ಕೋಟಿ ಕೋಟಿ ಹ್ಯಾಶಿಶ್ ಆಯಿಲ್ ಮಾದಕ ವಸ್ತು ಡೀಲಿಂಗ್: ಪ್ರೇಮಿಗಳು ಸೆರೆ

ಬೆಂಗಳೂರು, ಮಾ. 07: ವಿಶಾಖಪಟ್ಟಣಂ ನಿಂದ ಹ್ಯಾಶಿಶ್ ಆಯಿಲ್ ಮಾದಕ ವಸ್ತು ಬೆಂಗಳೂರಿಗೆ ತಂದು ಮಾರಾಟ ಮಾಡುತ್ತಿದ್ದ ಡ್ರಗ್ ಡೀಲ್ ಪ್ರೇಮಿಗಳನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಏಳು ಕೋಟಿ ರೂ.ಮೌಲ್ಯದ 13 ಕೆ.ಜಿ. ಹ್ಯಾಶಿಶ್ ಆಯಿಲ್ ವಶಪಡಿಸಿಕೊಂಡಿದ್ದಾರೆ.

ಕೇರಳ ಮೂಲದ ಸಿಂಗಿಲ್ ಹಾಗೂ ವಿಷ್ಣುಪ್ರಿಯಾ ಹಾಗೂ ವಿಕ್ರಂ ಬಂಧಿತರು. ಇವರಿಂದ ಸುಮಾರು ಏಳು ಕೋಟಿ ಮೌಲ್ಯದ 13 ಕೆ.ಜಿ ತೂಕದ ಹ್ಯಾಶಿಶ್ ಆಯಿಲ್ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. ಇಬ್ಬರೂ ವಿಲಾಸಿ ಜೀವನಕ್ಕಾಗಿ ವಿಶಾಖಪಟ್ಟಣಂನಿಂದ ಹ್ಯಾಶಿಶ್ ಆಯಿಲ್ ತರಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು. ಬೆಂಗಳೂರಿನಲ್ಲಿ ಇಷ್ಟು ಪ್ರಮಾಣದ ಹ್ಯಾಶಿಶ್ ಆಯಿಲ್ ಈವರೆಗೂ ವಶಪಡಿಸಿಕೊಂಡಿಲ್ಲ ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಮಣೇಶ್ವರರಾವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮಾ. 05 ರಂದು ಬಂದ ಖಚಿತ ಮಾಹಿತಿ ಮೇರೆಗೆ ಹುಳಿಮಾವು ಪೊಲೀಸರು ಬೆಂಗಳೂರಿನ ಮಾರುತಿನಗರದ ನಿವಾಸಿ ವಿಕ್ರಂ ನನ್ನು ವಶಕ್ಕೆ ಪಡೆದಿದ್ದಾರೆ. ಅರಕೆರೆ ಗ್ರಾಂದ ಕಾರ್ ಪಾರ್ಕ್ ಬಳಿ ಹ್ಯಾಶಿಶ್ ಆಯಿಲ್ ಮಾರಾಟ ಮಾಡುತ್ತಿದ್ದ ವಿಕ್ರಂನನ್ನು ವಿಚಾರಣೆ ನಡೆಸಿದಾಗ ತಮಿಳುನಾಡು ಮೂಲದ ವಿಷ್ಣು ಪ್ರಿಯಾ ಮತ್ತು ಅಕೆಯ ಲವರ್ ಬಾಯ್ ಸಿಂಗಿಲ್ ಬಗ್ಗೆ ಮಾಹಿತಿ ನೀಡಿದ್ದಾನೆ. ಕೇರಳದ ಕೊಟ್ಟಾಯಂ ಮೂಲದ ಸಿಂಗಿಲ್ ಮತ್ತು ತಮಿಳುನಾಡಿನ ಕೊಯಮತ್ತೂರು ನಿವಾಸಿ ವಿಷ್ಣು ಪ್ರಿಯಾರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸ್ಫೋಟಕ ಸತ್ಯಗಳು ಹೊರ ಬಿದ್ದಿವೆ.

