Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಬುಧವಾರ ಸಂಜೆ 6 ಗಂಟೆಯವರೆಗೆ ಕರೆಂಟ್ ಕಟ್
Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಇದೀಗ ಇಂದು (ಜನವರಿ 21) ಬೆಂಗಳೂರಿನ ಹಲವು ಭಾಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ಕಡಿತವಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ, ಸಮಯ ಹಾಗೂ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಎಷ್ಟು ಗಂಟೆಯವರೆಗೂ ಕರೆಂಟ್ ಕಟ್?: 66/11ಕೆ.ವಿ ಬಾಣಸವಾಡಿಯ ಉಪಕೇಂದ್ರ ವ್ಯಾಪ್ತಿಯಲ್ಲಿ ತುರ್ತು ನಿರ್ವಾಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆ ಜನವರಿ 21ರ ಬುಧವಾರ ನಗರದ ಹಲವೆಡೆ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?: ಎಚ್ಆರ್‌ಬಿಆರ್ ಲೇಔಟ್ 1ನೇ ಬ್ಲಾಕ್, 2ನೇ ಬ್ಲಾಕ್, 3ನೇ ಬ್ಲಾಕ್, ಸರ್ವೀಸ್ ರಸ್ತೆ, ಕಮ್ಮನಹಳ್ಳಿ ಮುಖ್ಯರಸ್ತೆ, ಸಿಎಂಆರ್ ರಸ್ತೆ, ಬಾಬುಸಾಪಾಳ್ಯ, ಬಾಲಚಂದ್ರ ಲೇಔಟ್, ಫ್ಲವರ್ ಗಾರ್ಡನ್, ಎಂಎಂ ಗಾರ್ಡನ್, ಆರ್ಕಾವತಿ ಲೇಔಟ್, ಅಂಜನಾದ್ರಿ ಲೇಔಟ್ ಎನ್‌ಕ್ಲೇವ್, ದಿವ್ಯ ಉನ್ನತಿ ಲೇಔಟ್, ವಿಜಯೇಂದ್ರ ಗಾರ್ಡನ್, ಮಲ್ಲಪ್ಪ ಲೇಔಟ್, ಪ್ರಕೃತಿ ಟೌನ್‌ಶಿಪ್, ಬಾಲಾಜಿ ಲೇಔಟ್, ಜಿಎನ್ಆರ್ ಗಾರ್ಡನ್.
ಸಮುದ್ರಿಕಾ ಎನ್‌ಕ್ಲೇವ್, 100 ಅಡಿ ರಸ್ತೆ, 80 ಅಡಿ ರಸ್ತೆ, ಸುಬ್ಬಯ್ಯನಪಾಳ್ಯ, ಹೊರಮಾವು, ಮುನಿರೆಡ್ಡಿ ಲೇಔಟ್, ವಿಜಯ ಬ್ಯಾಂಕ್ ಕಾಲೋನಿ, ನಿಸರ್ಗ ಕಾಲೋನಿ, ನಂದನಂ ಕಾಲೋನಿ, ಅಮರ್ ಏಜೆನ್ಸಿ ಲೇಔಟ್, ಪಿ & ಟಿ ಲೇಔಟ್, ಪಾಪಯ್ಯ ಲೇಔಟ್, ಕೊಕನಟ್ ಗ್ರೋವ್ ಲೇಔಟ್, ಆಶೀರ್ವಾದ್ ಕಾಲೋನಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಕಟ್ ಆಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಶಕ್ತಿ ನಗರ, ಹೆಣ್ಣೂರು