Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಶನಿವಾರ, ಭಾನುವಾರ ಕರೆಂಟ್ ಕಟ್

Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳ ಹಾಗೂ ಅತೀ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಆಗಸ್ಟ್‌ 30 ಹಾಗೂ 31ರಂದು ನಗರದ ಹಲವು ಪ್ರದೇಶಗಳಲ್ಲಿ ಕರೆಂಟ್‌ ಕಟ್‌ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದರೆ ಎಲ್ಲೆಲ್ಲಿ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆ ನಗರದ ಈ ಕೆಳಕಂಡ ಪ್ರದೇಶಗಳಲ್ಲಿ ಆಗಸ್ಟ್‌ 30ರಂದು ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಅಲ್ಲದೆ, ವಿದ್ಯುತ್ ಕಡಿತಗೊಳ್ಳುವ ಪ್ರದೇಶದ ನಿವಾಸಿಗಳಿಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಸೂಚನೆಗಳನ್ನು ಕೂಡ ನೀಡಿದೆ. ಹಾಗಾದ್ರೆ ಯಾವ್ಯಾವ ಪ್ರದೇಶಗಳಲ್ಲಿ ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

Power Cut in Bengaluru s These Areas on August 30 And 31 Know details

ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾರ್ಯ ಕೈಗೊಳ್ಳುತ್ತಿರುವ ಹಿನ್ನೆಲೆ ನಗರದ ಹಲವು ಭಾಗಗಳಲ್ಲಿ ಆಗಸ್ಟ್‌ 30ರ ಶನಿವಾರ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಬನಶಂಕರಿ ಮತ್ತು ಆರ್.ಆರ್. ನಗರ ಉಪಕೇಂದ್ರ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆ ಶನಿವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.

ಎಲ್ಲೆಲ್ಲಿ ಕರೆಂಟ್‌ ಕಟ್‌?: ಶ್ರೀನಗರ, ಹೊಸಕೆರೆಹಳ್ಳಿ, ಪಿಇಎಸ್ ಕಾಲೇಜ್, ವೀರಭದ್ರನಗರ, ಬ್ಯಾಂಕ್ ಕಾಲೋನಿ, ಹನುಮಂತನಗರ, ಗಿರಿನಗರ, ಸೀತಾ ಸರ್ಕಲ್, ವಿದ್ಯಾಪೀಠ ಸರ್ಕಲ್, ಪ್ರಮೋದ್ ಲೇಔಟ್, ಮುನೇಶ್ವರ ಬ್ಲಾಕ್, ನಾಗೇಂದ್ರ ಬ್ಲಾಕ್, ಬುಲ್ ಟೆಂಪಲ್ ರೋಡ್, ಕತ್ತರಿಗುಪ್ಪೆ, ಆವಲಹಳ್ಳಿ, ಸ್ಟೆರ್ಲಿಂಗ್ ಅಪಾರ್ಟ್‌ಮೆಂಟ್, ಎನ್‌ಟಿವೈ ಲೇಔಟ್, ತ್ಯಾಗರಾಜನಗರ, ಬಸವನಗುಡಿ, ಬಿ.ಎಸ್.ಕೆ 3ನೇ ಹಂತ, ಐಟಿಐ ಲೇಔಟ್ 100 ಫೀಟ್ ರಿಂಗ್ ರಸ್ತೆ.

