ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸರಿಗೆ ಯುವತಿ ನೀಡಿದ ದೂರಿನಲ್ಲಿ ಏನಿದೆ?

By Ashwath
|
Google Oneindia Kannada News

ಬೆಂಗಳೂರು, ಜು.16: ಲೈಂಗಿಕ ದೌರ್ಜ‌ನ್ಯಕ್ಕೆ ಒಳಗಾದ ಯುವತಿ ಶುಕ್ರವಾರ ರಾತ್ರಿ ತಾನು ಅನುಭವಿಸಿದ ನೋವನ್ನು ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾಳೆ. ಯುವತಿ ದೂರಿನಲ್ಲಿ ಏನಿತ್ತು? ಕಾಮುಕರು ರಾತ್ರಿ ಯಾವ ರೀತಿ ದೌರ್ಜ‌ನ್ಯ ಎಸಗಿದ್ದರು ಎಂಬುದನ್ನು ಯುವತಿಯ ದೂರಿನಲ್ಲಿರುವಂತೆಯೇ ಓದಿ.

ದಿನಾಂಕ - 14/07/2014

ರಿಗೆ,

ಇನ್ಸ್ ಪೆಕ್ಟರ್
ಫ್ರೇಜರ್ ಟೌನ್ ಠಾಣೆ
ಬೆಂಗಳೂರು - 560005

ವಿಷಯ: ಹಲ್ಲೆ ಮತ್ತು ಲೈಂಗಿಕ ದೌರ್ಜನ್ಯದ ವಿರುದ್ಧ ದೂರು

ನಾನು (ಹೆಸರು) ಮತ್ತು ನನ್ನ ಜೊತೆಗಿದ್ದ ಗೆಳೆಯನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಅವರಲ್ಲಿ ಒಬ್ಬ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಈ ಘಟನೆಯು ಜುಲೈ 10ರಂದು ರಾತ್ರಿ 12.15ರ ಸುಮಾರಿಗೆ ನಾನು ವಾಸಿಸುವ ಅಪಾರ್ಟ್ ಮೆಂಟ್ ಮುಂಭಾಗದಲ್ಲಿ ನಡೆಯಿತು.

ಬಿಳಿ ಬಣ್ಣದ ಸ್ಕೋಡಾ (ಕೆಎ 03 ಎಂಜೆ 8433) ಕಾರಿನಲ್ಲಿ ಬಂದ ದುಷ್ಕರ್ಮಿಗಳು ನಾವು ಕುಳಿತಿದ್ದ ಕಾರಿನಿಂದ ನಮ್ಮನ್ನು ಹೊರಗೆಳೆದು ಅವರು ಬಂದ ಸ್ಕೋಡಾ ಕಾರಿನ ಹಿಂದಿನ ಸೀಟಿಗೆ ತಳ್ಳಿದರು. ಆ ಕಾರಿನ ಮುಂಭಾಗದಲ್ಲಿ ಇಬ್ಬರು ಹಾಗೂ ಹಿಂಭಾಗದಲ್ಲಿ ನಾನು ಮತ್ತು ನನ್ನ ಗೆಳೆಯನ ಎಡ ಮತ್ತು ಬಲಭಾಗಗಳಲ್ಲಿ ಇಬ್ಬರು ಕುಳಿತಿದ್ದರು.

ನನ್ನ ಬಳಿ ಕುಳಿತಿದ್ದ ನಸೀರ್ ಹೈದರ್ ಎಂಬಾತ ನನ್ನ ಶರ್ಟ್ ನೊಳಗೆ ಕೈಹಾಕಲು ಯತ್ನಿಸಿದ. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ನಾನು ಮತ್ತು ನನ್ನ ಗೆಳೆಯರು ಪೊಲೀಸರು. ನಮ್ಮನ್ನು ಪೊಲೀಸ್ ಠಾಣೆಗೆ ಕರೆದೊಯ್ಯುವುದಾಗಿ ಬೆದರಿಕೆ ಹಾಕಿದ.