ವಿಲೇಜ್, ಬೈರವೇಶ್ವರ ಲೇಔಟ್, ಚಿಕ್ಕಣ್ಣ ಲೇಔಟ್, ಸಿಎಂಆರ್ ಲೇಔಟ್, ಹೆಣ್ಣೂರು ಕ್ರಾಸ್, ಕೆಂಚಪ್ಪ ಗಾರ್ಡನ್, ಬೃಂದಾವನ ಲೇಔಟ್, ಹೊಯ್ಸಳ ನಗರ, ಬೃಂದಾವನ ಅವೆನ್ಯೂ ಹೆರಿಟೇಜ್, ವಿನಾಯಕ ಲೇಔಟ್, ಜಯಂತಿ ಗ್ರಾಮ, ಬಿಡಿಎ ಕಾಂಪ್ಲೆಕ್ಸ್ ಎದುರು, ನರೇಂದ್ರ ಟೆಂಟ್ ಹತ್ತಿರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಓಎಂಬಿಆರ್ ಲೇಔಟ, ಕಸ್ತೂರಿ ನಗರ, ಪಿಲ್ಲರೆಡ್ಡಿ ನಗರ, ಕರಾವಳ್ಳಿ ರಸ್ತೆ, ರಾಮಯ್ಯ ಲೇಔಟ್, ಅಜ್ಮಲ್ಲಪ್ಪ ಲೇಔಟ್, ದೊಡ್ಡ ಬಾಣಸವಾಡಿ, ರಾಮಮೂರ್ತಿ ನಗರ ಮೇನ್ ರೋಡ್, ಬಿ.ಚನ್ನಸಂದ್ರ, ನಂಜಪ್ಪ ಗಾರ್ಡನ್, ಅಗಾರೆ ಮೇನ್ ರೋಡ್, ದೊಡ್ಡಯ್ಯ ಲೇಔಟ್, ಬ್ಯಾಂಕ್ ಅವೆನ್ಯೂ, ಆರ್.ಎಸ್.ಪಾಳ್ಯ, ಎಡಿಎಂಸಿ ಮಿಲಿಟರಿ ಗೇಟ್, ಮುನಿಸ್ವಾಮಿ ರಸ್ತೆ, ಮುನಿ ವೀರಪ್ಪ ರಸ್ತೆ.
ಕುಳ್ಳಪ್ಪ ಸರ್ಕಲ್, ರಾಜಕುಮಾರ್ ಪಾರ್ಕ್, ಮೇಘನಾ ಪಾಳ್ಯ, ಮುನಿಸ್ವಾಮಪ್ಪ ಲೇಔಟ್, ಬಂಜಾರಾ ಲೇಔಟ್, ವಿಜಯಲಕ್ಷ್ಮೀ ಲೇಔಟ್, ಟ್ರಿನಿಟಿ ಎನ್‌ಕ್ಲೇವ್, ಸಂಕಲ್ಪ ಲೇಔಟ್, ಗ್ರೀನ್ ಗಾರ್ಡನ್ ಫೇಸ್-2, ಸಮೃದ್ಧಿ ಲೇಔಟ್, ಬೆಥೆಲ್ ಲೇಔಟ್, ಎಸ್ಎಲ್‌ವಿ ಲೇಔಟ್, ಎಸ್ಎಲ್ಎಸ್ ಸ್ಪೆನ್ಸರ್ ಅಪಾರ್ಟ್‌ಮೆಂಟ್, ಡಿಎಸ್-ಮ್ಯಾಕ್ಸ್ ಅಪಾರ್ಟ್‌ಮೆಂಟ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಗ್ರಾಹಕರಿಗೆ ಸಲಹೆ: ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆಯೋ ಅಂತಹ ಪ್ರದೇಶಗಳ ನಿವಾಸಿಗಳು ಮುಂಜಾಗ್ರತಾ ಕ್ರಮವಾಗಿ ಮೊಬೈಲ್, ಲ್ಯಾಪ್‌ಟ್ಯಾಪ್, ಬ್ಯಾಟರಿ ಸೇರಿದಂತೆ ಇನ್ನಿತರೆ ಚಾರ್ಜಿಂಗ್ ಸಾಧನಗಳನ್ನು ಮುಂಚಿತವಾಗಿ ಚಾರ್ಜ್ ಮಾಡಿಟ್ಟುಕೊಳ್ಳುವಂತೆ ಸಲಹೆ ನೀಡಲಾಗಿದೆ. ಗ್ರಾಹಕರು ಹೆಚ್ಚಿನ ಮಾಹಿತಿಗಾಗಿ ಬೆಸ್ಕಾಂ ಸಹಾಯವಾಣಿ ಸಂಖ್ಯೆ 1912ಕ್ಕೆ ಕರೆ ಮಾಡಬಹುದು ಅಂತಲೂ ತಿಳಿಸಲಾಗಿದೆ.












Click it and Unblock the Notifications