Bengaluru Power Cut: ಬೆಂಗಳೂರಿನ ಈ ಭಾಗಗಳಲ್ಲಿ ಡಿಸೆಂಬರ್ 22ರ ಸೋಮವಾರ ವಿದ್ಯುತ್ ಪೂರೈಕೆ ಕಡಿತ
Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಕರೆಂಟ್ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಇದೀಗ ಡಿಸೆಂಬರ್ 22ರ ಸೋಮವಾರ ಬೆಂಗಳೂರಿನ ಈ ಭಾಗಗಳಲ್ಲಿ ಕರೆಂಟ್ ಕಟ್ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ, ಸಮಯ ಹಾಗೂ ಕಾರಣ ಏನು ಎಂದು ತಿಳಿಯಿರಿ.
ಕೆಪಿಟಿಸಿಎಲ್ ವತಿಯಿಂದ ತುರ್ತುನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆ ಡಿಸೆಂಬರ್ 22ರ ಸೋಮವಾರ ನಗರದ ಹಲವು ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ. ಹಾಗಾದ್ರೆ, ಎಲ್ಲೆಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಎಲ್ಲೆಲ್ಲಿ ಪವರ್ ಕಟ್?: ಪ್ರೆಸ್ಟೀಜ್ ಫಾಲ್ಕಾನ್ ಸಿಟಿ ಉಪಕೇಂದ್ರ ವ್ಯಾಪ್ತಿಯಲ್ಲಿ ತುರ್ತುನಿರ್ವಹಣಾ ಕಾಮಕಾರಿ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆ ಪೋರಮ್ ಮಾಲ್, ಫ್ರೇಸ್ಟೀಜ್ ಪಾಲ್ಕಾನ್ ಸಿಟಿ, ದೊಡ್ಡಕಲ್ಲಸಂದ್ರ, ಕನಕಪುರ ಮುಖ್ಯರಸ್ತೆ, ನಾರಾಯಣ ನಗರ 3ನೇ ಬ್ಲಾಕ್, ಮುನಿ ರೆಡ್ಡಿ ಲೇಔಟ್, ಕುಮಾರನ್ಸ್ ಶಾಲೆ, ಜೋತಿ ಲೇಔಟ್, ಗಂಗಪತಿಪುರ, ಸುಪ್ರಜ ನಗರ, ಜೆಎಸ್ಎಸ್ ಶಾಲೆ ಸುತ್ತಮುತ್ತಲ ಪ್ರದೇಶಗಳಲಿಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.
ಅಲ್ಲದೆ, ಕೋಣನಕುಂಟೆ ಸರ್ಕಾರಿ ಶಾಲೆ, ಜರಗನಹಳ್ಳಿ, ಗಂಗಾಧರೇಶ್ವರ ದೇವಸ್ಥಾನ, ಬಸವರಾಜು ಲೇಔಟ್, ರಾಜೀವ್ ಗಾಂಧಿ ರಸ್ತೆ, ಸಾರಕ್ಕಿ ಕೆರೆ, ಸಾರಕ್ಕಿ ಸಿಗ್ನಲ್, ನಾಗಜು 9ನೇ ಪ್ರೀಮಿಯರ್ ಪಾರ್ಟ್‌ಮೆಂಟ್, ಚುಂಚಗಟ್ಟ, ಶ್ರೀನಿಧಿ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಕಟ್ ಆಗಲಿದೆ ಎಂದು ತಿಳಿಯಿರಿ.
ಶನಿವಾರ ಎಲ್ಲೆಲ್ಲಿ ವಿದ್ಯುತ್ ಕಡಿತ?: ನಿಮ್ಹಾನ್ಸ್, ಜಯದೇವ, ಆರ್.ಆರ್.ನಗರ, ಬನಶಂಕರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡಿಸೆಂಬರ್ 20ರ ಬೆಳಗ್ಗೆ 10ರಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ನಿಮ್ಹಾನ್ಸ್, ಕಿದ್ವಾಯ್, ರಾಜೀವ್ ಗಾಂಧಿ, ಸಂಜಯ್ ಗಾಂಧಿ, ಇಂದಿರಾ ಗಾಂಧಿ, ಜಯನಗರ 1ನೇ, 2ನೇ, 3ನೇ, 4ನೇ, 9ನೇ ಟಿ ಬ್ಲಾಕ್, ಸೋಮೇಶ್ವರ ನಗರ, ವಿಲ್ಸನ್ ಗಾರ್ಡನ್ ಮತ್ತು ಬನ್ನೇರುಘಟ್ಟ ರಸ್ತೆ, ಆರ್‌ವಿ ರಸ್ತೆ, ಐಎಎಸ್ ಕಾಲೋನಿ, ಕೆಎಎಸ್ ಕಾಲೋನಿ, ಎನ್ಎಸ್ ಪಾಳ್ಯ ಕೈಗಾರಿಕಾ ಪ್ರದೇಶ, ಜಾನ್ವಿ ಎನ್‌ಕ್ಲೇವ್, ಅನಂತ್ ಲೇಔಟ್, ಬಿಳೇಕಹಳ್ಳಿ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಕಟ್ ಆಗಲಿದೆ ಎಂದು ತಿಳಿಸಿದೆ.
