ಮೆಟ್ರೋ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿ ಓಡಾಟ: ಅಲ್ಲಿ ನಡೆದದ್ದೇನು?

ಬೆಂಗಳೂರು, ಮೇ 8: ಇಡೀ ರಾಜಧಾನಿಯನ್ನೇ ನಿದ್ದೆಗೆಡಿಸುವ ಸುದ್ದಿಯೊಂದು ಮಂಗಳವಾರ ಹೊರಬಿದ್ದಿತ್ತು. ಪಿಸ್ತೂಲ್ ಹಿಡಿದು ವ್ಯಕ್ತಿಯೊಬ್ಬ ಮೆಜೆಸ್ಟಿಕ್ ನಮ್ಮ ಮೆಟ್ರೋ ನಿಲ್ದಾಣವನ್ನು ಪ್ರವೇಶಿಸಲು ಯತ್ನಿಸಿ ವಾಪಸ್ ಹೋಗಿದ್ದ ಎನ್ನುವುದು ಸಿಸಿಟಿವಿ ಪರಿಶೀಲನೆ ಬಳಿಕ ಗೊತ್ತಾಗಿತ್ತು.

ಎಸಿಪಿ ಸೇರಿದಂತೆ 20 ಪೊಲೀಸರ ತಂಡವು ಅಪರಿಚಿತ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದೆ. ಹಾಗೆಯೇ ಆತ ವಾಪಸ್ ಹೋಗಿದ್ದೇಕೆ ಎನ್ನುವ ಪ್ರಶ್ನೆಯೂ ಉದ್ಭವಿಸಿದೆ. ಮೆಟ್ರೋ ನಿಲ್ದಾಣಕ್ಕೆ ಬಂದ ವ್ಯಕ್ತಿ ಉದ್ದನೆಯ ಗಡ್ಡ ಬಿಟ್ಟಿದ್ದ, ಕೈಯಲ್ಲಿ ಯಾವುದೇ ಬ್ಯಾಗ್ ಇರಲಿಲ್ಲ. ಸಿಸಿಟಿವಿಯಲ್ಲಿ ವ್ಯಕ್ತಿ ಮೆಟ್ರೋ ನಿಲ್ದಾಣಕ್ಕೆ ಆಗಮಿಸುತ್ತಿರುವ ದೃಶ್ಯ ಸೆರೆಯಾಗಿದೆ. ನಿಲ್ದಾಣದ ಸಿಬ್ಬಂದಿ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಅಪರಿಚಿತ ವ್ಯಕ್ತಿ ವಾಪಸ್ ಹೋಗಿದ್ದೇಕೆ?

ಅಪರಿಚಿತ ವ್ಯಕ್ತಿ ವಾಪಸ್ ಹೋಗಿದ್ದೇಕೆ?

ಮೆಟ್ರೋ ನಿಲ್ದಾಣದ ಪ್ರವೇಶದ್ವಾರದ ಮೂಲಕ ಒಳಗೆ ಬರುತ್ತಿದ್ದಂತೆ ಮೆಟಲ್ ಡಿಟೆಕ್ಟರ್ ನಿಂದ ಶಬ್ದ ಬಂದಿದೆ. ಸೆಕ್ಯೂರಿಟಿ ಗಾರ್ಡ್ ಪ್ರಶ್ನಿಸಿದಾಗ ವಾಪಸ್ ಏಕೆ ಹೋದ ಎಂಬುದು ಪ್ರಶ್ನೆಯಾಗಿದೆ. ಆಗಂತುಕನೇ ಆಗಿದ್ದರೆ ಮೆಟಲ್ ಡಿಟೆಕ್ಟರ್ ಗೆ ಬಂದು ಸೆಕ್ಯೂರಿಟಿ ಗಾರ್ಡ್‌ಗೆ ಏಕೆ ಸಿಕ್ಕಿಬಿದ್ದ, ಸೆಕ್ಯುರಿಟಿ ಗಾರ್ಡ್ ತೀವ್ರ ತಪಾಸಣೆ ನಡೆಸಿದಾಗ ಏಕೆ ಯಾಮಾರಿಸಿ ವಾಪಸ್ ಹೋದ, ತಪಾಸಣೆಗೆ ಒಳಪಟ್ಟು ಮೆಟ್ರೋ ಪ್ರಯಾಣ ಮಾಡಬಹುದಾಗಿತ್ತು. ಈ ಎಲ್ಲಾ ಅನುಮಾನಗಳನ್ನು ಹುಟ್ಟುಹಾಕಿದೆ.

ಅಪಾಯಕಾರಿ ವಸ್ತುವಿಲ್ಲದಿದ್ದರೂ ವಾಪಸ್ ಹೋಗಿದ್ದೇಕೆ?

ಅಪಾಯಕಾರಿ ವಸ್ತುವಿಲ್ಲದಿದ್ದರೂ ವಾಪಸ್ ಹೋಗಿದ್ದೇಕೆ?

