ಹೆಚ್ಚುವರಿ ಟ್ರಿಪ್ ಕಡಿತ: ಹಿಂದಿನ ವೇಳಾಪಟ್ಟಿಯಂತೆ ಮೆಟ್ರೋ ಸಂಚಾರ
ಬೆಂಗಳೂರು, ಜನವರಿ 05: ನೇರಳೆ ಮೆಟ್ರೋ ಮಾರ್ಗದಲ್ಲಿ ಏಕಾಏಕಿ 10 ರೈಲುಗಳ ಸಂಚಾರ ಹೆಚ್ಚಿಸಿದ್ದು ವಿದ್ಯುತ್ ಸರಬರಾಜು ವ್ಯವಸ್ಥೆಯಲ್ಲಿ ಸಮಸ್ಯೆಗೆ ಕಾರಣ ಎಂದು ಅರಿವಾದ ಹಿನ್ನೆಲೆಯಲ್ಲಿ ಹಳೆ ವೇಳಾಪಟ್ಟಿ ರೈಲುಗಳ ಸಂಚಾರ ನಿರ್ವಹಿಸಲು ಬಿಎಂಆರ್ ಸಿಎಲ್ ನಿರ್ಧರಿಸಿದೆ.
ಏರಿಕೆಯಾಗುತ್ತಿರುವ ಪ್ರಯಾಣಿಕರ ದಟ್ಟಣೆ ಪರಿಹರಿಸಲು ಜ.2 ರಿಂದ ನಾಗಸಂದ್ರ-ಯಲಚೇನಹಳ್ಳಿ ಮಾರ್ಗದಲ್ಲಿ 3 ಹಾಗೂ ನಾಯಂಡಹಳ್ಳಿ-ಬೈಯಪ್ಪನಹಳ್ಳಿ ಮಾರ್ಗದಲ್ಲಿ 10 ಟ್ರಿಪ್ ಹೆಚ್ಚಿಸಲಾಗಿತ್ತು.

ದಟ್ಟಣೆ ಅವಧಿಯಲ್ಲಿ ಪ್ರತಿ ಮೂರೂವರೆ ನಿಮಿಷಕ್ಕೆ ಸಂಚಾರ ವ್ಯವಸ್ಥೆ ಮಾಡಲಾಗಿತ್ತು. ಇದರಿಂದಾಗಿ ಜ.2 ರ ಬೆಳಗ್ಗೆ10.02 ರಿಂದ 10.28 ರವರೆಗೆ ಮತ್ತು ಸಂಜೆ 6 ನಿಮಿಷ ಸಂಚಾರ ಸ್ಥಗಿತವಾಗಿತ್ತುನೇರಳೆ ಮಾರ್ಗದಲ್ಲಿ ಪ್ರತಿದಿನ 27 ರೈಲುಗಳು ಮಾಡುತ್ತಿದ್ದ 127 ಟ್ರಿಪ್ ಗಳನ್ನು 167 ಕ್ಕೆ ಹೆಚ್ಚಿಸಲಾಗಿತ್ತು.
ಅದೇ ರೀತಿ ನಾಗಸಂದ್ರ-ಯಲಚೇನಹಳ್ಳಿ ಹಸಿರು ಮಾರ್ಗದಲ್ಲೂ ಟ್ರಿಪ್ ಸಂಖ್ಯೆ 120 ರಿಂದ 123 ಕ್ಕೆ ಏರಿಕೆಯಾಗಿತ್ತು. ಇದೀಗ ಹಿಂದಿನಂತೆ ದಟ್ಟಣೆ ಅವಧಿಯಲ್ಲಿ 4 ನಿಮಿಷಕ್ಕೊಮ್ಮೆ ಹಾಗೂ ಗರಿಷ್ಠ 9-10 ನಿಮಿಷಕ್ಕೆ ರೈಲುಗಳು ಸಂಚರಿಸಲಿವೆ.











Click it and Unblock the Notifications