ಬಿಳೇಕಹಳ್ಳಿ ಮುಖ್ಯ ರಸ್ತೆ, 4ನೇ ಟಿ ಬ್ಲಾಕ್ ಜಯನಗರ, 9ನೇ ಬ್ಲಾಕ್ ಜಯನಗರ, ಬಿಎಚ್ಇಎಲ್ ಲೇಔಟ್, ಎಸ್ಆರ್‌ಕೆ ಗಾರ್ಡನ್ಸ್, ಎನ್ಎಎಲ್ ಲೇಔಟ್, ತಿಲಕ್ ನಗರ, 9ನೇ ಬ್ಲಾಕ್ ಜಯನಗರ, ಭಾಗಶಃ 4ನೇ ಟಿ ಬ್ಲಾಕ್, ಶಾಂತಿ ಪಾರ್ಕ್ ಮತ್ತು ಅಪಾರ್ಟ್‌ಮೆಂಟ್, ಜಯದೇವ ಆಸ್ಪತ್ರೆ, ಎನ್ಎಸ್ ಪಾಳ್ಯ ಮುಖ್ಯ ರಸ್ತೆ, ಜಿಆರ್‌ಬಿ ಮುಖ್ಯ ರಸ್ತೆ.
ಜೈನ ದೇವಾಲಯ ರಸ್ತೆ, ಬಿಟಿಎಂ 4ನೇ ಹಂತದ ಕೆಲವೆಡೆ, ವೈಶ್ಯ ಬ್ಯಾಂಕ್ ಕಾಲೋನಿ, ಬಿಟಿಎಂ 2ನೇ ಹಂತ, ಎಂಸಿಎಚ್ಎಸ್ ಲೇಔಟ್, ಬಿಎಚ್‌ಸಿಎಸ್ ಲೇಔಟ್, ಶಾಂತಿನಿಕೇತನ ಶಾಲೆ, ಮೈಕೋ ಲೇಔಟ್, 7ನೇ ಮುಖ್ಯ, ಮಂತ್ರಿ ಅಪಾರ್ಟ್‌ಮೆಂಟ್, ಒರಾಕಲ್, ಗುರಪ್ಪನಪಾಳ್ಯ, ಟಿಂಬರ್ ಗಲ್ಲಿ ರಸ್ತೆ, ಬಿಸ್ಮಿಲ್ಲಾ ನಗರ, ಶೋಭಾ ಅಪಾರ್ಟ್‌ಮೆಂಟ್.
ದಿವ್ಯಶ್ರೀ ಟವರ್ಸ್, ವೇಗಾ ಸಿಟಿ ಮಾಲ್, ಏರ್‌ಟೆಲ್ ಕಚೇರಿ, ಬನ್ನೇರುಘಟ್ಟ ಮುಖ್ಯರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಕೆಇಬಿ ಕಾಲೋನಿ, ಬಿಟಿಂ 1ನೇ ಹಂತ, ಭಾರತ್ ಲೇಔಟ್, ಉತ್ತರಹಳ್ಳಿ, ವಡ್ಡರಪಾಳ್ಯ ಪ್ರದೇಶ, ಬನಶಂಕರಿಯ ಹಲವೆಡೆ, ಪೂರ್ಣ ಪ್ರಜ್ಞಾ ಲೇಔಟ್, ಮಂತ್ರಿ ಆಲ್ಫೈನ್ಸ್, ದ್ವಾರಕಾನಗರ, ಬನಶನಕರಿ 6ನೇ ಹಂತ, ಶ್ರೀನಗರ, ಹೊಸಕೆರೆಹಳ್ಳಿ, ಬ್ಯಾಂಕ್ ಕಾಲೋನಿ, ವೀರಭದ್ರ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ತ್ಯಾಗರಾಜ ನಗರ, ಬಸವನಗುಡಿ, ಬಿಎಸ್‌ಕೆ 3ನೇ ಹಂತ, ಕತ್ರಿಗುಪ್ಪೆ, ಗಿರಿನಗರ 4ನೇ ಹಂತ, ಐಟಿಐ ಲೇಔಟ್, 100 ಅಡಿ ವರ್ತುಲ ರಸ್ತೆ, ಕಾಮಕ್ಯ, ಎಲಿಟಾ ವಾಯುವಿಹಾರ ಅಪಾರ್ಟ್‌ಮೆಂಟ್‌ಗಳು, ಕೆ.ಆರ್.ಲೇಔಟ್, ಶಾರದ ನಗರ, ಚುಂಚುಘಟ್ಟ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದೆ.












Click it and Unblock the Notifications