ಬೆಡ್ ಆಯ್ತು ಈಗ ವ್ಯಾಕ್ಸಿನ್‌ಗಾಗಿ ಆಸ್ಪತ್ರೆಗಳಿಗೆ ಅಲೆಯುತ್ತಿರುವ ಜನರು !

ಬೆಂಗಳೂರು, ಮೇ. 03: ಬೆಂಗಳೂರಿನಲ್ಲಿ ಒಂದೆಡೆ ಕೊರೊನಾ ಸೋಂಕಿತರಿಗೆ ಬೆಡ್ ಸಿಗದೇ ಪರದಾಟ. ಇದೀಗ ವ್ಯಾಕ್ಸಿನ್‌ಗಾಗಿ ಅಲೆದಾಟ ಆರಂಭವಾಗಿದೆ. ಕೊರೊನಾಗೆ ಮೊದಲ ಡೋಸ್ ವ್ಯಾಕ್ಸಿನ್ ಪಡೆದಿರುವ 45 ವರ್ಷ ಮೇಲ್ಪಟ್ಟವರು ಇದೀಗ ಕಾಲಮಿತಿಯಲ್ಲಿ ಎರಡನೇ ಡೋಸ್ ಪಡೆಯಲೇಬೇಕು. ಆದರೆ, ವ್ಯಾಕ್ಸಿನ್ ಸಿಗದೇ ಇದರಿಂದ ತೊಂದರೆಯಾಗಹುದೇ ಎಂಬ ಆತಂಕಕ್ಕೆ ಒಳಗಾಗಿದ್ದಾರೆ. ಎರಡನೇ ಡೋಸ್‌ಗಾಗಿ ಆಸ್ಪತ್ರೆಗಳಿಗೆ ಅಲೆಯುತ್ತಿದ್ದಾರೆ.

ಸರ್ಕಾರದ ಎವಟ್ಟುಗಳು ಒಂದೊಂದಾಗಿ ಹೊರ ಬೀಳುತ್ತಿವೆ. ಕೊರೊನಾ ಸೋಂಕಿತರಿಗೆ ಸೂಕ್ತ ಬೆಡ್ ಮತ್ತು ವೆಂಟಿಲೇಟರ್, ಆಕ್ಸಿಜನ್ ವ್ಯವಸ್ಥೆ ಮಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದರಿಂದ ಸಾರ್ವಜನಿಕ ಟೀಕೆಗೆ ಗುರಿಯಾಗಿದೆ. ಇದೀಗ ವ್ಯಾಕ್ಸಿನ್ ಪಡೆದು ಜೀವ ಉಳಿಸಿಕೊಳ್ಳಲು ಹೋಗುವರು ಇದೀಗ ವ್ಯಾಕ್ಸಿನ್‌ಗಾಗಿ ಪರದಾಡುತ್ತಿದ್ದಾರೆ. ಮೊದಲ ಡೋಸ್ ವ್ಯಾಕ್ಸಿನ್ ಪಡೆದವರು ಇದೀಗ ಕಾಲಮಿತಿಯಲ್ಲಿ ಎರಡನೇ ಡೋಸ್ ಪಡೆಯಲು ಪರದಾಡುತ್ತಿದ್ದಾರೆ. ವ್ಯಾಕ್ಸಿನ್ ಸಿಗದ ಕಾರಣ ಒಂದು ಡೋಸ್ ವ್ಯಾಕ್ಸಿನ್ ಪಡೆದಿರುವ ಕಾರಣ ಏನಾದರೂ ತೊಂದರೆ ಎದುರಾಗಬಹುದೇ ಎಂಬ ಭಯ ಆವರಿಸಿದೆ. ಹೀಗಾಗಿ ದುಡ್ಡು ಕೊಟ್ಟು ಖಾಸಗಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್ ಪಡೆಯಲು ಜನರು ಮುಗಿ ಬಿದ್ದರೂ ವ್ಯಾಕ್ಸಿನ್ ಸಿಗುತ್ತಿಲ್ಲ. ಒಂದಡೆ ಕೊರೊನಾ ಸಾವುಗಳ ಅವಾಂತರ, ಮತ್ತೊಂದಡೆ ವ್ಯಾಕ್ಸಿನ್ ಪರದಾಟ ಆರಂಭವಾಗಿದೆ.

