ಮತದಾರರ ಕರಡು ಪಟ್ಟಿ ಪ್ರಕಟ: ಬೆಂಗಳೂರಿನಲ್ಲಿ 86 ಲಕ್ಷ ಮತದಾರರು

Recommended Video

      ಬೆಂಗಳೂರಿನಲ್ಲಿ 86 ಲಕ್ಷ ಮತದಾರರಿದ್ದಾರೆ | Bengaluru has over 85 lakh voters | Oneindia Kannada

      ಬೆಂಗಳೂರು, ಡಿಸೆಂಬರ್ 21 : ಬೆಂಗಳೂರು ನಗರ ಜಿಲ್ಲೆಯ 28 ವಿಧಾನಸಭಾ ಕ್ಷೇತ್ರಗಳಲ್ಲಿನ 86 ಲಕ್ಷ ಮತದಾರರು ಮುಂಬರುವ ವಿಧಾನ ಸಭಾ ಚುನಾವಣಾ ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ.

      ಮತದಾರರ ಕರಡು ಪಟ್ಟಿ ಪ್ರಕಟಿಸಲಾಗಿದ್ದು, 86 ಲಕ್ಷ ಮತದಾರರಿದ್ದಾರೆ. ಹೊಸದಾಗಿ ಹೆಸರು ಸೇರ್ಪಡೆ ಸೇರಿ ಇನ್ನಿತರ ಬದಲಾವಣೆಗಳಿದ್ದರೆ ಡಿ.29ರವರೆಗಗೆ ಅವಕಾಶ ಕಲ್ಪಿಸಲಾಗಿದೆ.

      ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಸಿದದವರಿಗೆ ಎಪಿಕ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಗುರುತಿನ ಚೀಟಿ ಕಳೆದುಕೊಂಡವರಿಗೆ ಉಚಿತವಾಗಿ ನಕಲಿ ಕಾರ್ಡ್ ನೀಡಲಾಗುತ್ತದೆ.ಪದವೀಧರ ಕ್ಷೇತ್ರ ಚುನಾವಣೆಯ ಮತದಾರರ ಅಂತಿಮ ಪಟ್ಟಿಯನ್ನು ಫೆ.15ರಂದು ಪ್ರಕಟಿಸಲಾಗುತ್ತದೆ.

      ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರ ಜಿಲ್ಲೆಯ 28 ವಿಧಾನಸಭಾ ಕ್ಷೇತ್ರಗಳ ಮತದಾರರ ಕರಡು ಪಟ್ಟಿ ಪ್ರಕಟಿಸಿ ಚುನಾವಣಾ ಆಯೋಗದ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.

      ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳು: ರಾಜರಾಜೇಶ್ವರಿ ನಗರ, ಶಿವಾಜಿನಗರ, ಶಾಂತಿ ನಗರ, ಗಾಂಧಿನಗರ, ರಾಜಾಜಿನಗರ, ಚಾಮರಾಜಪೇಟೆ, ಚಿಕ್ಕಪೇಟೆ, ಕೆ.ಆರ್.ಪುರಂ, ಮಹಾಲಕ್ಷ್ಮೀ ಲೇಔಟ್, ಮಲ್ಲೇಶ್ವರಂ, ಹೆಬ್ಬಾಳ, ಪುಲಿಕೇಶಿ ನಗರ, ಸರ್ವಜ್ಞ ನಗರ, ಸಿ.ವಿ.ರಾಮನ್ ನಗರ, ಗೋವಿಂದರಾಜ ನಗರ, ವಿಜಯನಗರ, ಬಸವನಗುಡಿ, ಪದ್ಮನಾಭ ನಗರ, ಬಿಟಿಎಂ ಲೇಔಟ್, ಜಯನಗರ, ಬೊಮ್ಮನಹಳ್ಳಿ, ಯಲಹಂಕ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹದೇವಪುರ, ಬೆಂಗಳೂರು ದಕ್ಷಿಣ, ಆನೇಕಲ್.