Bengaluru Police Arrest Kerala Based Lovers for Selling Hashish Oil

ಆಂಧ್ರ ಪ್ರದೇಶದ ವಿಶಾಖಪಟ್ಟಣಂನಿಂದ ಹ್ಯಾಶಿಶ್ ಆಯಿಲ್ ತಂದು ಮನೆಯಟ್ಟಿಕೊಂಡು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಸಂಗತಿ ಗೊತ್ತಾಗಿದೆ. ಮನೆ ಮೇಲೆ ದಾಳಿ ಮಾಡಿದಾಗ ಏಳು ಕೋಟಿ ರೂ. ಮೌಲ್ಯದ 12 ಕೆ.ಜಿ. ಹ್ಯಾಶಿಶ್ ಆಯಿಲ್ ಸಿಕ್ಕಿದೆ. ಮೂವರನ್ನು ಹುಳಮಾವು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಈ ಕಾರ್ಯಾಚರಣೆಯನ್ನು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಮಣೇಶ್ವರರಾವ್ ಶ್ಲಾಘಿಸಿದ್ದಾರೆ.

Bengaluru Police Arrest Kerala Based Lovers for Selling Hashish Oil

ಎರಡು ಪ್ರತ್ಯೇಕ ವಾಹನ ಕಳ್ಳತನ ಪ್ರಕರಣ ಪತ್ತೆ ಮಾಡಿರುವ ಆಗ್ನೇಯ ವಿಭಾಗದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ ಎರಡು ಕೋಟಿ ಮೌಲ್ಯದ ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ಡಿಯೋ ಬೈಕ್ ಕಳ್ಳರ ಸೆರೆ:

ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಬರೀ ಡಿಯೋ ಬೈಕ್ ಕದ್ದು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ. ಕೋಲಾರ ಮತ್ತು ಚಿಂತಾಮಣಿಯಲ್ಲಿ ಅತಿ ಹೆಚ್ಚು ಬೈಕ್ ಕದ್ದು ಮಾರಾಟ ಮಾಡಿದ್ದರು. ಈ ಸಂಬಂಧ ಹುಳಿಮಾವು ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳಿಂದ 30 ಲಕ್ಷ ರೂ. ಮೌಲ್ಯದ 40 ವಾಹನ ಜಪ್ತಿ ಮಾಡಿಕೊಳ್ಳಲಾಗಿದ್ದು, ಡಿಯೋ ಹೆಚ್ಚು ಬೈಕ್ ಕದ್ದು ಮಾರಾಟ ಮಾಡಿದ್ದಾರೆ.

Bengaluru Police Arrest Kerala Based Lovers for Selling Hashish Oil

ಮತ್ತೊಂದು ಪ್ರಕರಣದಲ್ಲಿ ಕಾರ್ಯಾಚರಣೆ ನಡೆಸಿದ ಬೇಗೂರು ಪೊಲೀಸರು, ದುಬಾರಿ ಮೌಲ್ಯದ ವಾಹನ ಕದ್ದು ಚಾರ್ಸಿ ನಂಬರ್ ಬದಲಿಸಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಂದೂವರೆ ಕೋಟಿ ರೂ. ಮೌಲ್ಯದ ಆರು ಇನ್ನೋವಾ ಕಾರು, ಒಂದು ಟಯೊಟಾ ಇಟಿಯೋಸ್ ಕಾರು ವಶಪಡಿಸಿಕೊಂಡಿದ್ದಾರೆ.

ದುಬಾರಿ ಮೌಲ್ಯದ ವಾಹನಗಳನ್ನು ಕದ್ದು ಅವುಗಳಿಗೆ ಅಪಘಾತಕ್ಕೀಡಾದ ಕಾರುಗಳ ಚಾರ್ಸಿ ನಂಬರ್ ಮತ್ತು ವಾಹನ ನಂಬರ್ ಕೊಟ್ಟು ಮಾರಾಟ ಮಾಡುತ್ತಿದ್ದರು. ಈ ಕುರಿತು ತಮಿಳುನಾಡು ಮತ್ತು ಕರ್ನಾಟಕ ಗ್ರಾಹಕರಿಗೆ ಮಾರಾಟ ಮಾಡಿ ಮೋಸ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡಸಿ ಮೂವರು ಆರೋಪಿಗಳನ್ನು ಬಂಧಿಸಿದ್ದು, ದುಬಾರಿ ಮೌಲ್ಯದ ಕಾರುಗಳನ್ನು ಸಂಬಂಧಪಟ್ಟವರಿಗೆ ಒಪ್ಪಿಸಿದ್ದಾರೆ. ಪೊಲೀಸರ ಈ ಕಾರ್ಯಾಚರಣೆಯನ್ನು ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಮಣೇಶ್ವರರಾವ್ ಪ್ರಶಂಸೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+