Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಶನಿವಾರ & ಭಾನುವಾರ ಕರೆಂಟ್ ಕಟ್‌

Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದಂತಹ ಕಾಮಗಾರಿ, ಹೆಚ್ಚು ಮಳೆ ಬೀಳುವಂತಹ ಪ್ರದೇಶಗಲ್ಲಿ ವಿದ್ಯುತ್‌ ಕಟ್‌ ಮಾಡಲಾಗುತ್ತದೆ. ಇನ್ನು ಇದೀಗ ಡಿಸೆಂಬರ್ 14 ಹಾಗೂ 15 ಅಂದರೆ ವಾರಾಂತ್ಯದಲ್ಲಿ ಬೆಂಗಳೂರಿನ ಈ ಭಾಗಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದರೆ ಕಾರಣ ಏನು ಹಾಗೂ ಎಲ್ಲೆಲ್ಲಿ ಎಂದು ಇಲ್ಲಿ ಗಮನಿಸಿ.

ಬೆಸ್ಕಾಂ ತುರ್ತು ಕಾಮಗಾರಿ ಹಿನ್ನೆಲೆ ಶನಿವಾರ ಮತ್ತು ಭಾನುವಾರ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಬೆಳಿಗ್ಗೆಯಿಂದ ಸಂಜೆವರೆಗೂ ನಗರದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.

Power Cut in Bengaluru s These Areas on December 14 15 Know details

ಈ ಬಗ್ಗೆ ಮಾಹಿತಿ ನೀಡಿರುವ ಬೆಸ್ಕಾಂ, ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ 66/11 ಕೆವಿ ರೆಮಕೊ ಸ್ಟೇಷನ್‌ನಲ್ಲಿನ ಡಿಸೆಂಬರ್ 14 ಹಾಗೂ 15ರ ಬೆಳಗ್ಗೆ 10ರಿಂದ ಮಧ್ಯಾಹ್ನ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಡಿಸೆಂಬರ್ 14ರಂದು ಎಲ್ಲೆಲ್ಲಿ ಕರೆಂಟ್‌ ಕಟ್‌?: ಶನಿವಾರ ಮೈಸೂರು ರೋಡ್‌ 7ನೇ ಅಡ್ಡರಸ್ತೆ, ಶ್ಯಾಮಣ್ಣ ಗಾರ್ಡನ್‌, ಮಂಜುನಾಥ ನಗರ, ಪೈಪಲೈನ್, ಸಂತೋಷ ಟೆಂಟ್‌, ಅನಂತ ರಾಮಯ್ಯ ಕಂಪೌಡ್, ಹೊಸ ಮತ್ತು ಹಳೆ ಗುಡ್ಡದ ಹಳ್ಳಿ, ಕುವೆಂಪುನಗರ, 6ನೆ ಮತ್ತು 4ನೇ ಮೈಸೂರು ರೋಡ್‌ ಅಡ್ಡರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಡಿಸೆಂಬರ್ 14 & 15ರಂದು ಎಲ್ಲೆಲ್ಲಿ ಕರೆಂಟ್‌ ಕಟ್?: 66/11ಕೆ.ವಿ 'ಸಿ' ಸ್ಟೇಷನ್‌ನಲ್ಲಿನ ಹಲವು ಪ್ರದೇಶಗಳಲ್ಲಿ ಶನಿವಾರ ಮತ್ತಯ ಭಾನುವಾರ ರಂದು ಬೆಳಗ್ಗೆ 5ರಿಂದ ರಾತ್ರಿ 9 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ. ಬೆನ್ಸನ್ ಟೌನ್, ಶಿವಾಜಿನಗರ, ವಸಂತ ನಗರ, ಎಸ್.ಜಿ.ರಸ್ತೆ, ಟಾಸ್ಕರ್ ಟೌನ್, ಪಿ.ಜಿ.ಹಳ್ಳಿ, ಚಂದ್ರಯ್ಯ, ಕ್ವೀನ್ಸ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.

ಮೂರು ದಿನ ಕರೆಂಟ್‌ ಕಟ್: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಈ ಹಿನ್ನೆಲೆ ಕೋರಮಂಗಲ ವಿಭಾಗದ ದೇವರಬೀಸನಹಳ್ಳಿ ಮತ್ತು ಆಡುಗೋಡಿ ಉಪಕೇಂದ್ರ ದಲ್ಲಿನ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿತ್ತು.

ಡಿಸೆಂಬರ್ 13ರಂದು ಎಲ್ಲೆಲ್ಲಿ ವಿದ್ಯುತ್‌ ಕಟ್?: ಬೆಂಗಳೂರು ಉತ್ತರ ವೃತ್ತ ಅಟ್ಟೂರು ಯಲಹಂಕ ಎಂಯುಎಸ್ ಎಸ್ ದಲ್ಲಿನ ಈ ಕೆಳಕಂಡ ಪ್ರದೇಶಗಳಲ್ಲಿ ಶುಕ್ರವಾರ (ಡಿಸೆಂಬರ್ 13) ಬೆಳಗ್ಗೆ 11ರಿಂದ ಮಧ್ಯಾಹ್ನ 05 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.

ಕೋರಮಂಗಲ ವಿಭಾಗದಲ್ಲಿ ಮತ್ತು ಕೆ.ಎಂ.ಎಫ್, ಮದರ್ ಡೈರಿ, ಎಸ್.ಎಫ್.ಎಸ್ 208, ಎಸ್.ಎಫ್.ಎಸ್ 407 ಉನ್ನಿಕೃಷ್ಣನ್ ರಸ್ತೆ, ಬಿ ಸೆಕ್ಟರ್, ಎನ್.ಇ.ಎಸ್ ರಸ್ತೆ, ಸಿ.ಎಂ ಎನ್ಕ್ಲೇವ್, ಮಾತೃ ಲೇಔಟ್, ಸೋಮೇಶ್ವರನಗರ, ಕನಕನಗರ, ನ್ಯಾಯಾಂಗ ಬಡಾವಣೆ, ಯಲಹಂಕ ಓಲ್ಡ್ ಟೌನ್, ಗಾಂಧಿ ನಗರ, ಹಳೆಯ ಪಟ್ಟಣ ಬಿಬಿಎಂಪಿ ರಸ್ತೆ, ಕರೆ, ಬಿಬಿಎಂಪಿ ರಸ್ತೆ ಕೋಡಿ ರೋಡ್, ಪುರವಂಕರ, ಅಪಾರ್ಟ್‌ಮೆಂಟ್ ಆರ್.ಎಂ.ಝೆಡ್ ಮಾಲ್, ಆರ್.ಎಂ.ಝಡ್ ರೆಸಿಡೆನ್ಸಿಯಲ್ ಅಟ್ಟೂರು ಯಲಹಂಕ ಎಂಯುಎಸ್ ಎಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಕಟ್‌ ಆಗಲಿದೆ ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+