      ಮತದಾರರ ಪಟ್ಟಿಯಲ್ಲಿ ತಪ್ಪುಗಳಿದ್ದರೆ ಸಂಪರ್ಕಿಸಿ

      ಮತದಾರರ ಪಟ್ಟಿಯಲ್ಲಿ ತಪ್ಪುಗಳಿದ್ದರೆ ಸಂಪರ್ಕಿಸಿ

      ಪಟ್ಟಿಯಲ್ಲಿ ತಪ್ಪುಗಳಿದ್ದರೆ ಸರಿಪಡಿಸುವುದು ಹಾಗೂ ಹೊಸದಾಗಿ ಹೆಸರು ಸೇರಸಲು ಡಿ.29 ರೋಳಗೆ ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿಗಳ ಕಚೇರಿ, ಮತದಾರರ ಸಲಹಾ ಕೇಂದ್ರ ಸಹಾಯಕ ಮತದಾರರ ನೋಂದಣಾಧಿಕಾರಿ 198 ವಾರ್ಡ್ ಕಚೇರಿ, ಸಕಾಲ ಕೇಂದ್ರ, ನಾಗರಿಕ ಕೇಂದ್ರ ಹಾಗೂ ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬೇಕಿದೆ ಎಂದು ಬಿಬಿಎಂಪಿ ಆಯುಕ್ತ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

      ಬೆಂಗಳೂರು ದಕ್ಷಿಣದಲ್ಲೇ ಅತಿ ಹೆಚ್ಚು ಮತದಾರರು

      ಬೆಂಗಳೂರು ದಕ್ಷಿಣದಲ್ಲೇ ಅತಿ ಹೆಚ್ಚು ಮತದಾರರು

      ಕರಡು ಪಟ್ಟಿಯಂತೆ 28 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 85,92,815 ಮತದಾರರಿದ್ದಾರೆ. ಅದರಲ್ಲಿ 45,05,752 ಪುರುಷ ಮತ್ತು40,87,062 ಮಹಿಳಾ ಮತದಾರರು. ಈವರೆಗೆ 7, 712 ಮತಗಟ್ಟೆಗಳಿದ್ದವು. ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿ 1,400 ಮತದಾರರಿಗೊಂದು ಮತಗಟ್ಟೆ ಸ್ಥಾಪಿಸುವಂತೆ ತಿಳಿಸಲಾಗಿದೆ. ಅದರಂತೆ ಈಗ 8, 284 ಮತಗಟ್ಟೆಗಳನ್ನು ರಚಿಸಲಾಗಿದೆ. ಬೆಂಗಳೂರು ದಕ್ಷಿಣದಲ್ಲಿ 5,58,670 ಮತದಾರರಿದ್ದರೆ ಶಿವಾಜಿನಗರದಲ್ಲಿ 1,89,480 ಅತಿ ಕಡಿಮೆ ಮತದಾರರಿರುವ ಪ್ರದೇಶವಾಗಿದೆ.

      ಡಿ.29 ರೊಳಗೆ ಸಲ್ಲಿಸುವ ಅರ್ಜಿಗಳನ್ನು ಜ.20ರೊಳಗೆ ವಿಲೇವಾರಿ ಮಾಡಲಾಗುತ್ತದೆ. ಫೆ.15ರಂದು ಮತದಾರರ ಅಂತಿಮ ಪಟ್ಟಿ ಪ್ರಕಿಸಲಾಗುತ್ತದೆ. ಚುನಾವಣಾ ಪ್ರಕ್ರಿಯೆಯಲ್ಲಿ ಎಲ್ಲರೂ ಭಾಗವಹಿಸುವ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಸಲು ರಾಜಕೀಯ ಪಕ್ಷಗಳ ಮುಖಂಡರು, ವಸತಿ ಕ್ಷೇಮಾಭಿವೃದ್ಧಿ ಸಂಘಗಳು ಜನರಿಗೆ ತಿಳಿಹೇಳಬೇಕಾಗಿದೆ.

