ಎಟಿಎಂ ಯಂತ್ರಕ್ಕೆ ಸ್ಕಿಮ್ಮಿಂಗ್ ಡಿವೈಸ್ ಅಳವಡಿಸಿದ್ದ ವ್ಯಕ್ತಿ ಬಂಧನ
ಬೆಂಗಳೂರು, ನವೆಂಬರ್ 17: ಎಟಿಎಂ ಯಂತ್ರಕ್ಕೆ ಸ್ಕಿಮ್ಮಿಂಗ್ ಉಪಕರಣ ಹಾಗೂ ಕ್ಯಾಮರಾವನ್ನು ಅಳವಡಿಸಿದ್ದ ಉಗಾಂಡ ಪ್ರಜೆಯನ್ನು ಸ್ಥಳೀಯ ಭದ್ರತಾ ಸಿಬ್ಬಂದಿಗಳು ಬಂಧಿಸಿದ್ದಾರೆ. ರಾಜಾಜಿನಗರದ ಎಚ್‌ಡಿಎಫ್‌ಸಿ ಎಟಿಎಂ ಒಂದರಲ್ಲಿ ಎಟಿಎಂ ಯಂತ್ರಕ್ಕೆ ಸ್ಕಿಮ್ಮಿಂಗ್ ಉಪಕರಣ ಅಳವಡಿಸಿದ್ದ.
ನೀರೋ ಇಸ್ಮಾಯಿಲ್ ಬಂಧಿತ ಆರೋಪಿ, ಈತನಿಂದ ಒಂದು ಸ್ಕಿಮ್ಮಿಂಗ್ ಉಪಕರಣ, ಪುಟ್ಟ ಕ್ಯಾಮರಾ, ಮೊಬೈಲ್ ಫೋನ್ ಹಾಗೂ 2 ನಕಲಿ ಎಟಿಎಂ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಜಾಜಿನಗರದ ಎರಡನೇ ಬ್ಲಾಕ್ ಎಂಕೆ ರಸ್ತೆಯಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಎಟಿಎಂ ಕೇಂದ್ರಕ್ಕೆ ಶುಕ್ರವಾರ ಬೆಳಗ್ಗೆ 5.45 ರ ಸುಮಾರಿಗೆ ಆರೋಪಿ ಇಸ್ಮಾಯಿಲ್ ಹಾಗೂ ಮತ್ತೊಬ್ಬ ವಿದೇಶಿ ಪ್ರಜೆ ತೆರಳಿದ್ದರು.

ಎಟಿಎಂ ನಲ್ಲಿ ಹಣ ಡ್ರಾ ಮಾಡಲು ಬರುವ ಗ್ರಾಹಕರು ಕಾರ್ಡ್ ಸ್ವೈಪ್ ಮಾಡಿದಾಗ ಅದರ ಮಾಹಿತಿ ಸ್ಕಿಮ್ಮಿಂಗ್ ಉಪಕರಣದಲ್ಲಿ ದಾಖಲಾಗುವಂತೆ ಗೌಪ್ಯವಾಗಿ ಅಳವಡಿಸಲಾಗುತ್ತದೆ. ಕಿಪ್ಯಾಡ್ ನಲ್ಲಿ ಪಿನ್ ಒತ್ತುತ್ತಿರುವುದು ಸೆರೆಯಾಗುವಂತೆ ಪುಟ್ಟ ಕ್ಯಾಮರಾ ಅಳವಡಿಸಲಾಗುತ್ತದೆ. ಬ್ಯಾಟರಿ ಚಾಲಿತ ಈ ಕಿರು ಉಪಕರಣ ಸೂಕ್ಷ್ಮವಾಗಿ ಎಲ್ಲ ಮಾಹಿತಿಯನ್ನು ಸೆರೆ ಹಿಡಿದುಕೊಳ್ಳುತ್ತದೆ.












Click it and Unblock the Notifications