ವಾಟ್ಸಾಪ್‌ನಲ್ಲಿ ಪೊಲೀಸರಿಗೆ ದೂರು ನೀಡುವುದು ಹೇಗೆ?

ಬೆಂಗಳೂರು, ಜು.21: ನಗರದಲ್ಲಿ ಲೈಂಗಿಕ ಕಿರುಕುಳ, ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ನಗರ ಪೊಲೀಸರು ವಾಟ್ಸಾಪ್‌ ಮೂಲಕ ದೂರು ನೀಡುವ ವ್ಯವಸ್ಥೆ ಜಾರಿಗೆ ತರಲು ಚಿಂತನೆ ನಡೆಸಿದ್ದಾರೆ.

ಲೈಂಗಿಕ ದೌರ್ಜ‌ನ್ಯ, ಅತ್ಯಾಚಾರ, ಮತ್ತಿತರ ದೂರುಗಳನ್ನು ಬೆಂಗಳೂರಿನ ನಾಗರಿಕರು ವಾಟ್ಸಾಪ್‌ ಮೂಲಕ ದೂರು ನೀಡುವ ವ್ಯವಸ್ಥೆಯನ್ನು ಸದ್ಯದಲ್ಲೇ ಜಾರಿಗೆ ತರಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್‌‌ ಹೇಳಿದ್ದಾರೆ.[ಮಕ್ಕಳ ಸುರಕ್ಷತೆಗೆ ಸರ್ಕಾರದ ಮಾರ್ಗಸೂಚಿ]

whatsapp

ಯಾಕೆ ಈ ವ್ಯವಸ್ಥೆ? ಇತ್ತೀಚಿಗೆ ಪುಲಿಕೇಶಿ ನಗರದಲ್ಲಿ ನಡೆದ ಯುವತಿಯ ಮೇಲಿನ ರೇಪ್‌ ಪ್ರಕರಣ ಎರಡು ದಿನಗಳ ಹಿಂದೆಯೇ ದಾಖಲಾಗಿದ್ದರೂ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿರಲಿಲ್ಲ. ಪ್ರಕರಣದ ದಾಖಲಾದ ನಾಲ್ಕು ದಿನಗಳ ಬಳಿಕ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದ ನಂತರ ಹಿರಿಯ ಅಧಿಕಾರಿಗಳಿಗೆ ಮಾಹಿತಿ ಹೋಗಿತ್ತು. ಈ ಕಾರಣದ ಜೊತೆಗೂ ಸದ್ಯ ವಾಟ್ಸ್‌ ಆಪ್‌ನ್ನು ಬಹುತೇಕ ಸ್ಮಾರ್ಟ್‌ಫೋನ್‌ ಬಳಕೆದಾರರು ಬಳಸುತ್ತಿದ್ದು, ದೂರು ನೀಡುವ ವ್ಯಕ್ತಿ ಸುಲಭವಾಗಿ ನಂಬರ್‌ಗೆ ಮೆಸೇಜ್‌ ಮಾಡಬಹುದಾದ್ದರಿಂದ ಈ ವ್ಯವಸ್ಥೆ ಜಾರಿಗೊಳಿಸಲು ಇಲಾಖೆ ಮುಂದಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಬೆಂಗಳೂರಿನ ನಾಗರಿಕರಿಗೆ ಕಾನೂನು ಸುವ್ಯವಸ್ಥೆ ಪೊಲೀಸ್‌ ಮತ್ತು ಸಂಚಾರ ಪೊಲೀಸ್‌ ಸಾಮಾಜಿಕ ಜಾಲತಾಣಗಳಲ್ಲಿ ಪೇಜ್‌ಗಳನ್ನು ಆರಂಭಿಸಿದ್ದು ಜನರು ಇಲಾಖೆಯ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಬೆಂಗಳೂರು ಕಾನೂನು ಸುವ್ಯವಸ್ಥೆ ಪೊಲೀಸ್‌ ಖಾತೆಗಳು
ಫೇಸ್‌‌ಬುಕ್‌ ಪೇಜ್‌: www.facebook.com/blrcitypolice
ಟ್ವಿಟ್ಟರ್‌ ಖಾತೆ:twitter.com/BlrCityPolice

ಬೆಂಗಳೂರು ಸಂಚಾರ ಪೊಲೀಸ್‌ ಖಾತೆಗಳು
ಫೇಸ್‌ಬುಕ್‌ ಪೇಜ್‌:www.facebook.com/BangaloreTrafficPolice
ಟ್ವಿಟ್ಟರ್‌ ಖಾತೆ:twitter.com/blrcitytraffic

ಏನಿದು ವಾಟ್ಸಾಪ್‌: ಕಡಿಮೆ ಅವಧಿಯಲ್ಲಿ ಜನಪ್ರಿಯವಾಗಿರುವ ಮೊಬೈಲ್‌ ಸಂದೇಶ ಕಳುಹಿಸುವ ಅಪ್ಲಿಕೇಶನ್ ಇದಾಗಿದೆ. ಸಂದೇಶದ ಜೊತೆಗೆ ವಿಡಿಯೋ ಮತ್ತು ಆಡಿಯೋವನ್ನು ಕಳುಹಿಸಬಹುದಾಗಿದೆ. ಒಂದು ವರ್ಷ‌ ವಾಟ್ಸಾಪ್‌ ಬಳಕೆ ಉಚಿತವಾಗಿದ್ದು ಬಳಿಕ ಒಂದು ವರ್ಷಕ್ಕೆ ಭಾರತದಲ್ಲಿ 55 ರೂ. ನೀಡಿ ಸಬ್‌ಸ್ಕ್ರೈಬ್‌ ಮಾಡಬೇಕಾಗುತ್ತದೆ.[ವಾಟ್ಸಾಪ್‌ನಲ್ಲಿ ಅಂಥ ವಿಶೇಷತೆ ಏನಿದೆ?]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+