ಕಾಮಾಕ್ಯ ಮತ್ತು ಭರತ್ ಲೇಔಟ್, ಪಟಾಲಮ್ಮ ದೇವಸ್ಥಾನ ಹಿಂಭಾಗ, ಹ್ಯಾಪಿ ವ್ಯಾಲಿ ಲೇಔಟ್, ವಿನಾಯಕ ಲೇಔಟ್, ಉತ್ತರಹಳ್ಳಿ, ಅಪ್ಪಯ್ಯಸ್ವಾಮಿ ಲೇಔಟ್, ವಡ್ಡರಪಾಳ್ಯ ಏರಿಯಾ, ಬನಶಂಕರಿ 5ನೇ ಹಂತ, ಪೂರ್ಣ ಪ್ರಜ್ಞಾ ಲೇಔಟ್, ದ್ವಾರಕ ನಗರ, ಬನಶಂಕರಿ 6ನೇ ಹಂತ, 80 ಫೀಟ್ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್‌ ಕಟ್‌ ಆಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ 66/11ಕೆ.ವಿ ಮಾನ್ಯತಾ ಉಪಕೇಂದ್ರ ವ್ಯಾಪ್ತಿಯಲ್ಲಿ ದಿನಾಂಕ ಶನಿವಾರ ಬೆಳಗ್ಗೆ 9ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಶೋಭಾ ನಗರ, ಚೊಕ್ಕನಹಳ್ಳಿ ಡೊಮಿನೊಸ್‌ ಪಿಜ್ಜಾ ದೇವ್ ಐಎನ್ಎನ್ ಪ್ಯಾರಡೈಸ್ ನೂರ್ ನಗರ, ಮಾಜಿ ಸೈನಿಕ ಲೇಔಟ್, ಪೊಲೀಸ್ ಕ್ವಾರ್ಟರ್ಸ್, ಆರ್ಕೆ ಹೆಗ್ಡೆ ನಗರ, ಶಬರಿ ನಗರ, ಹೊಸ ಶಾಂತಿ ನಗರ, ಕೆಂಪೇಗೌಡ ಲೇಔಟ್, ನಾಗೇನಹಳ್ಳಿ ಗ್ರಾಮ, ರೀಜೆನ್ಸಿ ಪಾರ್ಕ್, ಎಸ್ತರ್ ಹಾರ್ಮೋನಿಕ್ ಲೇಔಟ್, ಬಾಲಾಜಿ ಲಾಲಿ ಲೇಔಟ್, ಬಾಲಾಜಿ ಲಾಲಿ ಲೇಔಟ್, ಬಾಲಾಜಿ ಲಾಲಿ ಲೇಔಟ್ ಮಿತ್ತಗಾನಹಳ್ಳಿ ಮತ್ತು ಕೋಗಿಲು ಗ್ರಾಮ, ಬೆಲಹಳ್ಳಿ, ವಿಧಾನ ಸೌಧ ಲೇಔಟ್, ಕರ್ನಾಟಕ ಕಾಲೇಜು, ಇಂಡಿಯನ್ ಸಿಟಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ.

ಇನ್ನು 220/66/11ಕೆ.ವಿ ಐಟಿಐ ಉಪಕೇಂದ್ರ ವ್ಯಾಪ್ತಿಯಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಜೈ ಭುವನೇಶ್ವರ ಲೇಔಟ್, ಕೆಆರ್ ಪುರಂ ಮುಖ್ಯರಸ್ತೆ, ದೀಪಾ ಆಸ್ಪತ್ರೆ ಸುತ್ತಮುತ್ತ, ವಿನಾಯಕ ಲೇಔಟ್, ಅಜಿತ್ ಲೇಔಟ್, ಟಿಸಿ ಪಾಳ್ಯ ಸಿಗ್ನಲ್, ಭಟ್ಟರಹಳ್ಳಿ, ಚಿಕ್ಕಬಸವನಪುರ ಮತ್ತು ಯರಪ್ಪನ ಪಾಳ್ಯ. ಕುವೆಂಪು ನಗರ, ರಾಮಮೂರ್ತಿ ನಗರ, ಎನ್ಆಆರ್‌ ಲೇಔಟ್ ರಾಮಮೂರ್ತಿ ನಗರ, ಸಿಎಎನ್ವಿ ಲೇಔಟ್ ರಾಮಮೂರ್ತಿ ಮುಖ್ಯರಸ್ತೆ ರಾಘವೇಂದ್ರ ವೃತ್ತ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಆಲ್ಫಾ ಉದ್ಯಾನ, ರಾಜೇಶ್ವರಿ ಬಡಾವಣೆ, ಮುನೇಶ್ವರ ಬಡಾವಣೆ, ಆಲ್ಫಾ ಉದ್ಯಾನ ಬಡಾವಣೆ, ಕೋ ಕನಟ್ ಉದ್ಯಾನ, ಬೆಥೆಲ್ ನಗರ, ಬೃಂದಾವನ ಬಡಾವಣೆ, ಕೆಆರ್‌ಆರ್‌ ಬಡಾವಣೆ, ಕೇಂಬ್ರಿಡ್ಜ್ ಉದ್ಯಾನ ಬಡಾವಣೆ, ವಾರಣಾಸಿ ಸರೋವರ, ಗ್ಯಾಸ್ ಗುಡೌನ್ ಮುಖ್ಯ ರಸ್ತೆ, ಎನ್ಆರ್‌ಐ ಬಡಾವಣೆ 5ನೇ ಮುಖ್ಯ ರಸ್ತೆ, ಗ್ರೀನ್‌ವುಡ್ ಬಡಾವಣೆ, ಪ್ರತಿಷ್ಠಾನ ಬಡಾವಣೆ, ಗ್ರೀನ್ ಗಾರ್ಡನ್ ಬಡಾವಣೆ.