      ಚುನಾವಣಾ ಸಿಬ್ಬಂದಿಗಳು ಚುನಾವಣಾ ಕಾರ್ಯಕ್ಕೆ ಬಾರದಿದ್ದರೆ ಕೇಸ್

      ಚುನಾವಣಾ ಸಿಬ್ಬಂದಿಗಳು ಚುನಾವಣಾ ಕಾರ್ಯಕ್ಕೆ ಬಾರದಿದ್ದರೆ ಕೇಸ್

      ಚುನಾವಣಾ ಕಾರ್ಯಕ್ಕೆ ಗೈರಾಗುವ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುತ್ತದೆ. ಚುನಾವಣಾ ಕಾರ್ಯಕ್ಕೆ ತರಬೇತಿ ನೀಡಲು 5,518 ಮಂದಿ ನಿಯೋಜನೆ ಮಾಡಲಾಗಿದೆ. ಈ ಪೈಕಿ 1,949ಮಂದಿ ತರಬೇತಿಗೆ ಹಾಜರಾಗಿಲ್ಲ.

      ಅವರ ವಿರುದ್ಧ ಕ್ರಮ ಜರುಗಿಸುವಂತೆ ಎಲ್ಲ ವಲಯಗಳ ಜಂಟಿ ಆಯುಕ್ತರಿಗೆ ನಿರ್ದೇಶಿಸಲಾಗಿದೆ. ಅದರ ಜತೆಗೆ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡರೂ ಗೈರಾದಲ್ಲಿ ಕಾಯ್ದೆ ಪ್ರಕಾರ 3 ತಿಂಗಳಿನಿಂದ 2 ವರ್ಷದವರೆ ಜೈಲು ಶಿಕ್ಷೆಗೆ ಗುರಿಯಾಗಲಿದ್ದಾರೆ.

      ಡಿ.29ರ ನಂತರ ಅರ್ಜಿ ಸಲ್ಲಿಸದವರ ಪಟ್ಟಿಯನ್ನೂ ಬಿಡುಗಡೆ ಮಾಡಲಾಗುತ್ತದೆ

      ಡಿ.29ರ ನಂತರ ಅರ್ಜಿ ಸಲ್ಲಿಸದವರ ಪಟ್ಟಿಯನ್ನೂ ಬಿಡುಗಡೆ ಮಾಡಲಾಗುತ್ತದೆ

      ಡಿಸೆಂಬರ್ ೨೯ರ ನಂತರವೂ ಬಳಿಕವೂ ಮತದಾರರ ಪಟ್ಟಿಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಗೊತ್ತುಪಡಿಸಿದ ದಿನಾಂಕದ ಹಿಂದಿನ ಒಂದು ವಾರದ ಅವಧಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ಅವಧಿಯಲ್ಲಿ ಹೆಸರು ನೋಂದಾಯಿಸಿದವರ ಪಟ್ಟಿಯನ್ನು ಸಹ ಪ್ರಕಟ ಮಾಡಲಾಗುತ್ತದೆ.

      ಆಯೋಗದ ವೆಬ್ ಸೈಟ್ ಮೂಲಕವೂ ಅರ್ಜಿ ಹಾಕಬಹುದು:
      ನ.30 ಕರಡು ಪತದಾರರ ಪಟ್ಟಿ ಪ್ರಕಟ ಮಾಡಿದ ಬಳಿಕ ನಮೂನೆ-6 ರಲ್ಲಿ 22,972 ಮಂದಿ, ನಮೂನೆ-7 ರಲ್ಲಿ 7.31, ನಮೂನೆ 8 ರಲ್ಲಿ4,703, ಮತ್ತು ನಮೂನೆ 8- ಎರಲ್ಲಿ 763 ಅರ್ಜಿಗಳು ಬಂದಿವೆ. ಮತದಾರರ ಅಂತಿಮ ಪಟ್ಟಿ ಪ್ರಕಟಿಸಿದ ಬಳಿಕ ಆಯೋಗದ ವೆಬ್ ಸೈಟ್ ಗೆ ಭೇಟಿ ನೀಡಿ ಪರಿಶೀಲಿಸಿಕೊಳ್ಳಬಹುದು.

