Shobha Khatavkar: ಬೆಂಗಳೂರು: ಪೊಲೀಸ್ ಅಧಿಕಾರಿ ಶೋಭಾ ಕಟಾವ್ಕರ್ ಶವವಾಗಿ ಪತ್ತೆ
ಬೆಂಗಳೂರು, ಏಪ್ರಿಲ್ 15: ಪೊಲೀಸ್ ಅಧಿಕಾರಿ ಶೋಭಾ ಕಟಾವ್ಕರ್ (53 ವರ್ಷ) ಬೆಂಗಳೂರಿನ ತಮ್ಮ ಮನೆಯಲ್ಲಿ ಇಂದು (ಶುಕ್ರವಾರ) ಶವವಾಗಿ ಪತ್ತೆಯಾಗಿದ್ದಾರೆ.
ಬೆಂಗಳೂರಿನ ಪುಟ್ಟೆನಹಳ್ಳಿಯ ತಮ್ಮ ನಿವಾಸದಲ್ಲಿ ಎಸ್ಪಿ ಶೋಭಾ ಕಟಾವ್ಕರ್ ಸಾವನಪ್ಪಿದ್ದಾರೆ. ಎಸ್ಪಿ ಶೋಭಾ ಕಟಾವ್ಕರ್ ಮನೆಯಲ್ಲಿ ಒಬ್ಬರೇ ಇದ್ದರು ಎಂದು ಹೇಳಲಾಗುತ್ತಿದ್ದು, ಮನೆಯವರೆಲ್ಲಾ ಹಾಸನಕ್ಕೆ ತೆರಳಿದ್ದರು.
ಮನೆಯಲ್ಲಿ ಒಬ್ಬರೇ ಇದ್ದ ಎಸ್ಪಿ ಶೋಭಾ ಕಟಾವ್ಕರ್ ಅವರಿಗೆ ಮನೆಯವರು ಕರೆ ಮಾಡಿದ್ದಾರೆ, ಈ ವೇಳೆ ಎಸ್ಪಿ ಶೋಭಾ ಕರೆ ಸ್ವೀಕರಿಸಿರಲಿಲ್ಲ. ಆಗ ಮನೆಯವರು ಸೆಕ್ಯುರಿಟಿ ಕರೆ ಮಾಡಿ ಪರಿಶೀಲನೆ ಮಾಡಲು ಸೂಚಿಸಿದ್ದಾರೆ. ಈ ವೇಳೆ ಎಸ್ಪಿ ಶೋಭಾ ಕಟಾವ್ಕರ್ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.

ಎಸ್ಪಿ ಶೋಭಾ ಕಟಾವ್ಕರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಈ ಸಂಬಂಧ ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಸಹಜ ಸಾವು ಪ್ರಕರಣ ದಾಖಲಾಗಿದೆ. ಇತ್ತೀಚಿಗೆ ಶೋಭಾ ಕಟಾವ್ಕರ್ ಎಸ್‌ಪಿಯಾಗಿ ಮುಂಬಡ್ತಿ ಪಡೆದು ವರ್ಗಾವಣೆಗೊಂಡಿದ್ದರು.
Recommended Video
ಉಕ್ರೇನ್ ಪರಿಸ್ಥಿತಿ ತುಂಬಾ ಹದಗೆಡ್ತಿದೆ!! | Oneindia Kannada












Click it and Unblock the Notifications