ಜೆಕೆ ಹಳ್ಳಿ ಗ್ರಾಮ, ಸನ್‌ಶೈನ್‌ ಬಡಾವಣೆ, ಗಾರ್ಡನ್ ಸಿಟಿ ಕಾಲೇಜು, ಲೇಕ್ ವ್ಯೂ ಸಿಟಿ, ಆನಂದಪುರ, ಮಾನ್ಸೂನ್ ಪಬ್ಲಿಕ್ ಸ್ಕೂಲ್ ರಸ್ತೆ, ಸಾಯಿ ಉದ್ಯಾನ, ಮದರ್ ಥೆರೆಸಾ ಶಾಲಾ ರಸ್ತೆ, ಟಿಸಿ ಪಾಳ್ಯ ಮುಖ್ಯ ರಸ್ತೆ, ಹೊಯಸಾಳ ನಗರ 1ನೇ ಮುಖ್ಯ, 2ನೇ ಮುಖ್ಯ, 3ನೇ ಮುಖ್ಯ ಮತ್ತು 6ನೇ ಮುಖ್ಯ ರಸ್ತೆ, ಬಿಡಬ್ಲ್ಯೂಎಸ್ಎಸ್‌ಬಿ ಮತ್ತು ರಾಮಮೂರ್ತಿ ಮುಖ್ಯ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಸಿಇದೆ.

66/11ಕೆ.ವಿ ಎಲೆಕ್ಟ್ರಾನಿಕ್ ಸಿಟಿ ಫೇಸ್-2 ಉಪಕೇಂದ್ರ ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಎಲೆಕ್ಟ್ರಾನಿಕ್ ಸಿಟಿ ಫೆಸ್-2, ವೀರಸಂದ್ರ, ದೊಡ್ಡನಾಗಮಂಗಲ, ಟೆಕ್ ಮಹಿಂದ್ರ, ಇ.ಹೆಚ್.ಟಿ. ಟಾಟಾ ಬಿ.ಪಿ ಸೋಲಾರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್‌ ಕಟ್‌ ಆಗಲಿದೆ ಎಂದು ತಿಳಿಸಿದೆ.

ಭಾನುವಾರ ಎಲ್ಲೆಲ್ಲಿ ಕರೆಂಟ್‌ ಕಟ್‌?: ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ 66/11ಕೆವಿ ಎಲೆಕ್ಟ್ರಾನಿಕ್ ಸಿಟಿ ಉಪಕೇಂದ್ರ ವ್ಯಾಪ್ತಿಯಲ್ಲಿ ಡಿಸೆಂಬರ್ 31ರ ಭಾನುವಾರ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಎಲೆಕ್ಟ್ರಾನಿಕ್ ಸಿಟಿ ಫೆಸ್-2, ದೊಡ್ಡತೇಗೂರು, ಬೊಮ್ಮನಹಳ್ಳಿ, ಎನ್.ಜಿ.ಆರ್. ಲೇಔಟ್, ಚಿಕ್ಕತೋಗೂರು, ಹೊಂಗಸಂದ್ರ, ಕೋನಪ್ಪನ ಅಗ್ರಹಾರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+