ಬ್ರಿಗೇಡ್ ರಸ್ತೆಯಲ್ಲಿ ಜನರ ಮೇಲೆ ಐಸ್‌ಕ್ಯೂಬ್ ಎಸೆದು ಯುವಕರ ಪುಂಡಾಟ
ಬೆಂಗಳೂರು, ಜನವರಿ 1: ಎರಡು ವರ್ಷಗಳ ಹಿಂದೆ ಹೊಸ ವರ್ಷ ಆಚರಣ ಸಂದರ್ಭದಲ್ಲಿ ಯುವತಿಯರೊಂದಿಗೆ ಅಸಭ್ಯ ವರ್ತನೆಯಿಂದಾಗಿ ಸುದ್ದಿಯಲ್ಲಿದ್ದ ಬೆಂಗಳೂರು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ.
ಬ್ರಿಗೇಡ್ ರಸ್ತೆಯ ಜಾನಿವಾಕರ್ ಬಾರ್‌ನಲ್ಲಿ ಸಂಭ್ರಮಾಚರಣೆಯಲ್ಲ ತೊಡಗಿದ್ದ ಯುವಕರ ಗುಂಪೊಂದು ಮದ್ಯಪಾನ ಮಾಡಿ ಅಲ್ಲಿ ಬಂದಿದ್ದ ಜನರ ಮೇಲೆ ಐಸ್‌ಕ್ಯೂಬ್‌ಗಳನ್ನು ಎಸೆದು ಆತಂಕ ಸೃಷ್ಟಿ ಮಾಡಿದರು.
ಬಳಿಕ ಜನರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು, ಪೊಲೀಸರು ಸ್ಥಳಕ್ಕೆ ತೆರಳಿ ಬೌನ್ಸರ್‌ಗಳ ಮೂಲಕ ಅವರನ್ನು ನಿಯಂತ್ರಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಾನಿವಾಕರ್ ಬಾರ್ ಮಾಲೀಕರಿಗೆ ಎಚ್ಚರಿಕೆ ನೀಡಿದರು.

ಕಳೆದ ಎರಡು ವರ್ಷಗಳ ಹಿಂದೆ ಎಂಜಿ ರಸ್ತೆಯಲ್ಲಿ ಯುವತಿಯರ ಮೇಲೆ ಅಸಭ್ಯವಾಗಿ ವರ್ತನೆ ಮಾಡಿದ ಘಟನೆ ವರದಿಯಾಗಿತ್ತು.












Click it and Unblock the Notifications