ಕೊರೊನಾ: ಒತ್ತಡ ಹೇರಿ ಪಿಜಿ, ಹಾಸ್ಟೆಲ್ ಖಾಲಿ ಮಾಡಿಸುವಂತಿಲ್ಲ
ಬೆಂಗಳೂರು, ಮಾರ್ಚ್ 20: ನಗರದಲ್ಲಿರುವ ಪಿಜಿ ಹಾಗೂ ಹಾಸ್ಟೆಲ್‌ನಲ್ಲಿರುವವರನ್ನು ಒತ್ತಾಯಪಡಿಸಿ ಖಾಲಿ ಮಾಡಿಸುವಂತಿಲ್ಲ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ. ರವಿಕುಮಾರ್ ತಿಳಿಸಿದ್ದಾರೆ.
ಬಿಬಿಎಂಪಿ ಹಾಸ್ಟೆಲ್ ಹಾಗೂ ಪಿಜಿಯಲ್ಲಿ ಇರುವವರನ್ನು ಖಾಲಿ ಮಾಡಿಸುವಂತೆ ಸೂಚಿಸಿಲ್ಲ. ಬಿಬಿಎಂಪಿಯ ಸೂಚನೆಯಂತೆ ಹಾಸ್ಟೆಲ್ ಮತ್ತು ಪಿಜಿಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ನಿಗದಿಗಿಂತ ಹೆಚ್ಚಿನ ಜನ ದಟ್ಟಣೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಮುಖ್ಯವಾಗಿ ಐಟಿ ಬಿಟಿ ಹಾಗೂ ಇತರೆ ಉದ್ಯೋಗಿಗಳನ್ನು ಖಾಲಿ ಮಾಡಿಸುವಂತೆ ತಿಳಿಸಿಲ್ಲ.
ಕೊರೊನಾ ವೈರಸ್ ಹರಡದಂತೆ ಬಿಬಿಎಂಪಿ ಮಾ.16ರಂದು ನಗರದ ಪೇಯಿಂಗ್ ಗೆಸ್ಟ್ ಹಾಗೂ ಹಾಸ್ಟೆಲ್‌ಗಳಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಸಲಹೆ ಸೂಚನೆಗಳನ್ನು ಮಾಲಿಕರು ತಪ್ಪಾಗಿ ಅರ್ಥ ಮಾಡಿಕೊಂಡು ಪಿಜಿ ಹಾಗೂ ಹಾಸ್ಟೆಲ್‌ನಲ್ಲಿ ಇರುವವರನ್ನು ಒತ್ತಾಯ ಪೂರ್ವಕವಾಗಿ ಖಾಲಿ ಮಾಡಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ.

ಐಟಿ ಬಿಟಿ ಮತ್ತು ಇತರೆ ಉದ್ಯೋಗಿಗಳಿಗೆ ಸಾಧ್ಯವಾದಷ್ಟು ಮನೆಯಿಂದ ಕಾರ್ಯ ನಿರ್ವಹಿಸುವಂತೆ ಶಿಫಾರಸು ಮಾಡಿದ್ದೇನೆ . ಇನ್ನು ಶಾಲಾ ಕಾಲೇಜುಗಳಿಗೆ ರಜೆ ಘೋಚಿಸಲಾಗಿದೆ ಎಂದು ತಿಳಿಸಿದ್ದಾರೆ.












Click it and Unblock the Notifications