Get Updates
Get notified of breaking news, exclusive insights, and must-see stories!

ಸರ್ಕಾರದ ಭಾಷಾ ನೀತಿ ಹುಳುಕು ತೋರಿಸಲು ಚಿತ್ರ ಪ್ರದರ್ಶನ

ಬೆಂಗಳೂರು, ಸೆ. 03: ಭಾರತದ ಕೇಂದ್ರ ಸರ್ಕಾರದ ಭಾಷಾ ನೀತಿ ಹಿಂದಿ ಮತ್ತು ಇಂಗ್ಲಿಷ್ ಎರಡನ್ನೇ ತನ್ನ ಅಧಿಕೃತ ಭಾಷೆಗಳೆಂದು ಗುರುತಿಸಿ, ಈ ಎರಡೇ ಭಾಷೆಯಲ್ಲಿ ತನ್ನೆಲ್ಲ ಆಡಳಿತ ನಡೆಸುತ್ತಿದೆ. ಸರ್ಕಾರದ ಭಾಷಾ ನೀತಿಯಲ್ಲಿನ ಹುಳುಕುಗಳನ್ನು ಚಿತ್ರಗಳ ಮೂಲಕ ಜನತೆ ಮುಂದಿಡಲು ಬನವಾಸಿ ಬಳಗ 'ಚಿತ್ರ ಪ್ರದರ್ಶನ' ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಸರ್ಕಾರದ ಭಾಷಾ ನೀತಿಯಿಂದಾಗಿ ಹಿಂದಿಯೇತರ ಭಾಷಿಕರು ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತದ ಭಾಷಾ ನೀತಿಯಲ್ಲಿನ ತೊಡಕುಗಳೇನು? ಅವು ಹೇಗೆ ಸಾಮಾನ್ಯ ಜನರನ್ನು ತೊಂದರೆಗೀಡು ಮಾಡುತ್ತಿವೆ? ಇದಕ್ಕೆ ಪರಿಹಾರವಾಗಿ ಯಾಕೆ ಬೇಕು? ಇವೇ ಮುಂತಾದ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರ ಕಂಡುಕೊಳ್ಳಬಹುದಾಗಿದೆ. [ಹಿಂದಿ ಹೇರಿಕೆ ವಿರುದ್ಧದ ಟ್ವೀಟ್ ಪ್ರತಿಭಟನೆ ಯಶಸ್ವಿ!]

Photo Exhibition to show case Hindi-English language policy flaws Banavasi Balaga

ಭಾರತದ ಎಲ್ಲ 22 ಶೆಡ್ಯೂಲ್ಡ್ ಭಾಷೆಗಳನ್ನು ಕೇಂದ್ರದ ಅಧಿಕೃತ ಭಾಷೆಯಾಗಿಸಬೇಕು ಅನ್ನುವ ಬಗ್ಗೆ ಬನವಾಸಿ ಬಳಗ ಇದೇ ಸೆಪ್ಟೆಂಬರ್ 13 ಭಾನುವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆರ್ಟ್ ಗ್ಯಾಲರಿಯಲ್ಲಿ ಚಿತ್ರಪ್ರದರ್ಶನ ಹಮ್ಮಿಕೊಂಡಿದೆ. ಬೆಳಿಗ್ಗೆ 10.30ರಿಂದ ಸಂಜೆ 4.30ರವರೆಗೆ ಚಿತ್ರ ಪ್ರದರ್ಶನ ಹಮ್ಮಿಕೊಂಡಿದೆ. ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತ. ನೀವೂ ಬನ್ನಿ, ನಿಮ್ಮ ಗೆಳೆಯರನ್ನು ಕರೆ ತನ್ನಿ.

ಕೇಂದ್ರ ಸರ್ಕಾರದ ಭಾಷಾ ತಾರತಮ್ಯ ಹಾಗೂ ಅನಗತ್ಯ ಹಿಂದಿ ಹೇರಿಕೆ ವಿರೋಧಿಸಿ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಆಗಸ್ಟ್ 15ರಂದು ಹಮ್ಮಿಕೊಂಡಿದ್ದ ಟ್ವಿಟ್ಟರ್ ಅಭಿಯಾನ ಯಶಸ್ವಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

1965ರಿಂದ ಹಿಂದಿಯನ್ನು ಮಾತ್ರ ಅಧಿಕೃತ ಭಾಷೆಯಾಗಿಸುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಹಿಂದಿಯೇತರ ನುಡಿಸಮುದಾಯಗಳ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಯೋಜನೆ ಜಾರಿಗೆ ಮುಂದಾದಾಗ, 1965ರಲ್ಲಿ ದೊಡ್ಡಮಟ್ಟದ ಹೋರಾಟ ನಡೆಯಿತು. ಈಗ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳನ್ನು ಬಳಸಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ.(ಒನ್ ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+