ನಾವು ಬೆಂಗಳೂರಿಗೆ Economic Strength ಎಂದ ನಾರ್ಥಿ ಮಹಿಳೆ ಇಲ್ಲಿದೆ ವೈರಲ್ ವಿಡಿಯೋ!
ಉತ್ತರ ಭಾರತೀಯರು - ಅದರಲ್ಲೂ ಹಿಂದಿ ಭಾಷಿಕರು ಹಾಗೂ ಕನ್ನಡಿಗರ ನಡುವೆ ಭಾಷಾ ವಿಚಾರಕ್ಕೆ ಸಂಬಂಧಿಸಿದಂತೆ ಭಾಷಾವಿವಾದ ಮುಂದುವರಿಯುತ್ತಲ್ಲೇ ಇದೆ. ಭಾನುವಾರವೂ ಬೆಂಗಳೂರಿನಲ್ಲಿ ಆಟೋ ಚಾಲಕ ಹಾಗೂ ಮಹಿಳೆಯ ನಡುವೆ ಭಾಷೆಯ ವಿಚಾರಕ್ಕೆ ವಾಗ್ವಾದ ನಡೆದಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಹಿಂದಿ & ಇಂಗ್ಲಿಷ್‌ನಲ್ಲಿ ಮಾತನಾಡಿರುವ ಮಹಿಳೆ ನಾವು ಬೆಂಗಳೂರಿಗೆ Economic Strength ಆರ್ಥಿಕ ಶಕ್ತಿಯನ್ನು ನೀಡುತ್ತಿದ್ದೇವೆ ಎಂದು ಹೇಳಿದ್ದಾಳೆ. ಇದು ವೈರಲ್ ಆಗುತ್ತಿದ್ದು ನಿಮ್ಮ ಹಣದಿಂದ ಬೆಂಗಳೂರು ಉದ್ಧಾರ ಆಗಿಲ್ಲ ಎಂದು ಕನ್ನಡಿಗರು ಹೇಳುತ್ತಿದ್ದಾರೆ. ಅಲ್ಲದೇ ಈ ವೈರಲ್ ವಿಡಿಯೋದಲ್ಲಿ ಆಟೋ ಚಾಲಕ ನಡೆದುಕೊಂಡಿರುವ ರೀತಿಗೂ ಆಕ್ಷೇಪಣೆ ವ್ಯಕ್ತವಾಗಿದೆ. ಕನ್ನಡಿಗರ ಮಾನ ಕಳೆಯಬೇಡಿ ಅಂತ ಕನ್ನಡಿಗರು ಒತ್ತಾಯಿಸುತ್ತಿದ್ದಾರೆ. ಇಷ್ಟಕ್ಕೂ ವೈರಲ್ ವಿಡಿಯೋದಲ್ಲಿ ಏನಿದೆ ಎನ್ನುವುದು ಇಲ್ಲಿದೆ.
ಬೆಂಗಳೂರಿನಲ್ಲಿ ಕನ್ನಡಿಗರು ಹಾಗೂ ಹಿಂದಿ ಭಾಷಿಕರ ನಡುವೆ ಅನವಶ್ಯಕ ವಿವಾದ ಮುಂದುವರಿದಿದೆ. ಕೆಲವು ನಾರ್ಥಿಗಳು ಉದ್ದೇಶಪೂರ್ವಕವಾಗಿ ಬೆಂಗಳೂರಿನಲ್ಲಿ ಭಾಷಾ ವಿವಾದ ಸೃಷ್ಟಿ ಮಾಡುತ್ತಿದ್ದಾರೆ. ಆದರೆ, ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ನಾರ್ಥಿ ಮಹಿಳೆ ಹಾಗೂ ಕನ್ನಡಿಗ ಆಟೋ ಚಾಲಕ ಇಬ್ಬರ ನಡುವೆಯೂ ತಪ್ಪಿದೆ. ಈ ವೈರಲ್ ವಿಡಿಯೋವನ್ನು ನೋಡಿರುವ ಕನ್ನಡಿಗರು ಇಬ್ಬರಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ.

ನಗರದಲ್ಲಿ ಆಟೋ ಚಾಲಕನೊಂದಿಗೆ ಏರ್ಪಟ್ಟ ಗಲಾಟೆಯು ಭಾಷಾ ವಿವಾದವಾಗಿ ಬದಲಾಗಿದೆ. ಆಟೋ ಚಾಲಕ 293 ಬದಲಾಗಿ 390 ಹಣ ಪಾವತಿ ಮಾಡುವಂತೆ ಹೇಳಿದ್ದಾನೆ ಎಂದು ಮಹಿಳೆ ವಿಡಿಯೋದಲ್ಲಿ ದೂರಿದ್ದಾರೆ. ಇದಕ್ಕೆ ಆಟೋ ಚಾಲಕ ಸಹ ಕೋಪದಿಂದ ಮಾತನಾಡಿದ್ದಾರೆ. ಮಹಿಳೆ ಮತ್ತೊಬ್ಬ ಆಟೋ ಚಾಲಕನ್ನು ಸಹಾಯಕ್ಕೆ ಕರೆದಿರುವುದು ಸಹ ವಿಡಿಯೋದಲ್ಲಿ ಇದೆ. ನಾನು ಸಮಾಧಾನವಾಗಿ ಮಾತನಾಡುತ್ತಿದ್ದೇನೆ ಯಾಕೆ ಕಿರುಚುತ್ತಿದ್ದೀಯ ಅಂತ ಮಹಿಳೆ ಕೇಳಿದ್ದಾಳೆ. ರೇಟ್‌ನ ಬಗ್ಗೆ ಪ್ರಶ್ನೆ ಮಾಡುತ್ತಿದ್ದಂತೆಯೇ ಮಹಿಳೆಗೆ ಆಟೋ ಚಾಲಕ ಕನ್ನಡದಲ್ಲಿ ಮಾತನಾಡಿ ಅಂತ ಒತ್ತಾಯಿಸಿದ್ದಾರೆ. ಇದಕ್ಕೆ ಮಹಿಳೆ ನನಗೆ ಕನ್ನಡ ಅರ್ಥವಾಗುತ್ತದೆ. ನೀವು ಹೇಳುವುದು ಅರ್ಥವಾಗುತ್ತದೆ. ಏಕಾಏಕಿ 100 ರೂಪಾಯಿ ಯಾಕೆ ಹೆಚ್ಚಳ ಮಾಡಿದ್ದೀರಿ ಅಂತ ಪ್ರಶ್ನೆ ಮಾಡಿದ್ದಾಳೆ.
