ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಾರ್ಕಿಂಗ್ ಸಮಸ್ಯೆ: ಬಿಬಿಎಂಪಿಯಿಂದ ಪೇ ಆಂಡ್ ಪಾರ್ಕ್

|
Google Oneindia Kannada News

ಬೆಂಗಳೂರು ಜು.7: ಬೆಂಗಳೂರಿನಲ್ಲಿ ವಾಹನ ನಿಲುಗಡೆ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪೇ ಆಂಡ್ ಪಾರ್ಕ್ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ಅದಕ್ಕಾಗಿ ಈಗಾಗಲೇ ಸ್ವಾತಂತ್ರ್ಯ ಉದ್ಯಾನದಲ್ಲಿ ನಿರ್ಮಿಸಿರುವ ಬಹುಮಹಡಿ ವಾಹನ ನಿಲುಗಡೆ ತಾಣ (ಎಂಎಲ್‌ಸಿಪಿ)ಕ್ಕೆ ಐದು ವರ್ಷದ ಅವಧಿಗೆ ಟೆಂಡರ್ ಆಹ್ವಾನಿಸಲಿದೆ.

ಮೆಜೆಸ್ಟಿಕ್ ಸುತ್ತಮುತ್ತಲಿನ ಪ್ರದೇಶಗಲ್ಲಿ ವಾಹನ ನಿಲುಗಡೆ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ಇದರ ಪರಿಹಾರಾರ್ಥವಾಗಿ ಬಿಬಿಎಂಪಿ ಸ್ವಾತಂತ್ರ್ಯ ಉದ್ಯಾನದಲ್ಲಿ ಬಹಮಹಡಿ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳಿಸಿದೆ. ಜತೆಗೆ ಗಾಂಧಿನಗರ ಭಾಗದಲ್ಲಿ 12 ಕಡೆಗಳಲ್ಲಿ ಪಾರ್ಕಿಂಗ್ ಬೇ ನಿರ್ಮಿಸಲು ಚಿಂತಿಸಿದೆ. ಅಲ್ಲಿನ ಪಾರ್ಕಿಂಗ್ ನಿರ್ವಹಣೆಗಾಗಿ ಟೆಂಡರ್ ಕರೆಯಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ.

ಅಂದಾಜು 79.81 ಕೋಟಿ ರೂ. ವೆಚ್ಚದಲ್ಲಿ ಸ್ವಾತಂತ್ರ್ಯ ಉದ್ಯಾನದಲ್ಲಿ ಕಾರು, ದ್ವಿಚಕ್ರ ವಾಹನ ಪೇ ಆಂಡ್ ಪಾರ್ಕಿಂಗ್ ಗಾಗಿ ಬಹುಮಹಡಿ ಕಟ್ಟಡದ ವ್ಯವಸ್ಥೆಯ ಕಾಮಗಾರಿ ಈಗಾಗಲೇ ಮುಕ್ತಾಯವಾಗಿರುತ್ತದೆ. ಈ ಕಟ್ಟಡದ ಮೇಲ್ಬಾಗ (ಪ್ರತಿಭಟನೆ ಮಾಡುವ ಸ್ಥಳ)ದಲ್ಲಿ ರೂಫ್ ಪ್ರಸ್ ಕಾಮಗಾರಿ ಕೂಡಾ ಪೂರ್ಣಗೊಂಡಿದೆ. ಕಟ್ಟಡಕ್ಕೆ ಸೌರ ವಿದ್ಯುತ್(ಸೋಲಾರ್) ಅಳವಡಿಕೆ ಕೂಡಾ ಪೂರ್ಣಗೊಂಡಿದೆ. ಆದರೆ ಆದರೆ ಕಳೆದ ಎರಡು ತಿಂಗಳಲ್ಲಿ ಹೆಚ್ಚು ಪ್ರತಿಭಟನೆಗಳು ನಡೆದ ಕಾರಣ ಸೋಲಾರ್ ಗೆ ಸಂಪರ್ಕ ನೀಡುವುದು ಮಾತ್ರ ಬಾಕಿಯಿದೆ.

ಐದು ವರ್ಷಕ್ಕೆ ಟೆಂಡರ್ ಆಹ್ವಾನ

ಐದು ವರ್ಷಕ್ಕೆ ಟೆಂಡರ್ ಆಹ್ವಾನ

ಬಹುಮಹಡಿ ವಾಹನ ನಿಲುಗಡೆ ತಾಣ (ಎಂಎಲ್‌ಸಿಪಿ) ಗಾಗಿ ಈಗಾಗಲೇ ಈಗಾಗಲೇ ಟೆಂಡರ್ ಕರೆಯಲಾಗಿತ್ತು. ಆದರೆ ಟೆಂಡರ್ ಪ್ರಕ್ರಿಯೆಯಲ್ಲಿ ಯಾರೂ ಪಾಲ್ಗೊಂಡಿಲ್ಲ. ಹೀಗಾಗಿ ಟೆಂಡರ್ ನ ಕೆಲವು ಷರತ್ತುಗಳನ್ನು ಮಾರ್ಪಾಡು ಮಾಡಿ ಎಂಎಲ್‌ಸಿಪಿ ಗೆ 5 ವರ್ಷಕ್ಕೆ ಟೆಂಡರ್ ಕರೆಯಲಾಗುವುದು ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಬಹುಮಹಡಿ ಕಟ್ಟಡದ ವಿಶೇಷತೆ

