Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಶನಿವಾರ ಕರೆಂಟ್‌ ಕಟ್‌

Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳ ಹಾಗೂ ಅತೀ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಶನಿವಾರ (ಡಿಸೆಂಬರ್ 21) ಹಲವು ಪ್ರದೇಶಗಳಲ್ಲಿ ಕರೆಂಟ್‌ ಕಟ್‌ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಬೆಸ್ಕಾಂ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ಬೆಂಗಳೂರಿನಲ್ಲಿ ಸಹಕಾರ ನಗರ, ಬನಶಂಕರಿ, ಎಲೆಕ್ಟ್ರಾನಿಕ್‌ ಸಿಟಿ, ಕೋರಮಂಗಲ, ಬಿಟಿಎಂ ಸೇರಿದಂತೆ ಹಲವು ಪ್ರಮುಖ ಪ್ರದೇಶಗಳಲ್ಲಿ ಶನಿವಾರ ವಿದ್ಯುತ್ ವ್ಯತ್ಯಯ ಉಂಟಾಲಿದೆ ಎಂದು ತಿಳಿದುಬಂದಿದೆ.

Power Cut in Bengaluru s These Areas on December 21 Know details

ಈ ಬಗ್ಗೆ ಬೆಸ್ಕಾಂ ಮಾಹಿತಿ ನೀಡಿದ್ದು, ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾರ್ಯವನ್ನು ಹಮ್ಮಿಕೊಂಡಿರುವ ಹಿನ್ನೆಲೆ 66/11 ಕೆವಿಎ ಸಹಕಾರನಗರ ಕೇಂದ್ರದಲ್ಲಿನ ಪ್ರದೇಶಗಳಲ್ಲಿ ಡಿಎಂಬರ್ 21, 2024ರ ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.

ಸಹಕಾರ ನಗರದ ಎಬ್ಲಾಕ್, ಇ ಬ್ಲಾಕ್, ಬಳ್ಳಾರಿ ಮುಖ್ಯ ರಸ್ತೆ, ಎಫ್ ಬ್ಲಾಕ್, ತಲಕಾವೇರಿ ಲೇಔಟ್, ಅಮೃತಹಳ್ಳಿ, ಬಿಜಿಎಸ್ ಲೇಔಟ್, ನವ್ಯ ನಗರ ಬ್ಲಾಕ್, ಶಬರಿ ನಗರ ಬೈತರಾಯನಪುರ, ಜಕ್ಕೂರು ಬಡಾವಣೆ, ಜಿಕೆವಿಕೆ ಲೇಔಟ್, ಜಕ್ಕೂರು ಪ್ಲಾಂಟೇಶನ್, ಯೋಷಾದ ನಗರಾಮೃತಹಳ್ಳಿ, ಡಿ ಅಮೃತಹಳ್ಳಿ ಬಿ ಬ್ಲಾಕ್, ಸಿ ಬ್ಲಾಕ್, ಸಿಕ್ಯೂಎಎಲ್ ಲೇಔಟ್, ಡಿ ಬ್ಲಾಕ್, ಇ ಬ್ಲಾಕ್, ಸಂಪಿಗೆಹಳ್ಳಿ, ಅಗ್ರಹಾರ ಗ್ರಾಮ, ಜಯಸೂರ್ಯ ಲೇಔಟ್, ವಿಧಾನಸೌಧ ಲೇಔಟ್.

ಸಾಯಿಬಾಬಾ ಲೇಔಟ್, ಟೆಲಿಕಾಂ ಲೇಔಟ್, ಎಂಸಿಇಸಿಎಚ್ ಎಸ್ ಲೇಔಟ್, ಸುರ್ಯೋದಯ ನಗರ.2, ಅಗ್ರಹಾರ ಲೇಔಟ್, ಕೋಗಿಲು ಲೇಔಟ್, ಶ್ರೀನಿವಾಸಪುರ ಜಕ್ಕೂರು, ವಿಆರ್ ಲ್ ರಸ್ತೆ ( ಸಂತೆ ರಸ್ತೆ), ಐಎಎಸ್ ರಸ್ತೆ, ಅರ್ಕಾವತಿ ಲೇಔಟ್ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.

66/11 ಕೆವಿಎ ಎಲೆಕ್ಟ್ರಾನಿಕ್ ಸಿಟಿ ಫೇಸ್-2 ಕೇಂದ್ರದಲ್ಲಿನ ಪ್ರದೇಶಗಳಲ್ಲಿ ಶನಿವಾರ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಎಲೆಕ್ಟ್ರಾನಿಕ್ ಸಿಟಿ ಫೇಸ್-2, ವೀರಸಂದ್ರ, ದೊಡ್ಡನಾಗಮಂಗಳ, ಟೆಕ್ ಮಹೀಂದ್ರ, ಇ.ಹೆಚ್.ಟಿ.ಟಾಟಾ ಬಿ.ಪಿ ಸೋಲಾರ್, 12ನೇ ಹಂತ, 7ನೇ ಹಂತ, 11ನೇ ಹಂತದಲ್ಲಿ ವಿದ್ಯುತ್‌ ವ್ಯತ್ಯಯ ಆಗಲಿದೆ ಎಂದು ತಿಳಿಸಿದೆ.

ಬನಶಂಕರಿ ಸುತ್ತಮುತ್ತಲ ಪ್ರದೇಶಗಳಗಳಲ್ಲಿ ಶನಿವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಶ್ರೀನಗರ, ಹೊಸಕೆರೆಹಳ್ಳಿ, ಪಿಇಎಸ್ ಕಾಲೇಜು, ವೀರಬದ್ರನಗರ, ಬ್ಯಾಕ್ ಕಾಲೋನಿ, ಎನ್ ಟಿ ವೈ ಲೇಔಟ್, ತ್ಯಾಗರಾಜನಗರ, ಬಸವನಗುಡಿ, ಬಿ.ಎಸ್.ಕೆ 3ನೇ ಹಂತ, ಕತ್ತರಿಗುಪ್ಪೆ ಗಿರಿನಗರ 4ನೇ ಹಂತ, ಟಿಐ ಲೇಔಟ್, 100 ರಿಂಗ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಕೋರಮಂಗಲ ವಿಭಾಗದಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಐಬಿಮಂ, ಅಸ್ಸೆಂಚರ್, ಐಬಿಎಂ ಡಿ ಬ್ಲಾಕ್, ಗುರಪ್ಪನ ಪಾಳ್ಯ, ಸೋಬಾ ಮಜಾರಿಯಾ ಅಪಾರ್ಟ್‌ಮೆಂಟ್, ಬಿ.ಜಿ.ರಸ್ತೆ, ಬಿ.ಟಿ.ಎಂ 1ನೇ ಹಂತ, ವಕೀಲ್ ಸ್ಕೋಯರ್ ಬಿಲ್ಡಿಂಗ್, ಮಡಿವಾಳ ಮಾರುತಿ ನಗರ, ಭಿಸ್ಮಿಲ್ಲಾ ನಗರ, ಜೈಭೀಮ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+