ಬಳಿಕ ಆತ ತನ್ನ ಕೈಯನ್ನು ನನ್ನ ಶರ್ಟ್ ಒಳಗೆ ಹಾಕಿ ನನ್ನ ಎದೆ ಮುಟ್ಟಲು ಆರಂಭಿಸಿದ. ನಂತರ ಆತ ನನ್ನ ಒಳಉಡುಪು ತೆಗೆದ. 5 ನಿಮಿಷ ಸಹಕರಿಸಿದರೆ ಕೂಡಲೇ ನನ್ನನ್ನು ಹಾಗೂ ಗೆಳೆಯನನ್ನು ಬಿಡುವುದಾಗಿ ಹೇಳಿದ. ಇದೇ ವೇಳೆ ನಾವಿದ್ದ ಕಾರು ನಗರದಲ್ಲಿ ಸಂಚರಿಸುತ್ತಿತ್ತು. ಕೊನೆಗೆ ಕಾಕ್ಸ್ ಟೌನ್ ರೈಲ್ವೇ ಟ್ರ್ಯಾಕ್ ಬಳಿ ನಿಲ್ಲಿಸಿದರು.

ಕಾರಿನಿಂದ ಹೊರಗಿಳಿದ ಮೂವರು ಅಪರಿಚಿತರು ನನ್ನ ಗೆಳೆಯನನ್ನು ಹಿಡಿದು ಎಳೆದೊಯ್ದರು. ನನ್ನ ಗೆಳೆಯನ ಕತ್ತಿಗೆ ಚೂಪಾದ ವಸ್ತುವನ್ನು ಇರಿಸಿದ್ದ ಅವರು ಬಾಯಿ ಮುಚ್ಚಿಕೊಂಡಿರಲು ಸೂಚಿಸಿದರು.

ಈ ವೇಳೆ ನಸೀರ್ ನನ್ನ ಜೊತೆ ಕಾರಿನಲ್ಲೇ ಕುಳಿತಿದ್ದ. ಅವರು ಹೋದ ತಕ್ಷಣ ತನ್ನ ಪ್ಯಾಂಟ್ ಜಿಪ್ ಬಿಚ್ಚಿದ ನಜೀರ್ ಆತನ ಗುಪ್ತಾಂಗವನ್ನು ಹಿಡಿಯುವಂತೆ ಒತ್ತಾಯಿಸಿದ. ಜೊತೆಗೆ ನನ್ನ ಎದೆಯನ್ನು ಕಚ್ಚಲು ಆರಂಭಿಸಿದ. ಬಳಿಕ ನನ್ನ ತಲೆಯನ್ನು ಕೆಳಗೆ ಎಳೆದ ಆತ ಬಾಯಿ ಹಾಕಲು ಹೇಳಿದ. ಪೂರ್ಣವಾಗಿ ತೃಪ್ತಿ ಪಡೆದ ಬಳಿಕ ನಸೀರ್ ಗೆಳೆಯರು ವಾಪಸ್ ಕಾರಿನ ಬಳಿ ಬಂದರು. ನಮ್ಮ ಕಾರಿನಲ್ಲೇ ಅಲ್ಲಿಂದ ಹೊರಡುವಂತೆ ಹೇಳಿದರು.

50 ಸಾವಿರ ರೂ. ನೀಡುವಂತೆ ಅವರು ನಮ್ಮ ಮುಂದೆ ಬೇಡಿಕೆ ಇಟ್ಟ ಅವರು ನನ್ನ ಗೆಳೆಯನ ವಾಚ್ ತೆಗೆದುಕೊಂಡರು. ಇದೇ ವೇಳೆ ಅವರು ಲೇಡಿ ಪೊಲೀಸ್ ಭಾವಚಿತ್ರವಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡುವುದಾಗಿ ಬೆದರಿಕೆ ಹಾಕಿದರು. ಹೀಗಾಗಿ ಕಾನೂನಿನಂತೆ ನೀವು ಕ್ರಮಕೈಗೊಂಡು ನಾಲ್ವರು ಅಪರಾಧಿಗಳನ್ನು ಬಂಧಿಸುವಂತೆ ಮನವಿ ಮಾಡುತ್ತೇನೆ.

