Bengaluru Power Cut: ಆಗಸ್ಟ್‌ 10ರಂದು ಬೆಂಗಳೂರಿನ ಈ ಏರಿಯಾಗಳಲ್ಲಿ ಕರೆಂಟ್‌ ಕಟ್‌-ಮಾಹಿತಿ ಇಲ್ಲಿದೆ

Bengaluru Power Cut: ವಿದ್ಯುತ್ ಕಾಮಗಾರಿ ಹಿನ್ನೆಲೆ ಆಗಸ್ಟ್‌ 10ರಂದು ಬೆಂಗಳೂರಿನ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದರೆ ಎಲ್ಲೆಲ್ಲಿ ಹಾಗೂ ಎಷ್ಟು ಗಂಟೆಯವರೆಗೆ ವಿದ್ಯುತ್‌ ವ್ಯತ್ಯಯ ಆಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಬೆಸ್ಕಾಂನ 66/11 ಕೆವಿ 'ಸಿ' ವಿದ್ಯುತ್‌ ವಿತರಣಾ ಕೇಂದ್ರದಲ್ಲಿ ಆಗಸ್ಟ್‌ 10ರಂದು ತುರ್ತು ನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆ ಅಂದು ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ನಗರದ ಹಲವೆಡೆ ವಿದ್ಯುತ್‌ ವ್ಯತ್ಯಯ ಆಗಲಿದೆ ಎಂದು ಬೆಂಗಳೂರು ಪೂರ್ವ ವೃತ್ತದ ಬೆಸ್ಕಾಂ ಅಧೀಕ್ಷಕ ಇಂಜಿನಿಯರ್‌ ತಿಳಿಸಿದ್ದಾರೆ.

Power Cut in Bengaluru s these areas on August 10th Know details

ಇನ್ನು ವಿದ್ಯುತ್ ದೂರಿಗಾಗಿ ಬೆ.ವಿ.ಕಂ ಸಹಾಯವಾಣಿ ಸಂಖ್ಯೆ 1912ಕ್ಕೆ ಸಂಪರ್ಕಿಸುವಂತೆ ತಿಳಿಸಿದೆ. ದಿನಾಂಕ ಆಗಸ್ಟ್‌ 10ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 05 ಗಂಟೆಯವರೆಗೆ 66/11ಕೆ.ವಿ 'ಸಿ' ಸ್ಟೇಷನ್‌ನಲ್ಲಿ ತುರ್ತುನಿರ್ವಹಣಾ ಕಾರ್ಯಗಳನ್ನು ನಿರ್ವಹಿಸುವುದರಿಂದ ಈ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.

ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ: ಬ್ರಾಡ್ ವೇ ರಸ್ತೆ, ಕಾಕರ‍್ನ್ ರಸ್ತೆ, ಸ್ಟೇಷನ್ ರಸ್ತೆ, ಕ್ವೀನ್ಸ್ ರಸ್ತೆ, ತಿಮ್ಮಯ್ಯ ರಸ್ತೆ, ಸ್ಲಾಟರ್ ಹೌಸ್ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಆಗಲಿದೆ. ಅಲ್ಲದೆ, ಕನ್ನಿಂಗ್ ಹ್ಯಾಮ್ ರಸ್ತೆ, ಆಲಿ ಆಸ್ಕರ್ ರಸ್ತೆ, ಆಲಿ ಆಸ್ಕರ್ ರಸ್ತೆ ಕ್ರಾಸ್, ಚಿಕ್ಕ ಬಜಾರ್ ರಸ್ತೆ, ವೆಂಕಟಪ್ಪ ರಸ್ತೆ, ಮುನಿಸ್ವಾಮಿ ರಸ್ತೆಯಲ್ಲಿ ವಿದ್ಯುತ್‌ ವ್ಯತ್ಯಯ ಆಗಲಿದೆ.

ಪಾಯಪ್ಪ ಗಾರ್ಡನ್, ಸಿಮೆಂಟ್ರಿ ರಸ್ತೆ, ಪಾರ್ಕ್ ರಸ್ತೆ, ಚಾಂದನಿ ಚೌಕ್, ಮಿಲ್ಲರ್ ಟ್ಯಾಂಕ್ ‌ಬಂಡ್ ರಸ್ತೆ, ಜಸ್ಮಾಭವನ ರಸ್ತೆ, ಸುಲ್ತಾನ್‌ಜಿಗುಂಟ ರಸ್ತೆ, ಹೇನ್ಸ್ ರಸ್ತೆ, ಬಂಬೂಬಜಾರ್, ಧನಕೋಟಿ ಲೇನ್ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಆಗಲಿದೆ.

