Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಜನವರಿ 28 & 29ರಂದು ಕರೆಂಟ್ ಕಟ್
Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಜನವರಿ 28 & 29ರಂದು ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದರೆ ಇದಕ್ಕೆ ಕಾರಣ ಏನು ಹಾಗೂ ಎಲ್ಲೆಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಕೆಪಿಟಿಸಿಎಲ್ ವತಿಯಿಂದ 66/11ಕೆವಿ ಬಿಎಂಟಿಸಿ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ನಗರದ ಈ ಕೆಳಕಂಡ ಪ್ರದೇಶಗಳಲ್ಲಿ ಮಂಗಳವಾರ (ಜನವರಿ 28) ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಜನವರಿ 28ರಂದು ಎಲ್ಲೆಲ್ಲಿ ಕರೆಂಟ್ ಕಟ್?: ಯು.ಬಿ. ಸಿಟಿ, ಐ.ಟಿ.ಸಿ ಹೋಟೆಲ್, ಲ್ಯಾವೆಲ್ಲೆ ರಸ್ತೆ, ವಿಠ್ಠಲ್ ಮಲ್ಯ ರಸ್ತೆ, ಹೊಂಬೇಗೌಡ ನಗರ, ಸಂಪಗಿ ನಗರ, ಜೆ.ಸಿ.ರೋಡ್, ಶಾಂತಿನಗರ, ಬಿಟಿಎಸ್ ರೋಡ್, ರಿಚ್ಮಂಡ್ ಸರ್ಕಲ್, ರೆಸಿಡೆನೆಸ್ಸಿ ರೋಡ್, ಸುಧಾಮನಗರ, ಕೆ.ಎಚ್.ರೋಡ್, ವೀಲ್ಸನ್ ಗಾರ್ಡನ್, ಡಬಲ್ ರೋಡ್, ಲಾಲಬಾಗ್ ರೋಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಕಟ್ಟಾಗಲಿದೆ ಎಂದು ತಿಳಿಸಿದೆ.
ಜನವರಿ 29ರಂದು ಎಲ್ಲೆಲ್ಲಿ ಕರೆಂಟ್ ಕಟ್?: ಬುಧವಾರ (ಜನವರಿ 29) ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. 66/11ಕೆ.ವಿ ಬಾಣಸವಾಡಿ ಸ್ಟೇಷನ್‌ನಲ್ಲಿ ತುರ್ತುನಿರ್ವಹಣಾ ಕಾಮಗಾರಿ ಹಿನ್ನೆಲೆ ಬೆಳಗ್ಗೆ 10:30ರಿಂದ ಸಂಜೆ 5:30 ಗಂಟೆವರೆಗೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.
ಹೊರಮಾವು ಪಿ ಆ್ಯಂಡ್ ಟಿ ಲೇಔಟ್, ನಿಸರ್ಗ ಕಾಲೋನಿ, ನಂದನ ಕಾಲೋನಿ, ಆಶೀರ್ವಾದ್ ಕಾಲೋನಿ, ಜ್ಯೋತಿನಗರ, ಆಗರ, ಬಾಲಾಜಿ ಲೇಔಟ್, ಕೋಕೋನಟ್‌ಗ್ರೋವ್, ವಿಜಯ ಬ್ಯಾಂಕ್ ಕಾಲೋನಿ, ಹೆಚ್.ಆರ್.ಬಿ.ಆರ್. ಲೇಔಟ್, 1ನೇ ಬ್ಲಾಕ್, 2ನೇ ಬ್ಲಾಕ್, 3ನೇ ಬ್ಲಾಕ್, ಕಮ್ಮನಹಳ್ಳಿ ಮುಖ್ಯರಸ್ತೆ.
ಕಲ್ಯಾಣನಗರ, ಬಿ.ಡಬ್ಲ್ಯೂಯ.ಎಸ್. ಎಸ್.ಬಿ ವಾಟರ್‌ಟ್ಯಾಂಕ್, ಹೆಣ್ಣೂರು ಗ್ರಾಮ, ಚೆಳ್ಳಿಕೆರೆ, ಮೇಘನ ಪಾಳ್ಯ, ಗೆದ್ದಲಹಳ್ಳಿ, ಕೊತ್ತನೂರು, ವಡ್ಡರ ಪಾಳ್ಯ, ಜಾನಕೀರಾಮ್ ಲೇಔಟ್, ಬಿ.ಡಿ.ಎಸ್. ಗಾರ್ಡನ್, ಸತ್ಯಎನ್‌ಕ್ಲೇವ್, ಪ್ರಕೃತಿ ಲೇಔಟ್ ಹೊಯ್ಸಳನಗರ, ಬೃಂದಾವನ ಲೇಔಟ್, ವಿನಾಯಕ ಲೇಔಟ್, ವಿವೇಕಾನಂದ ಲೇಔಟ್, ಮಂಜುನಾಥನಗರ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶದಗಳಲ್ಲಿ ಕರೆಂಟ್ ಕಟ್ ಆಗಲಿದೆ ಎಂದು ತಿಳಿಸಿದೆ.
