ಮೆಜೆಸ್ಟಿಕ್ ಹತ್ತಿರದ ಹೋಟೆಲ್ ಗಳು 24 ಗಂಟೆಯೂ ಓಪನ್
ಬೆಂಗಳೂರು, ನವೆಂಬರ್ 30 : ನಗರಾದ್ಯಂತ ರಾತ್ರಿ 1 ಗಂಟೆಯವರೆಗೆ ಮಾತ್ರ ಹೋಟೆಲ್ ಗಳನ್ನು ತೆರೆಯಲು ಅವಕಾಶವಿದೆ ಆದರೆ ಇನ್ನುಮುಂದೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 24 ಗಂಟೆಯೂ ಕೂಡ ಊಟ ದೊರೆಯಲಿದೆ.
ದೂರದ ಊರುಗಳಿಂದ ಮಧ್ಯರಾತ್ರಿ ಬೆಂಗಳೂರಿಗೆ ಬರುವವರು ಇನ್ನುಮುಂದೆ ಹಸಿದುಕೊಂಡಿರಬೇಕೆಂದಿಲ್ಲ. ಈ ಮೊದಲು ತಡರಾತ್ರಿ ಮೆಜೆಸ್ಟಿಕ್ ಬಂದಿಳಿದರೆ ಏನೂ ಸಿಗುತ್ತಿರಲಿಲ್ಲ. ಕೆಲವೊಮ್ಮೆ ಮಧ್ಯರಾತ್ರಿ ಇಂದ ಬೆಳಗ್ಗೆಯವರೆಗೂ ನಿಲ್ದಾಣದಲ್ಲಿ ಹಸಿವಿನಲ್ಲಿ ಕೂರುವ ಪರಿಸ್ಥಿತಿ ಇತ್ತು. ಇನ್ನು ಮುಂದೆ ಈ ಸಮಸ್ಯೆ ಕಾಡುವುದಿಲ್ಲ. ಏಕೆಂದರೆ ದಿನದ 24 ಗಂಟೆಯೂ ಹೋಟೆಲ್ ತೆರೆಯಲು ಅನುಮತಿ ನೀಡಲಾಗಿದೆ.

ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಅವರು ಮೆಜೆಸ್ಟಿಕ್ನಲ್ಲಿ 24 ಗಂಟೆಯೂ ಹೋಟೆಲ್ ತೆರೆಯಬಹುದು. ತಮ್ಮಲ್ಲಿ ಸಿದ್ಧವಾಗಿರುವ ಊಟ ಬಡಿಸಲು ಅಡ್ಡಿಯಿಲ್ಲ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮೆಜೆಸ್ಟಿಕ್ ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಮಧ್ಯರಾತ್ರಿ 1 ಗಂಟೆಯವರೆಗೆ ಹೋಟೆಲ್ ತೆರೆಯಬಹುದಾಗಿದೆ.












Click it and Unblock the Notifications