ಗಾಲ್ಫ್ ಕ್ಲಬ್ ಬಾಡಿಗೆ ಹೆಚ್ಚಾಗುತ್ತಾ? ವಿಧಾನಸಭೆ ಲೆಕ್ಕಪತ್ರ ಸಮಿತಿ ಭೇಟಿ
ಬೆಂಗಳೂರು, ನವೆಂಬರ್ 27: ವಿಧಾನಸಭೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ರಾಜಧಾನಿಯ ಅತಿ ಪ್ರಮುಖ ಸ್ಥಳಗಳಲ್ಲಿರುವ ಗಾಲ್ಫ್ ಕ್ಲಬ್‌ಗೆ ಮಂಗಳವಾರ ಭೇಟಿ ನೀಡುತ್ತಿದೆ.
ರಾಜಧಾನಿಯ ಅತಿ ಪ್ರಮುಖ ಸ್ಥಳದಲ್ಲಿರುವ ಗಾಲ್ಫ್ ಕ್ಲಬ್‌ಗೆ ಗುತ್ತಿಗೆ ಬಾಡಿಗೆ ಪರಿಷ್ಕರಣೆ ಮಾಡದಿರುವುದು ಮತ್ತು ಕಡಿಮೆ ಗುತ್ತಿಗೆ ಬಾಡಿಗೆ ಸಂಬಂಧ ಪರೀಕ್ಷಿಸಲು ವಿಧಾನಸಭೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಭೇಟಿ ನೀಡಲಿದೆ.
ಶಾಸಕರ ಭವನದಲ್ಲಿ ಬೆಳಗ್ಗ ಸಭೆ ನಡೆಸಿದ ಬಳಿಕ ಕ್ಲಬ್‌ಗೆ ಭೇಟಿ ನೀಡಿ ಪರಿವೀಕ್ಷಣೆ ನಡೆಸಲಿದೆ. ಗಾಲ್ಫ್ ಕ್ಲಬ್ ಬಾಡಿಗೆ ಪರಿಷ್ಕರಿಸದಿರುವುದು ಮತ್ತು 2004-5ನೇ ಸಾಲಿನಲ್ಲಿ ಕಡಿಮೆ ಗುತ್ತಿಗೆ ಭಾಡಿಗೆ ಕುರಿತು 2008-9ನೇ ಸಾಲಿನ ಇಸಿಎಜಿ ಸಮಿತಿಯಲ್ಲಿ ಉಲ್ಲೇಖಿಸಲಾಗಿತ್ತು.

ಆರ್ ಅಶೋಕ್ ಅಧ್ಯಕ್ಷರಾಗಿರುವ ಸಮಿತಿಯಲ್ಲಿ ಎಚ್‌ಕೆ ಪಾಟೀಲ್, ಕೆ ಸುಧಾಕರ್, ನರೇಂದ್ರ ಎಚ್ ವಿಶ್ವನಾಥ್, ಸಿಎನ್ ಬಾಲಕೃಷ್ಣ, ಬಸವರಾಜ ಬೊಮ್ಮಾಯಿ, ಸಿಎಂ ಇಬ್ರಾಹಿಂ ಇದ್ದರು.












Click it and Unblock the Notifications