ಇಂತಿ,
(ಹೆಸರು)

rape

ಅತ್ಯಾಚಾರ ಪ್ರಕರಣ ದಾಖಲಾಗಿದ್ದು ಹೇಗೆ? ದೆಹಲಿಯ ನಿರ್ಭಯಾ ಪ್ರಕರಣದಿಂದಾಗಿ ಲೈಂಗಿಕ ದೌರ್ಜ‌ನ್ಯವನ್ನು ಅತ್ಯಾಚಾರವೆಂದೇ ಪರಿಗಣಿಸುವಂತೆ ಸುಪ್ರೀಂಕೋರ್ಟ್‌ ಇತ್ತೀಚೆಗೆ ತೀರ್ಪು‌ ನೀಡಿತ್ತು. ಈ ಪ್ರಕರಣದ ಎಫ್‌ಐಆರ್‌ ಹಾಕುವ ಸಂದರ್ಭದಲ್ಲಿ ಸಿಬ್ಬಂದಿ ಸೂಕ್ತ ಸೆಕ್ಷನ್‌ಗಳನ್ನು ದಾಖಲಿಸಿ ಪ್ರಕರಣ ದಾಖಲಿಸಿರಲಿಲ್ಲ. ಈಗ ನ್ಯಾಯಾಲಯದ ಅನುಮತಿ ಪಡೆದು ಅತ್ಯಾಚಾರ ಮತ್ತು ಅಪಹರಣ ಪ್ರಕರಣದ ಆರೋಪದ ಅಡಿಯಲ್ಲಿ ಹೆಚ್ಚುವರಿ ಪ್ರಕರಣ ದಾಖಲಿಸಲಾಗಿದೆ.[ಬೆಂಗಳೂರು ವಿದ್ಯಾರ್ಥಿ‌ನಿಗೆ ಕಿರುಕುಳ: ಓರ್ವ‌ನ ಬಂಧನ]

ಇನ್‌‌‌ಸ್ಪೆಕ್ಟರ್‌ ಅಮಾನತು: ಯುವತಿ ಸ್ಪಷ್ಟವಾಗಿ ದೂರಿನಲ್ಲಿ ತನ್ನ ನೋವನ್ನು ಹೇಳಿಕೊಂಡಿದ್ದರೂ ಪೊಲೀಸರು ಸರಿಯಾದ ಸೆಕ್ಷನ್‌ಗಳನ್ನು ನಮೂದಿಸದೆ ಎಫ್‌ಐಆರ್‌ ದಾಖಲಿಸಿ ಕರ್ತವ್ಯ ಲೋಪ ಎಸಗಿದ್ದಕ್ಕೆ ಪುಲಿಕೇಶಿನಗರ ಠಾಣೆ ಇನ್‌‌‌ಸ್ಪೆಕ್ಟರ್ ಮಹಮ್ಮದ್‌ ರಫೀಕ್‌ ಅವರನ್ನು ಅಮಾನತು ಮಾಡುವಂತೆ ನಗರ ಪೊಲೀಸ್‌ ಆಯುಕ್ತ ರಾಘವೇಂದ್ರ ಔರಾದ್ಕರ್‌ ಆದೇಶಿಸಿದ್ದಾರೆ. ಪೊಲೀಸರು ಕರ್ತವ್ಯ ಲೋಪ ಎಸಗಿದ್ದ ಬಗ್ಗೆ ಪುಲಿಕೇಶಿನಗರ ಉಪವಿಭಾಗದ ಎಸಿಪಿ ಅವರ ತನಿಖೆ ನಡೆಸಿ ಆಯುಕ್ತರಿಗೆ ವರದಿ ನೀಡಿದ್ದರು.

English summary
A group of youth sexually assaulted a 22-year-old postgraduate student, after forcing her and her male friend into a car late on Friday night. The police arrested the prime accused on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X