸಿಗಳಿಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಸೂಚನೆಗಳನ್ನು ಕೂಡ ನೀಡಿದೆ.

ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ 66/11ಕೆವಿ IISC ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಜುಲೈ 26ರ ಶನಿವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 4 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಶನಿವಾರ ಎಲ್ಲೆಲ್ಲಿ ಕರೆಂಟ್ ಕಟ್?: ಮಲ್ಲೇಶ್ವರಂ, ಎಂ.ಡಿ.ಬ್ಲಾಕ್, ವೈಯಾಲಿಕಾವಲ್, ಕೋದಂಡರಾಮಪುರ, ರಂಗನಾಥಪುರ, ಬಿಎಚ್‌ಇಎಲ್, ಐಐಎಸ್ ಸಿ ಬ್ರೈನ್ ಸೆಂಟರ್, ಅಂಬೇಡ್ಕರ್ ನಗರ, ಯಶವಂತಪುರ ಪೈಪ್ ಲೈನ್ ರಸ್ತೆ, ಎಲ್‌ಎನ್ ಕಾಲೋನಿ, ಸುಬೇದ್ರಪಾಳ್ಯ, ದಿವಾನರ ಪಾಳ್ಯ, ಕೆ.ಎನ್. ವಿಸ್ತರಣೆ, ಯಶವಂತಪುರ 1ನೇ ಮುಖ್ಯ ರಸ್ತೆ, ಎಚ್.ಎಂ.ಟಿ. ಮುಖ್ಯ ರಸ್ತೆ, ಮಾಡೆಲ್ ಕಾಲೋನಿ, ಶರೀಫ್ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.
ಇನ್ನು ವಿದ್ಯುತ್ ಪೂರೈಕೆಯಲ್ಲಿ ಕಡಿತ ಉಂಟಾಗುವ ಪ್ರದೇಶಗಳಲ್ಲಿ ವಾಸ ಮಾಡುವ ನಿವಾಸಿಗಳು ಮೊಬೈಲ್ ಫೋನ್, ಲ್ಯಾಪ್‌ಟ್ಯಾಪ್, ಬ್ಯಾಟರಿಗ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ಸಾಧನಗಳನ್ನ ಮುಂಚಿತವಾಗಿ ಚಾರ್ಜ್ ಮಾಡಿಕೊಳ್ಳಲು ಹಾಗೂ ಈ ಸಮಯದಲ್ಲಿ ವಿದ್ಯುತ್ ಉಪಕರಣಗಳನ್ನು ಅವಲಂಬಿಸುವುದನ್ನ ತಪ್ಪಿಸುವಂತೆ ಬೆಸ್ಕಾಂ ಮುಂಜಾಗ್ರತಾ ಕ್ರಮವಾಗಿ ಸೂಚನೆ ನೀಡಿದೆ.
ಆನ್‌ಲೈನ್ ಸೇವೆ ಬಂದ್: ಐಟಿ ವ್ಯವಸ್ಥೆಯ ಉನ್ನತೀಕರಣ ಹಿನ್ನೆಲೆ ಐದು ಎಸ್ಕಾಂಗಳ ಆನ್‌ಲೈನ್ ಸೇವೆಗಳಾದ ವಿದ್ಯುತ್ ಬಿಲ್ ಪಾವತಿ, ಹೆಸರು ಬದಲಾವಣೆ, ಜಕಾತಿ ಬದಲಾವಣೆ ಹಾಗೂ ಹೊಸ ಸಂಪರ್ಕ ಸೇರಿದಂತೆ ಆನ್‌ಲೈನ್ ಆಧಾರಿತ ಸೇವೆಗಳು ಜುಲೈ 25ರ ಶುಕ್ರವಾರ ರಾತ್ರಿ 8.30ರಿಂದ ಜುಲೈ 27ರ ರಾತ್ರಿ 10 ಗಂಟೆಯವರೆಗೆ ಲಭ್ಯ ಇರುವುದಿಲ್ಲ ಎಂದು ತಿಳಿಸಿದೆ.
ಬೆಸ್ಕಾಂ, ಸೆಸ್ಕ್, ಮೆಸ್ಕಾಂ, ಜೆಸ್ಕಾಂ, ಹೆಸ್ಕಾಂ ಈ ಎಲ್ಲಾ 5 ವಿದ್ಯುತ್ ಸರಬರಾಜು ಕಂಪನಿಗಳ ನಗರ ಉಪ ವಿಭಾಗದ ಗ್ರಾಹಕರಿಗೆ ಆನ್‌ಲೈನ್ ಸೇವೆಗಳು ಲಭ್ಯವಿರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ. ಅದರಲ್ಲೂ ಬೆಂಗಳೂರು ನಗರ ವ್ಯಾಪ್ತಿಯ ಎಲ್ಲಾ ಉಪ ವಿಭಾಗಗಳು, ಶಿಢ್ಲಘಟ್ಟ, ಚಿಕ್ಕಬಳ್ಳಾಪುರ, ಕೋಲಾರ, ಚಿಂತಾಮಣಿ, ಕನಕಪುರ, ರಾಮನಗರ, ದಾವಣಗೆರೆ-1, ದಾವಣಗೆರೆ-2, ಚಿತ್ರದುರ್ಗ, ತುಮಕೂರು-1, ತುಮಕೂರು-2, ಸಿರಾ, ಚನ್ನಪಟ್ಟಣ, ಆನೇಕಲ್, ಮುಳುಬಾಗಿಲು, ಬಂಗಾರಪೇಟೆ, ಗೌರಿಬಿದನೂರು, ಹೊಸಕೋಟೆ, ದೊಡ್ಡಬಳ್ಳಾಪುರ, ಕೆ.ಜಿ.ಎಫ್, ಚಳ್ಳಕೆರೆ, ಕುಣಿಗಲ್, ಹರಪ್ಪನಹಳ್ಳಿ, ಹರಿಹರ, ಹಿರಿಯೂರು ಮತ್ತು ತಿಪಟೂರು ನಗರ ಉಪ ವಿಭಾಗಗಳ ವ್ಯಾಪ್ತಿಗಳಲ್ಲಿ ಆನ್‌ಲೈನ್ ಸೇವೆಗಳು ಲಭ್ಯ ಇರುವುದಿಲ್ಲ ಎಂದು ತಿಳಿಸಿದೆ.












Click it and Unblock the Notifications