ಬಹುಮಹಡಿ ಕಟ್ಟಡದ ವಿಶೇಷತೆ

79.81 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಬಹುಮಹಡಿ ವಾಹನ ನಿಲುಗಡೆ ತಾಣ (ಎಂಎಲ್‌ಸಿಪಿ)ಕ್ಕೆ ಪ್ರವೇಶಿಸಲು ಮತ್ತು ಹೊರ ಹೋಗಲು (ಎಕ್ಸಿಟ್) ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ನಿಲುಗಡೆಗೆ ಸಮರ್ಪಕ ಚಾಲನಾ ಪಥ, ಬೆಂಕಿ ಅವಘಡ ಸಂಭವಿಸಿದಂತೆ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ವಾಹನ ನಿಲುಗಡೆ ಸ್ಥಳದ ಪಕ್ಕ ಎರಡು ಕಡೆಗಳಲ್ಲಿ ಮೆಟ್ಟಿಲುಗಳ ವ್ಯವಸ್ಥೆ, ಒಂದು ತುರ್ತು ಎಕ್ಸಿಟ್ ವ್ಯವಸ್ಥೆ ಮಾಡಲಾಗಿದೆ. ಕಟ್ಟಡ ನಿರ್ವಹಣಾ ಕೊಠಡಿ, ರಕ್ಷಣಾ ಸಿಬ್ಬಂದಿ ಕೊಠಡಿ, ಶೌಚಾಲಯ ಸೌಲಭ್ಯ, ವಿದ್ಯುತ್ ವ್ಯವಸ್ಥೆಯನ್ನು ಈ ಬಹುಮಹಡಿ ಕಟ್ಟಡ ಒಳಗೊಂಡಿದೆ.

ಎಂಎಲ್‌ಸಿಪಿ ವಾಹನ ಸಾಮರ್ಥ್ಯ:

ಎಂಎಲ್‌ಸಿಪಿ ವಾಹನ ಸಾಮರ್ಥ್ಯ:

ಬಹುಮಹಡಿ ಕಟ್ಟಡ ಮೂರು ನೆಲಮಹಡಿ ಒಳಗೊಂಡಿದೆ. ಮೊದಲ ನೆಲಮಹಡಿಯಲ್ಲಿ 445ದ್ವಿಚಕ್ರ ವಾಹನ ಮತ್ತು 118 ಕಾರು ಸೇರಿದಂತೆ ನಾಲ್ಕು ಚಕ್ರದ ವಾಹನ ನಿಲ್ಲಿಸಬಹುದಾಗಿದೆ. ಎರಡನೇ ನೆಲಮಹಡಿಯಲ್ಲಿ 219 ಹಾಗೂ ಮೂರನೇ ನೆಲಮಹಡಿಯಲ್ಲಿ 219 ಕಾರು ಸೇರಿದಂತೆ ನಾಲ್ಕು ಚಕ್ರದ ವಾಹನಗಳಿಗೆ ಮಾತ್ರ ನಿಲುಗಡೆಗೆ ಅವಕಾಶ ನೀಡಲಾಗಿದೆ.

12 ಕಡೆಗಳಲ್ಲಿ ಪಾರ್ಕಿಂಗ್ ಬೇ

12 ಕಡೆಗಳಲ್ಲಿ ಪಾರ್ಕಿಂಗ್ ಬೇ

ಸ್ವಾತಂತ್ರ್ಯ ಉದ್ಯಾನದ ಎಂಎಲ್‌ಸಿಪಿ ಜತೆಗೆ ಗಾಂಧಿನಗರ ವ್ಯಾಪ್ತಿಯಲ್ಲಿ ಬಿಬಿಎಂಪಿ 12 ಕಡೆಗಳಲ್ಲಿ ಪಾರ್ಕಿಂಗ್ ಬೇ ನಿರ್ಮಿಸಲು ಚಿಂತಿಸಿದೆ. ಅದಕ್ಕಾಗಿ ಸದ್ಯದಲ್ಲೇ ಟೆಂಡರ್ ಆಹ್ವಾನಿಸಲಿದೆ. ಗಾಂಧಿನಗರದ ಯಾದವ ಹೋಟೆಲ್ ಪಕ್ಕ ರಸ್ತೆ, ನಾಲ್ಕನೆ ಮುಖ್ಯ ರಸ್ತೆ, ಸಪ್ನಾ ಬುಕ್ ಹೌಸ್ ರಸ್ತೆ, ಡಬ್ಲು ಎಚ್. ಹನುಮಂತಪ್ಪ ರಸ್ತೆ, ವೈ.ರಾಮಚಂದ್ರ ರಸ್ತೆ, ಸ್ವಾತಂತ್ರ್ಯ ಉದ್ಯಾನ ಪ್ರವೇಶಿಸುವ ರಸ್ತೆ, 1ನೇ, 5ನೇ ಮತ್ತು 6ನೇ ಕ್ರಾಸ್, 2ನೇ ಮುಖ್ಯರಸ್ತೆ ಸೇರಿದಂತೆ ಒಟ್ಟು 12ಕಡೆ ಪಾರ್ಕಿಂಗ್ ಬೆ ನಿರ್ಮಾಣಗೊಳ್ಳಲಿವೆ.

Recommended Video

Bhagwant Mann Singhಗೆ ಮದುವೆಯಲ್ಲಿ Kejriwal ಮುಖ್ಯ ಅತಿಥಿ | *India | OneIndia Kannada

English summary
Bruhat Bengaluru Mahanagara Palike (BBMP) has decided to implement a pay and park system to solve the problem of parking in Bengaluru, then bbmp will be tender invited for a period of five year of 'Multi Level Car Park' which has already constructed completed in freedom park,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X