ಮೊದಲ ಡೋಸ್ ವ್ಯಾಕ್ಸಿನ್ ಪಡೆದ ಬಳಿಕ ಎರಡನೇ ಡೋಸ್ ಪಡೆಯಲು ಸ್ವಲ್ಪ ತಡವಾದರು ಏನೂ ತೊಂದರೆ ಆಗುವುದಿಲ್ಲ. ಕೋವ್ಯಾಕ್ಸಿನ್ ಪಡೆದ ನಾಲ್ಕು ವಾರಗಳ ಅಂತರದಲ್ಲಿ 2 ನೇ ಡೋಸ್ ಪಡೆಯಬೇಕು. ಕೋವಿಶೀಲ್ಡ್ ಆದರೆ ಮೊದಲ ಡೋಸ್ ಪಡೆದ 6 ರಿಂದ 8 ನೇ ವಾರದ ವರೆಗೆ 2 ನೇ ಡೋಸ್ ಪಡೆಯಬಹುದು. ಇದರಲ್ಲಿಕೊಂಚ ಏರು ಪೇರಾದರೂ ಸಮಸ್ಯೆ ಇಲ್ಲ. ಹೀಗಾಗಿ ಜನರು ಆತಂಕಕ್ಕೆ ಒಳಗಾಗುವುದು ಬೇಡ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

Bengaluru: People Throng to hospitals for the corona vaccine!


ರಾಜ್ಯ ಮತ್ತು ರಾಜಧಾನಿಯಲ್ಲಿ ಕೊರೊನಾ ಸೋಂಕಿತರ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. ಕಳೆದ ಹದಿಮೂರು ದಿನದಲ್ಲಿ ಬೆಂಗಳೂರಿನಲ್ಲಿ ಅಧಿಕೃತವಾಗಿ 415 ಮಂದಿ ಕೊರೊನಾಗೆ ಸಾವನ್ನಪ್ಪಿರುವುದು ದಾಖಲೆಗಳಲ್ಲಿ ಉಲ್ಲೇಖವಾಗಿದೆ. ಆದರೆ ವಾಸ್ತವದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರಬಹುದು ಎಂದು ಸ್ಮಶಾನಗಳ ಲೆಕ್ಕಗಳು ಹೇಳುತ್ತವೆ. ಇನ್ನು ರಾಜಧಾನಿಯಲ್ಲಿ ಈ ಪರಿಯ ಕೊರೊನಾ ಸಾವುಗಳಿಗೆ ಕಾರಣ ಆಕ್ಸಿಜನ್ ಕೊರತೆ ಮತ್ತು ಔಷಧಗಳ ಕೊರತೆ, ಇದರ ಜತೆಗೆ ವೆಂಟಿಲೇಟರ್ /ಐಸಿಯು ಸಿಗದೇ ಬೀದಿಯಲ್ಲಿಯೇ ಜೀವ ಬಿಟ್ಟಿದ್ದಾರೆ. ಇದೀಗ ವೈದ್ಯ ಸಿಬ್ಬಂದಿಯ ಕೊರತೆ ಎದುರಾಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಭೀಕರವಾಗಲಿದೆ.

Bengaluru: People Throng to hospitals for the corona vaccine!

ಪ್ರತಿದಿನದ ಸಾವು ವಿವರ :

ಏಪ್ರಿಲ್ 19-97 ಸಾವು

ಏಪ್ರಿಲ್ 20-92 ಸಾವು

ಏಪ್ರಿಲ್ 21-70 ಸಾವು

ಏಪ್ರಿಲ್ 22-68 ಸಾವು

ಏಪ್ರಿಲ್ 23 -124 ಸಾವು

ಏಪ್ರಿಲ್ 24-149 ಸಾವು

ಏಪ್ರಿಲ್ 25 -77 ಸಾವು

ಏಪ್ರಿಲ್ 26 -105 ಸಾವು

ಏಪ್ರಿಲ್ 27-97 ಸಾವು

ಏಪ್ರಿಲ್ 28-137 ಸಾವು

ಏಪ್ರಿಲ್ 29 143 ಸಾವು

ಏಪ್ರಿಲ್ 30-93 ಸಾವು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+