ನೆಹರುಪುರಂ, ಮುತ್ಯಾಲಮ್ಮ ಕೋಯಿಲ್ ಸ್ಟ್ರೀಟ್, ಮಕಾನ್ ಕಾಂಪೌಂಡ್ ರಸ್ತೆ, ಎನ್.ಪಿ. ಸ್ಟ್ರೀಟ್, ಸೆಪ್ಪಿಂಗ್ಸ್ ರಸ್ತೆ, ಬ್ರಾಡ್ ಶಾ ಸ್ಟ್ರೀಟ್ ಹೇನ್ಸ್ ರಸ್ತೆ, ಪ್ಯಾಲೇಸ್ ಟಾಕೀಸ್, ಹೊಸ ಮಾರ್ಕೆಟ್ ರಸ್ತೆ, ಓ.ಪಿ.ಹೆಚ್.ರಸ್ತೆ, ಆರ್.ನಂ.2ನೇ ಸ್ಟ್ರೀಟ್, ಜೈನ್ ದೇವಸ್ಥಾನದ ರಸ್ತೆ, ಫೀಡಿಂಗ್ ಟು ಹೆಚ್.ಟಿ.ಇನ್ಸಾಟಾಲೇಷನ್ ಆರ್.ಎಂ.ಜಡ್. ಎಕ್ಸ್ಪ್ರೆಸ್ ಫೀಡರ್ ಫೀಡಿಂಗ್ ಟು ಬೌರಿಂಗ್ ಹಾಸ್ಪಿಟಲ್ ಪ್ರದೇಶದಲ್ಲಿ.

ಎಡ್ವರ್ಡ್ ರಸ್ತೆ, ಕನ್ನಿಂಗ್ಹಾಂಮ್ ರಸ್ತೆ ಕ್ರಾಸ್, ಇನ್ಫೆಂಟ್ರಿ ರಸ್ತೆ, ವಿಶ್ವೇಶ್ವರಯ್ಯ ಟವರ್, ಪೋಲೀಸ್ ಕಮೀಷನರ್ ಆಫೀಸ್ ಕೆ.ಎಸ್.ಎಫ್.ಸಿ ಬಿಲ್ಡಿಂಗ್, ಯು.ಎನ್.ಐ., ಮಿಲ್ರ‍್ಸ್ ಟ್ಯಾಂಕ್ ರಸ್ತೆ, ಹಳೇ ಬಾಗಲೂರು ಲೇಔಟ್, ಬಿದರಹಳ್ಳಿ, ಪಾಟರಿ ಟೌನ್, ಕಾಕ್ಸ್ ಟೌನ್, ಹೊಯ್ಸಳ ಅಪಾರ್ಟ್‌ಮೆಂಟ್‌, ಆರ್.ಬಿ.ಐ. ಕ್ವಾಟ್ರಸ್, ಕಾಂಗ್ರೆಸ್ ಆಫೀಸ್ ಪ್ರದೇಶದಲ್ಲಿ ವಿದ್ಯುತ್‌ ವ್ಯತ್ಯಯ ಆಗಲಿದೆ.

ಹೇನ್ಸ್ ರಸ್ತೆ, ಎಲ್.ಹೆಚ್., ಬಿ.ಎಸ್.ಎನ್.ಎಲ್ ಎಂ.ಎಸ್. ಬಿಲ್ಡಿಂಗ್, ಕಾರ್ಪೊರೇಟ್ ಆಫೀಸ್, ಕೆ.ಪಿ.ಎಸ್.ಸಿ, ಸಿ.ಓ.ಡಿ, ಚೀಫ್ ಜಸ್ಟೀಸ್ ಹೌಸ್, ಮಿಲ್ರ‍್ಸ್ ರಸ್ತೆ, ವಸಂತನಗರ, ದಾಬಸ್‌ಪೇಟೆ, ಕಲ್ಲಹಳ್ಳಿ ಎಲ್ಲಾ ಬಿ.ಡಿ.ಎ ಕ್ವಾಟ್ರಸ್, ಎಮ್.ಇ.ಜಿ.ಸೆಂಟರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+