BMTC: ಮಹಿಳೆಯರಿಗೆ ಗುಡ್‌ನ್ಯೂಸ್‌, ಎಲ್ಲಾ ಹೆಣ್ಣುಮಕ್ಕಳು ತಿಳಿದುಕೊಳ್ಳಲೇಬೇಕಾದ ವಿಚಾರ ಇದು..!

ಬೆಂಗಳೂರು, ನವೆಂಬರ್ 29: ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುವಂತಹ ಘಟನೆಗಳು ನಡೆಯುತ್ತಲೇ ಇರುತ್ತದೆ. ಮಹಿಳೆಯರ ಸುರಕ್ಷತೆಗೆ ಎಷ್ಟೇ ಕ್ರಮ ಕೈಗೊಂಡರೂ ಸಹ ಕೂಡ ಕೆಲ ಕಿಡಿಗೇಡಿಗಳು ಸಾರ್ವಜನಿಕ ಸ್ಥಳದಲ್ಲೇ ಮಹಿಳೆಯರಿಗೆ ತೊಂದರೆ ಕೊಡುತ್ತಾರೆ. ಇಂತಹ ಘಟನೆಗಳು ಇತ್ತೀಚಿಗೆ ಹೆಚ್ಚಾಗುತ್ತಲೇ ಇದೆ.

ಶಕ್ತಿ ಯೋಜನೆಯ ಬಳಿಕ ಬಹುತೇಕ ಮಹಿಳೆಯರು ಸಾರಿಗೆ ಬಸ್‌ಗಳಲ್ಲೇ ಸಂಚಾರ ನಡೆಸುತ್ತಿದ್ದಾರೆ. ಇದರಿಂದ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳು ಮಹಿಳಾ ಪ್ರಯಾಣಿಕರಿಂದಲೇ ತುಂಬಿತುಳುಕುತ್ತಿರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಕಾಮುಕರು ರಶ್‌ ಇರುವ ಬಸ್‌ನಲ್ಲಿ ಹತ್ತಿ ಮಹಿಳೆಯರ ಗುಂಪಿನಲ್ಲೇ ನಿಂತು ಕಿರುಕುಳ ನೀಡುತ್ತಿರುತ್ತಾರೆ.

Panic Button Installed In BMTC Buses For Women Safety

ಸಾರ್ವಜನಿಕರ ಸಾರಿಗೆಯಲ್ಲಿ ಮಹಿಳೆಯರಿಗೆ ಕಿರುಕುಳ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಿಎಂಟಿಸಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಬಸ್​ನಲ್ಲಿ ಹೆಣ್ಣುಮಕ್ಕಳಿಗೆ ಸುರಕ್ಷತೆ ಕಲ್ಪಿಸಲು ಹಾಗೂ ಮಹಿಳಾ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಬಿಎಂಟಿಸಿ ಅಧಿಕಾರಿಗಳು ಮತ್ತೊಂದು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಸಾರಿಗೆ ಬಸ್‌ಗಳಲ್ಲಿ ಮಹಿಳೆಯರು ನಿರ್ಭಿತಿಯಿಂದ ಸಂಚಾರ ನಡೆಸಲು ಇನ್ಮುಂದೆ ಬಸ್‌ಗಳಲ್ಲಿ ಹೊಸ ಅಸ್ತ್ರ ಉಪಯೋಗವಾಗಲಿದೆ.