ಕರ್ನಾಟಕದಲ್ಲಿ ಇದ್ದೀಯ ತಾನೆ ಕನ್ನಡ ಮಾತನಾಡು ಅಂತ ಆಟೋ ಚಾಲಕ ಹೇಳಿದ್ದು. ಆಗ ಮಹಿಳೆ ಏನೆಲ್ಲಾ ಮಾಡುತ್ತೀಯ ಮಾಡು ಇದನ್ನೆಲ್ಲ ನಾನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತೇನೆ ಅಂತ ಹೇಳಿದ್ದಾಳೆ. ಮತ್ತೆ ಕರ್ನಾಟಕದಲ್ಲಿ ಇದ್ದೀಯ ತಾನೆ ಕನ್ನಡ ಮಾತನಾಡು. ಇಲ್ಲಿಯ ಅನ್ನ ತಿನ್ನುತ್ತೀಯ ತಾನೆ ಅಂತ ಆಟೋ ಚಾಲಕ ಹೇಳಿರುವುದು ವೈರಲ್ ವಿಡಿಯೋದಲ್ಲಿ ಇದೆ. ಕೊನೆಗೆ ಮಹಿಳೆ ನಾನು ಕನ್ನಡ ಕಲಿಯುತ್ತೇನೆ ಅಂತ ಹಿಂದಿಯಲ್ಲಿ ಹೇಳಿದ್ದಾಳೆ.
One more viral video uploaded on Instagram by the user.
— Karnataka Update (@about_karnataka) June 7, 2025
The video is about rapido fare and we can see the driver couldn't understand Hindi.
Now the auto driver has been blacklisted as per user IG status.
What are ur views on this?
#kannada #Karnatakapic.twitter.com/o4Izlsq8Xm pic.twitter.com/YgIllnCLEX
ಆಟೋ ಚಾಲಕ ಬ್ಲಾಕ್ ಲಿಸ್ಟ್: ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನು ರ್ಯಾಪಿಡೋಗೆ ಕರೆ ಮಾಡಿದ್ದೆ. ರೈಡ್ ಬೆಲೆಯನ್ನು ಖಚಿತಪಡಿಸಿಕೊಂಡಿದ್ದೇನೆ. ಆಟೋ ಚಾಲಕನ ಮೇಲೆ ಎಫ್‌ಐಆರ್ ರಿಜಿಸ್ಟ್ರೇಷನ್ ಆಗಿದೆ. ಡ್ರೈವರ್ ಬ್ಲಾಕ್ ಲಿಸ್ಟ್‌ಗೆ ಸೇರಿಸಲಾಗಿದೆ ಎಂದು ಮಹಿಳೆ ಹಂಚಿಕೊಂಡಿದ್ದಾರೆ ಎನ್ನುವ ಸ್ಕ್ರೀನ್ ಶಾಟ್ ವೈರಲ್ ಆಗಿದೆ.
-
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
ಸ್ವಾವಲಂಬಿ ಬದುಕಿಗೆ ರಾಮಲಿಂಗಾ ರೆಡ್ಡಿ ಸಾಥ್: ಮಂಗಳಮುಖಿಯರು ಮತ್ತು ಮಹಿಳೆಯರಿಗೆ 20 EV ಆಟೋ ಭಾಗ್ಯ -
Love Mocktail 3: ಲವ್ ಮಾಕ್ಟೇಲ್ 3 ಸಿನಿಮಾ ಕದ್ದ ಕಥೆ: ಮಾರಿ ಗೋಲ್ಡ್ ನಿರ್ದೇಶಕ ರಾಘವೇಂದ್ರ ನಾಯ್ಕ್ ಗಂಭೀರ ಆರೋಪ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ -
ಲವ್ ಮಾಕ್ಟೇಲ್ 3 ವಿವಾದ: ನನ್ನ ಕಥೆಯ ದ್ವಿತೀಯಾರ್ಧ ನಕಲು: ಸಿನಿಮಾ ಬರಹಗಾರರೇ ಎಚ್ಚರ ಎಂದ ನಿರ್ದೇಶಕ ರಾಘವೇಂದ್ರ -
Vijay Sethupathi: ರಿಷಬ್ ಶೆಟ್ಟಿ ಜೊತೆ ನಟಿಸುವ ದೊಡ್ಡ ಆಸೆ ನನಗಿದೆ: ಆಸೆ ಬಿಚ್ಚಿಟ್ಟ ನಟ ವಿಜಯ್ ಸೇತುಪತಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು












Click it and Unblock the Notifications