Bengaluru Weather: ಸೂರ್ಯನ ಶಾಖಕ್ಕೆ ಬೆಂದ ಬೆಂಗಳೂರಿಗೆ ಮೇ 2ರಿಂದ ಭಾರೀ ಮಳೆ ಮುನ್ಸೂಚನೆ

ಬೆಂಗಳೂರು, ಏಪ್ರಿಲ್‌, 28: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಏಪ್ರಿಲ್‌ನಲ್ಲಿ ಅತೀ ಹೆಚ್ಚು ತಾಪಮಾನ ದಾಖಲಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ನಗರದಲ್ಲಿ ಅತೀ ಹೆಚ್ಚು ಗರಿಷ್ಠ 38 ಡಿಗ್ರಿ ಸೆಲ್ಸಿಯಸ್‌ವರೆಗೂ ತಾಪಾಮಾನ ದಾಖಲಾಗಿದೆ. ಇದರ ನಡುವೆಯೂ ಮೇ 2ರಿಂದ ನಗರದಲ್ಲಿ ಮಳೆರಾಯ ಭೂಮಿ ತಂಪೆರೆಯಲಿದ್ದಾನೆ ಎನ್ನುವ ಮುನ್ಸೂಚನೆಯನ್ನು ನೀಡಿದೆ.

ಇಂದು (ಏಪ್ರಿಲ್‌ 28) ಬೆಳ್ಳಂಬೆಳಗ್ಗೆಯೇ ಬೆಂಗಳೂರಿನಲ್ಲಿ ಬಿಸಿಲಿನ ವಾತಾವರಣ ಮುಂದುವರೆದಿದೆ. ಇನ್ನು ಏಪ್ರಿಲ್‌ನಲ್ಲಿ ಅತೀ ಹೆಚ್ಚು ತಾಪಮಾನ ದಾಖಲಾದ ಮೂರನೇ ನಗರ ಅಂತಲೂ ಹೆಸರು ಪಡೆದುಕೊಂಡಿದೆ. ಮತ್ತೊಂದೆಡೆ ಈ ಬಿಸಿಲಿನ ಬೇಗೆಯಿಂದ ನಗರದ ಜನರು ಬೆಂದು ಬೆಂಡಾಗಿದ್ದು, ಮನೆಯಿಂದ ಹೊರಗಡೆ ಬರುವುದಕ್ಕೂ ಯೋಚನೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. ಅಷ್ಟರ ಮಟ್ಟಿಗೆ ಸೂರ್ಯಯ ಹಾವಳಿ ಇದೆ.

ngaluru Weather Heavy rainfall forecast from May 2

ನಗರದದಲ್ಲಿ ಕಳೆದ ವಾರ ಒಂದೆರಡು ದಿನ ಕೆಲವೆಡೆ ಮಾತ್ರ ಹಗುರವಾಗಿ ಮಳೆಯಾಗಿತ್ತು ಬಿಟ್ಟರೆ, ಅಲ್ಲಿಂದ ಇಲ್ಲಿಯವರೆಗೂ ಒಂದು ಹನಿಯೂ ಬಿದ್ದಿಲ್ಲ. ಇನ್ನು ಇಲ್ಲಿನ ಜನ ಮಳೆ ಯಾವಾಗ ಬರುತ್ತದೆಯೋ ಎಂದು ಮೋಡದ ಕಡೆ ಮುಖ ಮಾಡಿ ಕುಳಿತುಕೊಂಡಿದ್ದಾರೆ.

ನಗರದಲ್ಲಿ ಬಿಸಿಲಿನ ತಾಪಮಾನ ಏರಿಕೆಯ ಬಗ್ಗೆ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್‌ನಲ್ಲಿ ಬಳಕೆದಾರರೊಬ್ಬರು ಏಪ್ರಿಲ್‌ನಲ್ಲಿ ದಾಖಲೆ ಮಟ್ಟದಲ್ಲಿ ತಾಪಮಾನ ಏರಿಕೆಯಾಗಿದ ಎಂದು ಬರೆದುಕೊಂಡಿದ್ದಾರೆ. ಏಪ್ರಿಲ್‌ 29ರಿಂದ ಮೇ 3ರವರಗೆ ನಗರದಲ್ಲಿ ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್‌ ಇರಲಿದ್ದು, ಗರಿಷ್ಟ ತಾಪಮಾನದ ಪ್ರಮಾಣ 37 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮತ್ತೊಂದೆಡೆ ಮೇ 2 ಮತ್ತು ಹವಾಮಾನದಲ್ಲಿ ಬದಲಾವಣೆ ಆಗಲಿದ್ದು, ಮಳೆ ಸುರಿಯುವ ಸಾಧ್ಯತೆಯಿದೆ ಅಂತಲೂ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+