ಮಹಿಳೆಯರಿಗೆಂದೇ ಸಿದ್ಧಗೊಳ್ಳುತ್ತಿವೆ ಪಿಂಕ್ ಮತಗಟ್ಟೆ
ಬೆಂಗಳೂರು, ಮೇ 05: ಭಾರತ ಚುನಾವಣಾ ಆಯೋಗ ಇದೇ ಮೊದಲ ಬಾರಿ ಮಹಿಳೆಯರಿಗಾಗಿ ಪ್ರತ್ಯೇಕ ಮತಗಟ್ಟೆಯನ್ನು ಪರಿಚಯಿಸುತ್ತಿದೆ. ಅದನ್ನು ಗುಲಾಬಿ ಮತಗಟ್ಟೆಗಳೆಂದು ಕರೆಯಲಾಗುತ್ತದೆ.
ಗುಲಾಬಿ ಬಣ್ಣದ ಮತಗಟ್ಟೆಗಳು ಮಹಿಳೆಯರನ್ನು ಸಬಲೀಕರಣಗೊಳಿಸಿ ಮತದಾನ ಪ್ರಕ್ರಿಯೆಯಲ್ಲಿ ಅವರ ಭಾಗವಹಿಸುವಿಕೆ ಹೆಚ್ಚಿಸುವ ಉದ್ದೇಶದವನ್ನು ಚುನಾವಣಾ ಆಯೋಗ ಹೊಂದಿದೆ ಎಂದು ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದೆ.
ಗುಲಾಬಿ ಬಣ್ಣದ ಮತಗಟ್ಟೆಗಳನ್ನು ಸಿದ್ಧಪಡಿಸುವ ಕೆಲಸ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿದೆ. ಗುಲಾಬಿ ಬಣ್ಣದ ಮತಗಟ್ಟೆಗಳ ಗೋಡೆಗಳಿಗೂ ಗುಲಾಬಿ ಬಣ್ಣ ಬಳಿಯಲಾಗುತ್ತಿದೆ. ಈ ರೀತಿಯ ಮತಗಟ್ಟೆಗಳನ್ನು ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಒಟ್ಟು 450 ಮತಗಟ್ಟೆಗಳನ್ನು ತರೆಯಲಾಗುತ್ತದೆ.

ಮತಗಟ್ಟೆ ಅಧಿಕಾರಿ, ಚುನಾವಣಾ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಸೇರಿದಂತೆ ಎಲ್ಲರೂ ಮಹಿಳೆಯರೇ ಇರುತ್ತಾರೆ. ಸಿಬ್ಬಂದಿ ಕೂಡ ಪಿಂಕ್ ಬಣ್ಣದ ವಸ್ತ್ರಗಳನ್ನು ಧರಿಸಿರುತ್ತಾರೆ.











Click it and Unblock the Notifications