Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ರಾತ್ರಿ 8 ಗಂಟೆವರೆಗೆ ಕರೆಂಟ್ ಕಟ್

Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳ ಹಾಗೂ ಅತೀ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಇಂದು (ಆಗಸ್ಟ್‌ 3) ನಗರದ ಹಲವು ಪ್ರದೇಶಗಳಲ್ಲಿ ರಾತ್ರಿ 8 ಗಂಟೆವರೆಗೆ ಕರೆಂಟ್‌ ಕಟ್‌ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದರೆ ಎಲ್ಲೆಲ್ಲಿ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆ ನಗರದ ಈ ಕೆಳಕಂಡ ಪ್ರದೇಶಗಳಲ್ಲಿ ಆಗಸ್ಟ್‌ 3ರ ಭಾನುವಾರ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಅಲ್ಲದೆ, ವಿದ್ಯುತ್ ಕಡಿತಗೊಳ್ಳುವ ಪ್ರದೇಶದ ನಿವಾಸಿಗಳಿಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಸೂಚನೆಗಳನ್ನು ಕೂಡ ನೀಡಿದೆ.

Power Cut in Bengaluru s These Areas on August 3 Sunday Until 8 pm

ಸರ್ಜಾಪುರ ಮತ್ತು ಅತ್ತಿಬೆಲೆ 66 ಕೆವಿ ವ್ಯಾಪ್ತಿಯಲ್ಲಿ ಹೆಚ್‌ಟಿಎಲ್‌ಎಸ್​ ಕಂಡಕ್ಟರ್‌ಗಳ ತಂತಿ ಜೋಡಣೆ ಕಾರ್ಯಚರಣೆ ಕೈಗೊಳ್ಳಲಾಗುತ್ತಿದೆ. ಆದ್ದರಿಂದ ಇಂದು (ಆಗಸ್ಟ್ 3) ಬೆಳಗ್ಗೆ 6ರಿಂದ ರಾತ್ರಿ 8 ಗಂಟೆವರೆಗೆ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಎಲ್ಲೆಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ?: ಅತ್ತಿಬೆಲೆ ವ್ಯಾಪ್ತಿಯಲ್ಲಿ ಯಡವನಹಳ್ಳಿ, ಇಚ್ಚಂಗೂರು, ವಡ್ಡರಪಾಳ್ಯ, ಅತ್ತಿಬೆಲೆ ಕೈಗಾರಿಕಾ ಪ್ರದೇಶ, ಬಳಗಾರನಹಳ್ಳಿ, ಮಂಚನಹಳ್ಳಿ, ಅತ್ತಿಬೆಲೆ ಟೌನ್, ಮಾಯಸಂದ್ರ, ದಾಸನಾಪುರ, ಬಲ್ಲೂರು, ಕಂಬಳಿಪುರ, ಚಿಕ್ಕ ಕಾನಹಳ್ಳಿ, ಇಂಡ್ಲಬೆಲೆ, ಹಾರೋಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್‌ ಕಟ್‌ ಆಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

66/11 ಕೆವಿ ಆನೇಕಲ್ ವ್ಯಾಪ್ತಿಯಲ್ಲಿನ ಆನೇಕಲ್ ಟೌನ್, ಕಾವಲಹೊಸಹಳ್ಳಿ, ಗೌರೇನಹಳ್ಳಿ, ಹಾಲ್ದೇನಹಳ್ಳಿ, ಹೊಂಪಲಘಟ್ಟ, ಚೂಡೇನಹಳ್ಳಿ, ಹೊನ್ನ ಕಳಸಾಪುರ, ಕರ್ಪೂರು, ಬ್ಯಾಗಡದೇನಹಳ್ಳಿ, ಕಾದ ಅಗ್ರಹಾರ, ಚಿಕ್ಕಹಾಗಡೆ, ದೊಡ್ಡಹಾಗಡೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್‌ ಕಟ್‌ ಆಗಲಿದೆ ಎಂದು ತಿಳಿಸಿದೆ.

66/11 ಕೆವಿ ಸಮಂದೂರು ವ್ಯಾಪ್ತಿಯಲ್ಲಿನ ಸಮಂದೂರು, ರಾಚಮನಹಳ್ಳಿ, ಗುಡ್ಡನಹಳ್ಳಿ, ಅರವಂಟಿಗೆ ಪುರ, ಪಿ.ಗೊಲ್ಲಹಳ್ಳಿ, ತೆಲಗಾರ ಹಳ್ಳಿ, ವನಕನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಬೆಸ್ಕಾಂತಿ ಮನವಿ ಮಾಡಿದೆ.

ಎಲ್ಲೆಲ್ಲಿ ಕರೆಂಟ್‌ ಕಟ್‌?: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ 220/66/11 ಕೆವಿ ಹೆಬ್ಬಾಳ ಉಪಕೇಂದ್ರ ವ್ಯಾಪ್ತಿಯಲ್ಲಿ ಇತ್ತೀಚೆಗಷ್ಟೇ ಬೆಳಗ್ಗೆ 11ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದರು.