      ಕರಡು ಮತದಾರರ ಪಟ್ಟಿಯನ್ನು ರಾಜಕೀಯ ಪಕ್ಷಕ್ಕೂ ನೀಡಲಾಗಿದೆ

      ಕರಡು ಮತದಾರರ ಪಟ್ಟಿಯನ್ನು ರಾಜಕೀಯ ಪಕ್ಷಕ್ಕೂ ನೀಡಲಾಗಿದೆ

      ರಾಜಕೀಯ ಪಕ್ಷಗಳಿಗೂ ಮತದಾರರ ಪಟ್ಟಿ ನೀಡಿದ್ದು 18-19 ವರ್ಷದ ಯುವ ಮತದಾರರ ಹೆಸರು ಸೇರ್ಪಡಟೆಗೆ ಸಹಕರಿಸುವಂತೆ ತಿಳಿಸಲಾಗಿದೆ. ಆಯಾ ಪಕ್ಷಗಳ ಮತಗಟ್ಟೆ ಹಂತದ ಏಜೆಂಟ್ ರನ್ನು ಪಟ್ಟಿ ಪರಿಷ್ಕರಣಾ ಸಭೆಗೆ ಕಳುಹಿಸುವಂತೆ ಮನವಿ ಮಾಡಲಾಗಿದೆ.

      ಬಿಬಿಎಂಪಿ ವ್ಯಾಪ್ತಿಯಲ್ಲಿ 575 ಮತಗಟ್ಟೆ ರಚನೆ

      ಬಿಬಿಎಂಪಿ ವ್ಯಾಪ್ತಿಯಲ್ಲಿ 575 ಮತಗಟ್ಟೆ ರಚನೆ

      ಬಿಬಿಎಂಪಿ ವ್ಯಾಪ್ತಿಯಲ್ಲಿ 7712 ಮತಗಟ್ಟೆಗಳಿದ್ದವು. ಚುನಾವಣಾ ಆಯೋಗದ ನಿರ್ದೇಶನದಂತೆ 1400 ಕ್ಕಿಂತ ಹೆಚ್ಚು ಮತದಾರರಿರುವ ಮತಗಟ್ಟೆಗಳನ್ನು ರಾಷನಲ್ನೈಸೇಷನ್ ಮಾಡಲಾಗಿದೆ. ಇದರಿಂದ ಮತಗಟ್ಟೆಗಳ ಸಂಖ್ಯೆ 8284 ಕ್ಕೆ ಏರಿದೆ. ಒಟ್ಟು 575 ನೂತನ ಮತಗಟ್ಟೆಗಳನ್ನು ರಚಿಸಲಾಗಿದೆ. ಮತದಾರರ ಅಂತಿಮ ಪಟ್ಟಿ ಪ್ರಕಟಗೊಂಡ ಬಳಿಕ ಮತಗಟ್ಟೆಗಳ ಸಂಖ್ಯೆ ಹೆಚ್ಚಳವಾಗಲಿದೆ.

      ಮತದಾರರ ಪಟ್ಟಿಯಲ್ಲಿ ಹೆಸರಿರಬೇಕು:

      ಮತದಾರರ ಪಟ್ಟಿಯಲ್ಲಿ ಹೆಸರಿರಬೇಕು:

      ಚುನಾವಣೆ ಸಂದರ್ಭದಲ್ಲಿ ಎಪಿಕ್ (ಚುನಾವಣಾ ಗುರುತಿನ ಚೀಟಿ) ಕಾರ್ಡ್ ಹೊಂದಿದರಷ್ಟೇ ಸಾಲದು ಮತದಾರರ ಪಟ್ಟಿಯಲ್ಲಿ ಹೆಸರು ಇರಬೇಕು. ಅಂಥವರಿಗೆ ಮಾತ್ರ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಕೆಲವರು 8 ರಿಂದ 10 ವರ್ಷಗಳ ಹಿಂದೆ ಚುನಾವಣಾ ಗುರುತಿನ ಚೀಟಿ ಪಡೆದುಕೊಂಡಿರುತ್ತಾರೆ. ಆಕ್ಷೇಪಣೆ ಮತ್ತು ಇನ್ನಿತರೆ ಕಾರಣಗಳಿಂದ ಹೆಸರು ಕೈಬಿಟ್ಟಿರುವ ಸಾದ್ಯತೆಗಳಿರುತ್ತದೆ.

      ಆದ ಕಾರಣ, ಮತದಾರರು ತಮ್ಮ ಹೆಸರು ಪಟ್ಟಿಯಲ್ಲಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಒಂದೊಮ್ಮೆ ಕೈಬಿಟ್ಟಿದ್ದರೆ ಸೇರ್ಪಡೆಗೆ ಅರ್ಜಿ ಸಲ್ಲಿಸಬೇಕು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+