ಎನ್.ಆರ್.ಐ ಲೇಔಟ್, ಸುಂದರಾಜನೇಯ ದೇವಸ್ಥಾನ, ಡಬಲ್ ರಸ್ತೆ, ಪುಣ್ಯಭೂಮಿ ಲೇಔಟ್, ಸಮದ್ ಲೇಔಟ್, ಯಾಸಿನ್‌ನಗರ, ಪಿ.ಎನ್.ಎಸ್. ಲೇಔಟ್, ಕುಳ್ಳಪ್ಪ ಸರ್ಕಲ್, 5ನೇ ಮುಖ್ಯರಸ್ತೆ, ಹೆಚ್.ಬಿ.ಆರ್. ರಾಜ್‌ಕುಮಾರ್ ಪಾರ್ಕ್, ಸಂಗೊಳ್ಳಿ ರಾಯಣ್ಣರಸ್ತೆ, ನೆಹರು ರಸ್ತೆ, 80 ಅಡಿ ರಸ್ತೆ, ಕಮ್ಮನಹಳ್ಳಿ ಮುಖ್ಯರಸ್ತೆ, ಮರಿಯಪ್ಪ ಸರ್ಕಲ್.
ಕೆ.ಕೆ.ಹಳ್ಳಿ ಡಿಪೋ, ಸಿ.ಎಂ.ಆರ್.ರಸ್ತೆ, ನಂಜುಂಡಪ್ಪ ರಸ್ತೆ, ರಾಮಯ್ಯ ಲೇಔಟ್, ಅಜಮಲ್ಲಪ್ಪ ಲೇಔಟ್, ದೊಡ್ಡ ಬಾಣಸವಾಡಿ, ರಾಮಮೂರ್ತಿನಗರ ಮುಖ್ಯರಸ್ತೆ, ಕೃಷ್ಣರೆಡ್ಡಿ ಲೇಔಟ್, ಗೋಪಾಲರೆಡ್ಡಿ ಲೇಔಟ್, ಚಿಕ್ಕ ಬಾಣಸವಾಡಿ, ಸುಬ್ಬಯ್ಯನಪಾಳ್ಯ, ಓ.ಎಂ.ಬಿ.ಆರ್. 2ನೇ, 5ನೇ, 6ನೇ ಕ್ರಾಸ್, 100 ಅಡಿ ರಸ್ತೆ ಬಾಣಸವಾಡಿ, ಗ್ರೀನ್ ಪಾರ್ಕ್ ಲೇಔಟ್ ಫ್ಲವರ್‌ಗಾರ್ಡನ್.
ಎಂ.ಎ.ಗಾರ್ಡನ್, ಪ್ರಕೃತಿ ಟೌನ್‌ಶಿಪ್, ಮಲ್ಲಪ್ಪ ಲೇಔಟ್ ಮತ್ತು ಸುತ್ತಲಿನ ಪ್ರದೇಶ, ಬೈರತಿ, ಕ್ಯಾಲಸನಹಳ್ಳಿ ಗ್ರಾಮ, ನಕ್ಷತ್ರ ಲೇಔಟ್, ಬೈರತಿ ಬಂಡೆ, ಸಂಗಂ ಎನ್‌ಕ್ಲೇವ್, ಅಥಂ ವಿದ್ಯಾನಗರ, ಬೈರತಿಹಳ್ಳಿ, ಕನಕಶ್ರೀ ಲೇಔಟ್, ಗುಬ್ಬಿಕ್ರಾಸ್, ಬ್ಯಾಂಕ್ ಅವೆನ್ಯೂ ಲೇಔಟ್, ನಂಜಪ್ಪ ಗಾರ್ಡನ್, ಸಿ.ಎನ್.ಆರ್. ಲೇಔಟ್, ಆರ್.ಎಸ್.ಪಾಳ್ಯ, ಹನುಮಂತಪ್ಪ ರಸ್ತೆ.
ಮುನೆಗೌಡ ರಸ್ತೆ, ಸತ್ಯಮೂರ್ತಿ ರಸ್ತೆ, ಜೆ.ವಿ.ಶೆಟ್ಟಿ ರಸ್ತೆ, ಕುವೆಂಪು ರಸ್ತೆ, ಸದಾಶಿವ ದೇವಸ್ಥಾನದ ರಸ್ತೆ, ಗುರುಮೂರ್ತಿ ರಸ್ತೆ, ಬಂಜಾರ ಲೇಔಟ್, ಬೆಥೆಲ್ ಲೇಔಟ್, ಸಮೃದ್ಧಿ ಲೇಔಟ್, ವಾಟರ್ ಟ್ಯಾಂಕ್, ಜಯಂತಿನಗರ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.












Click it and Unblock the Notifications