ಗಂಗಾನಗರ, ಲಕ್ಷ್ಮಯ್ಯ ಬ್ಲಾಕ್, ವೀವರ್ ಕಾಲೋನಿ, ಸಿ.ಬಿ.ಐ ಕ್ವಾರ್ಟರ್ಸ್, ಆರ್.ಬಿ.ಐ ಕಾಲೋನಿ, ಸಿ.ಪಿ.ಯು ಬ್ಲಾಕ್, ಡಿ.ಜಿ.ಕ್ಯೂ ಕ್ವಾಟರ್ಸ್, ಮುನಿರಾಮಯ್ಯ ಬ್ಲಾಕ್, ಯು.ಎ.ಎಸ್ ಕ್ಯಾಂಪಸ್. ದಿನ್ನೂರ್ ಮುಖ್ಯ ರಸ್ತೆ, ಆರ್‌ಟಿ ನಗರ, ಪಂಜಾಬ್ ನ್ಯಾಶನಲ್ ಬ್ಯಾಂಕ್, ಮುನನಪ್ಪಾ ಕಾಲೋನಿ, ಎಚ್.ಎಂ.ಟಿ ಬ್ಲಾಕ್, ಚಾಮುಂಡಿನಗರ, ಮಾಜಿ ಸೈನಿಕರ ಕಾಲೋನಿ.

ಆರ್‌ಟಿ ನಗರ ಪೊಲೀಸ್ ಠಾಣಾ ಪ್ರದೇಶ, ಅಶ್ವತ್ನಗರ, ಡಾಲರ್ಸ್ ಕಾಲೋನಿ, ಎಂಎಲ್‌ಎ ಲೇಔಟ್, ರತನ್ ಅಪಾರ್ಟ್‌ಮೆಂಟ್, ಗಾಯತ್ರಿ ಅಪಾರ್ಟ್‌ಮೆಂಟ್, ಫುಡ್‌ವರ್ಲ್ಡ್ ಆರ್‌ಟಿ ನಗರ, ನೃಪತುಂಗ ಬಡಾವಣೆ, ಕೃಷ್ಣಪ್ಪ ಬ್ಲಾಕ್. ಸಿಬಿಐ ಮುಖ್ಯರಸ್ತೆ, ಎಂಎಲ್‌ಎ ಲೇಔಟ್‌ನ ಭಾಗಗಳು, ಶಾಂತಿಸಾಗರ ಮುಖ್ಯ ರಸ್ತೆ, ಆರ್‌ಟಿ ನಗರ ವೇಣುಗೋಪಾಲ ಲೇಔಟ್, ಜಡ್ಜಸ್ ಕಾಲೋನಿ, 80 ಅಡಿ ರಸ್ತೆ.

ವಿಶ್ವೇಶ್ವರ ಬ್ಲಾಕ್, ಕರಿಯಣ್ಣ ಲೇಔಟ್, ಯೋಗೇಶ್ವರ ನಗರ, ರಿಂಗ್ ರೋಡ್, ಕುವೆಂಪು ಲೇಔಟ್, ನೇತಾಜಿ ನಗರ, ವಿನಾಯಕ ಲೇಔಟ್ 1ನೇ ಹಂತ, ಮುನಿಸ್ವಾಮಿ ಗೌಡ ಅಪಾರ್ಟ್‌ಮೆಂಟ್, ಸ್ಟಾರ್ಲಿಂಗ್ ಗಾರ್ಡನ್ ಲೇಔಟ್, ಐ.ವಿ.ಆರ್.ಐ, ಗಂಗಾನಗರ ಮಾರುಕಟ್ಟೆ, ಆಲ್ಪೈನ್ ಅಪಾರ್ಟ್‌ಮೆಂಟ್‌, ಜೈನ್ ಅಪಾರ್ಟ್‌ಮೆಂಟ್, ಸಿ 4 ಉಪವಿಭಾಗ ಕಚೇರಿ ಗಿಡ್ಡಪ್ಪ ಬ್ಲಾಕ್.

ಚೋಳನಾಯಕನಹಳ್ಳಿ, ಎಜಿಎಸ್ ಕಾಲೋನಿ, ಎಸ್‌ಬಿಎಂ ಕಾಲೋನಿ, ವೇಣುಗೋಪಾಲರೆಡ್ಡಿ ಲೇಔಟ್, ವಿನಾಯಕ ಲೇಔಟ್, ಆನಂದಗಿರಿ, ಎಸ್‌ಎಸ್‌ಎ ರಸ್ತೆ, ಪೊಲೀಸ್ ಕ್ವಾರ್ಟರ್ಸ್, ನೆಬ್ಬಾಳ ಎಸ್‌ಎಸ್ ಬ್ಲಾಕ್, ನೆಬ್ಬಾಳ ಎಸ್‌ಎಸ್ ಬ್ಲಾಕ್ ಕೆಂಪಣ್ಣ ಲೇಔಟ್, ಗುಡ್ಡದಹಳ್ಳಿ ರಸ್ತೆ, ಸುಬ್ರಮಣಿ ಕಾಲೋನಿ, ಕುಂಟಿಗ್ರಾಮ. ಕೆಇಬಿ ಲೇಔಟ್, ಸಂಜಯನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ತಿಳಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+