ಪಾವಗಡ ಸೋಲಾರ್ ಪಾರ್ಕ್ ಎಂಟನೇ ಅದ್ಭುತವಂತೆ! ಚಿತ್ರಗಳಲ್ಲಿ ನೋಡಿ
ಬೆಂಗಳೂರು, ಮಾರ್ಚ್ 2: ಪಾವಗಡ ತಾಲೂಕಿನಲ್ಲಿ ನಿರ್ಮಿಸಲಾಗಿರುವ ವಿಶ್ವದ ಬೃಹತ್ ಸೋಲಾರ್ ಪಾರ್ಕ್ ಬುಧವಾರ ಉದ್ಘಾಟನೆಗೊಂಡಿದೆ.
In Picas: ಏಷ್ಯಾದ ಅತೀ ದೊಡ್ಡ ಸೋಲಾರ್ ಪಾರ್ಕಿನ ವಿಹಂಗಮ ನೋಟ
ತಿರುಮಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಯಚರ್ಲು, ವಳ್ಳೂರು ಗ್ರಾಪಂ ವ್ಯಾಪ್ತಿಯ ವೆಂಕಟಮ್ಮನಹಳ್ಳಿ, ಕ್ಯಾತ ಗಾನಚೆರ್ಲು ಬಳಸಮುದ್ರ ಸೇರಿ ಒಟ್ಟು 5 ಗ್ರಾಮಗಳ 13, 000 ಎಕರೆ ಪ್ರದೇಶದಲ್ಲಿ ಕೇಂದ್ರ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ಸಹಯೋಗದಲ್ಲಿ 2,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸೌರಶಕ್ತಿ ಘಟಕ ಸ್ಥಾಪಿಸುವ ಗುರಿ ಹೊಂದಿದೆ.
ಈ ಪಾರ್ಕ್ 15 ಸಾವಿರ ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ರೈತರಿಂದ 25 ವರ್ಷಗಳ ಕಾಲ ಗುತ್ತಿಗೆ ಆಧಾರದ ಮೇಲೆ ಭೂಮಿಯನ್ನು ಪಡೆಯಲಾಗಿದೆ. ಸತತ 40 ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿರುವ ಪಾವಗಡದಲ್ಲಿ ಸ್ಥಳೀಯವಾಗಿ ಸಂಪನ್ಮೂಲ ಕ್ರೋಢೀಕರಿಸಬೇಕೆಂಬ ಉದ್ದೇಶದಿಂದ ಈ ಪಾರ್ಕ್ ನಿರ್ಮಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಲಾರ್ ಪಾರ್ಕ್ ನ್ನು ಎಂಟನೇ ಅದ್ಭುತ ಎಂದು ವರ್ಣಿಸಿದ್ದಾರೆ. ಇದರೊಂದಿಗೆ ಮಾರ್ಚ್ 1 ರಂದು ದೇಶದಲ್ಲಿ ನಡೆದ ಇನ್ನಿತರೆ ಘಟನೆಗಳ ಚಿತ್ರಗಳನ್ನು ಕೂಡ ನೋಡಬಹುದಾಗಿದೆ.

ಪಾವಗಢ ಸೋಲಾರ್ ಪಾರ್ಕ್ ಪ್ಯಾನೆಲ್ ಪರಿಶೀಲನೆ
ಕೆಲಸಗಾರರು ಪ್ರತಿ ನಿತ್ಯ ಸೋಲಾರ್ ಪ್ಯಾನೆಲ್ ಗಳ ಪರಿಶೀಲನೆ ನಡೆಸುತ್ತಾರೆ. ಈ ಸೋಲಾರ್ ಪಾರ್ಕ್ ಬೆಂಗಳೂರಿನಿಂದ 150 ಕಿಮೀ ದೂರದಲ್ಲಿದೆ.

ಪಾವಗಡ ಸೋಲಾರ್ ಪಾರ್ಕ್ ನಲ್ಲಿ ಸಿದ್ದರಾಮಯ್ಯ ಜನತೆಯನ್ನುದ್ದೇಶಿಸಿ ಭಾಷಣ
ಪಾವಗಡದಲ್ಲಿ ನಿರ್ಮಾಣವಾದ ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್ ಉದ್ಘಾಟನೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಜನತೆಯನ್ನುದ್ದೇಶಿಸಿ ಮಾತನಾಡುತ್ತಿರುವುದು.

ಮಹಿಳೆಯ ಮೂತ್ರಕೋಶದಲ್ಲಿ 99 ಕಲ್ಲುಗಳು
ತುಮಕೂರಿನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ 45 ವರ್ಷದ ಸಲ್ಮಾ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡುವ ಮೂತ್ರಕೋಶದಿಂದ ವೈದ್ಯರು 99 ಕಲ್ಲುಗಳನ್ನು ಹೊರತೆಗದಿದ್ದಾರೆ.

ಅಳಿಲು ಜೋಳವನ್ನು ತಿನ್ನುತ್ತಿರುವ ದೃಶ್ಯ
ತಾಂಜಾವೂರ್ ನಲ್ಲಿ ಅಳಿಲೊಂದು ಗೋಡೆಯ ಮೇಲೆ ಕುಳಿತು ಜೋಳದ ಕಾಳುಗಳನ್ನು ತಿನ್ನುತ್ತಿರುವ ದೃಶ್ಯ ಕಂಡುಬಂದಿದ್ದು ಹೀಗೆ

ವರನ ಆಯ್ಕೆಗೆ ಸಿಂಗಾರಗೊಂಡು ತೆರಳುತ್ತಿರುವ ಯುವತಿಯರು
ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯಲ್ಲಿ ಬೀಲ್ ಎನ್ನುವ ಆದಿವಾಸಿ ಯುವತಿಯರು ಅಲ್ಲಿ ನಡೆಯುವ ಭಗೋರಿಯಾ ಹಾತ್ ಹಬ್ಬದಲ್ಲಿ ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಸಿಂಗಾರಗೊಂಡು ಜೀಪಿನಲ್ಲಿ ಹೋಗುತ್ತಿರುವುದು.












Click it and Unblock the Notifications