ಒನ್ ಇಂಡಿಯಾ ಪತ್ರಕರ್ತ ವಿಕಾಸ್ ನಂಜಪ್ಪಗೆ ಪ್ರಶಸ್ತಿ
ಕಾರ್ಮಿಕರ ದಿನಾಚರಣೆಯಂದು (ಮೇ 1) ಮುಂಬೈನಲ್ಲಿ ನಡೆದ 8ನೇ ಆವೃತ್ತಿಯ ನ್ಯೂಸ್ ಮೇಕರ್ಸ್ ಅಛೀವರ್ಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಕ್ಕಿಯವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೆಂಗಳೂರು, ಮೇ 3: ಒನ್ ಇಂಡಿಯಾದ ಪತ್ರಕರ್ತ ವಿಕಾಸ್ ನಂಜಪ್ಪ (ವಿಕ್ಕಿ ನಂಜಪ್ಪ) ಅವರಿಗೆ ಶ್ರೇಷ್ಠ ಪತ್ರಕರ್ತ (ಡಿಜಿಟಲ್ ಮಾಧ್ಯಮ ವಿಭಾಗ) ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕಾರ್ಮಿಕರ ದಿನಾಚರಣೆಯಂದು (ಮೇ 1) ಮುಂಬೈನಲ್ಲಿ ನಡೆದ 8ನೇ ಆವೃತ್ತಿಯ ನ್ಯೂಸ್ ಮೇಕರ್ಸ್ ಅಛೀವರ್ಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಕ್ಕಿಯವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಳೆದ 18 ವರ್ಷಗಳಲ್ಲಿ ಪತ್ರಿಕೋದ್ಯಮಕ್ಕೆ ವಿಕಾಸ್ ನಂಜಪ್ಪ ಅವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.

ವಿಕಾಸ್ ನಂಜಪ್ಪ ಜತೆಯಲ್ಲಿ, ಶಿಕ್ಷಣ, ಕಲೆ, ವಿಜ್ಞಾನ, ರಾಜಕೀಯ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಪ್ರಶಸ್ತಿಯೊಂದಿಗೆ ಸನ್ಮಾನಿಸಲಾಯಿತು.

Click it and Unblock the Notifications