ಮಹಿಳಾ‌ ಪ್ರಯಾಣಿಕರ ಆತಂಕ ಹೋಗಲಾಡಿಸಲು ಬಸ್​ನಲ್ಲಿ ಪ್ಯಾನಿಕ್ ಬಟನ್​ಗೆ ಹೊಸ ಟಚ್ ಕೊಡಲು ಬಿಎಂಟಿಸಿ ಅಧಿಕಾರಿಗಳು ಮುಂದಾಗಿದ್ದಾರೆ. ಬಿಎಂಟಿಸಿ ಬಸ್‌ಗಳ ಸೀಟುಗಳ ಸಮೀಪದಲ್ಲೇ ಪ್ಯಾನಿಕ್ ಬಟನ್ ಅಳವಡಿಕೆಯಾಗಲಿದ್ದು, ಮಹಿಳೆಯರು ತುರ್ತು ಸಮಯದಲ್ಲಿ ಇದನ್ನು ಬಳಸಬಹುದಾಗಿದೆ. ಬಸ್‌ನಲ್ಲಿ ಯಾರಾದರೂ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದರೆ, ಕಿರುಕುಳ ನೀಡಿದರೆ ಬಸ್‌ಗಳ ಸೀಟುಗಳ ಸಮೀಪದಲ್ಲೇ ಇರುವ ಪ್ಯಾನಿಕ್ ಬಟನ್‌ ಅನ್ನು ಒತ್ತಬೇಕು.

ಪ್ಯಾನಿಕ್ ಬಟನ್ ಕ್ಲಿಕ್ ಆಗುತ್ತಿದ್ದಂತೆ ಬಸ್‌ ಇರುವ ಸ್ಥಳದ ಮಾಹಿತಿ ಜೊತೆಗೆ ಬಿಎಂಟಿಸಿ ಕಂಟ್ರೋಲ್ ರೂಮ್​ಗೆ ಮೆಸೇಜ್ ಹೋಗುತ್ತದೆ. ಬಸ್‌ನಿಂದ ಅಲರ್ಟ್‌ ಬರುತ್ತಿದ್ದಂತೆ ಬಿಎಂಟಿಸಿ ಭದ್ರತಾ ಸಿಬ್ಬಂದಿ ಬಸ್‌ ಇರುವ ಸ್ಥಳಕ್ಕೆ ಬಂದು ಮಹಿಳೆಯರಿಗೆ ರಕ್ಷಣೆ ಕೊಡಲಿದ್ದಾರೆ. ಅಲ್ಲದೇ ತಪ್ಪಿತಸ್ಥರ ವಿರುದ್ಧ ಸ್ಥಳದಲ್ಲೇ ಕ್ರಮ ಕೈಗೊಳ್ಳಲಿದ್ದಾರೆ. ಈ ಬಗ್ಗೆ ಪ್ರಕರಣ ಕೂಡ ದಾಖಲಾಗಲಿದ್ದು ಈ ಮೂಲಕ ಬಸ್‌ನಲ್ಲಿ ನಡೆಯುವ ಮಹಿಳೆಯ ಮೇಲೆ ನಡೆಯುವ ದೌರ್ಜನ್ಯಕ್ಕೆ ಬ್ರೇಕ್‌ ಹಾಕಲು ಬಿಎಂಟಿಸಿ ಅಧಿಕಾರಿಗಳು ಮುಂದಾಗಿದ್ದಾರೆ.

ಇನ್ನು ಈಗಾಗಲೇ ಕೆಲವು ಬಸ್‌ಗಳಲ್ಲಿ ಪ್ಯಾನಿಕ್ ಬಟನ್‌ಯಿದ್ದು, ಆ ಪ್ಯಾನಿಕ್ ಬಟನ್ ಕ್ಲಿಕ್‌ ಮಾಡಿದರೆ ಮೊದಲು ಮಾಹಿತಿ ಅದೇ ಬಸ್​ನಲ್ಲಿದ್ದ ಡ್ರೈವರ್ ಅಥವಾ ಕಂಡಕ್ಟರ್​ಗಳಿಗೆ ಹೋಗುತ್ತಿತ್ತು. ಆದರೆ ಇದೀಗ ಹೊಸ ತಂತ್ರಜ್ಙಾನದ ಮೂಲಕ ಮಾಹಿತಿ ನೇರವಾಗಿ ಬಿಎಂಟಿಸಿ ಭದ್ರತಾ ಸಿಬ್ಬಂದಿಗೆ ಮಾಹಿತಿ ರವಾನೆಯಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+