ಡೋರ್ ಮೆಟಲ್ ಡಿಟೆಕ್ಟರ್ ನಲ್ಲಿ ಸಾಮಾನ್ಯವಾಗಿ ಹಾದು ಹೋದಾಗ ಜೇಬಿನಲ್ಲಿ ಕೀ, ಮೊಬೈಲ್, ಬೆಲ್ಟ್‌ ಇದ್ದರೆ ಕಡಿಮೆ ಸದ್ದು ಮಾಡುತ್ತದೆ. ಒಂದು ವೇಳೆ ಗನ್, ಸ್ಫೋಟಕ ವಸ್ತುಗಳಿದ್ದರೆ ಶಬ್ದ ಹೆಚ್ಚಾಗುತ್ತದೆ. ಸಾಮಾನ್ಯ ಶಬ್ದಕ್ಕಿಂತ ಸ್ವಲ್ಪ ಹೆಚ್ಚು ಶಬ್ದ ಬಂದ ಕಾರಣ ಸೆಕ್ಯೂರಿಟಿ ಗಾರ್ಡ್ ಆತನನ್ನು ಪಕ್ಕಕ್ಕೆ ಕರೆದು ಹ್ಯಾಂಡ್ ಡಿಟೆಕ್ಟರ್‌ನಲ್ಲಿ ತಪಾಸಣೆ ನಡೆಸಿದ್ದಾರೆ, ಆದರೆ ಯಾವುದೇ ಅಪಾಯಕಾರಿ ವಸ್ತುಗಳು ಕಂಡು ಬಂದಿಲ್ಲವಾದರೂ ಆತ ವಾಪಸ್ ಹೋಗಿದ್ದೇಕೆ ಎಂಬುದು ಆತಂಕಕಾರಿ ವಿಚಾರವಾಗಿದೆ.

ತಕ್ಷಣವೇ ಪೊಲೀಸರಿಗೆ ಮಾಹಿತಿ

ತಕ್ಷಣವೇ ಪೊಲೀಸರಿಗೆ ಮಾಹಿತಿ

ಮೆಟ್ರೋ ನಿಲ್ದಾಣದ ಪ್ರವೇಶ ದ್ವಾರದಿಂದ ಹಿಡಿದು ಎಲ್ಲಾ ಮೂಲೆಗಳಲ್ಲಿ ಇರುವ ಸಿಸಿ ಕ್ಯಾಮರಾಗಳ ವಿಡಿಯೋ ವೀಕ್ಷಣೆ ನಡೆಸುತ್ತಿದ್ದ ಮೇಲ್ವಿಚಾರಕರು ಇದನ್ನು ಗಮನಿಸಿದ್ದರು. ಅಪರಿಚತ ವ್ಯಕ್ತಿ ತಪಾಸಣೆಗೆ ಒಳಪಟ್ಟು ಹೊರಗಡೆ ಹೋಗುತ್ತಿರುವುದನ್ನು ಗಮನಿಸಿದ ಮೇಲ್ವಿಚಾರಕ ಓಂಶ್ಯಾಮ್, ಅನುಮಾನಗೊಂಡು ಉಪ್ಪಾರ ಪೊಲೀಸರಿಗೆ ಮಾಹಿತಿ ನೀಡಿದ್ದರು.

ನಮ್ಮ ಮೆಟ್ರೋ ನಿಲ್ದಾಣದಲ್ಲಿ ಭದ್ರತಾ ವೈಫಲ್ಯ

ನಮ್ಮ ಮೆಟ್ರೋ ನಿಲ್ದಾಣದಲ್ಲಿ ಭದ್ರತಾ ವೈಫಲ್ಯ

ಅನುಮಾನಾಸ್ಪದ ವ್ಯಕ್ತಿಯ ಓಡಾಟ ಪ್ರಕರಣದಲ್ಲಿ ಮೆಟ್ರೋ ಸೆಕ್ಯುರಿಟಿ ವೈಫಲ್ಯ ಎದ್ದು ಕಾಣುತ್ತಿದೆ. ಅಪರಿಚಿತ ವ್ಯಕ್ತಿಯನ್ನು ತಪಾಸಣೆ ನಡೆಸಿದ ಸೆಕ್ಯುರಿಟಿ ಅನುಮಾನ ಬಂದ ಬಳಿಕ ಆತನನ್ನು ಪುನಃ ಪ್ರಶ್ನಿಸಬೇಕಿತ್ತು, ಆತನಿಗೆ ಹೋಗಲು ಬಿಟ್ಟಿದ್ದು ಭದ್ರತಾ ಸಿಬ್ಬಂದಿಯ ಮೊದಲ ತಪ್ಪು ಎಂಬುದು ಎಲ್ಲರ ಅಭಿಪ್ರಾಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+