B-Khataಬಿ - ಖಾತಾ ಪಡೆಯಲು ಹೊಸ ರೂಲ್ಸ್, ಈ ದಾಖಲೆ ಇದ್ದರೆ ಮಾತ್ರ ಸಿಗಲಿದೆ ಎ ಖಾತಾ
ಕರ್ನಾಟಕ ಸರ್ಕಾರವು ರಾಜ್ಯದಾದ್ಯಂತ ಇ - ಖಾತಾ ಪರಿಚಯಿಸಿದೆ. ಇದಾದ ನಂತರ ಬಿ ಖಾತಾದಿಂದ ಎ ಖಾತಾಗೂ ಅವಕಾಶ ಕಲ್ಪಿಸಲಾಗಿದೆ. ಆದರೆ ಇ ಖಾತಾ ಸೌಲಭ್ಯ ಇರುವ ಆಸ್ತಿಗಳಿಗೆ ಮಾತ್ರ ಬಿ ಖಾತಾ ಸಿಗಲಿದೆ. ಇದರಿಂದ ಬಿ ಖಾತಾ ಆಸ್ತಿದಾರರಿಗೆ ಹಿನ್ನಡೆಯಾಗುತ್ತಿದೆ. ಒಂದು ವರ್ಷಕ್ಕೂ ಮುಂಚೆಯೇ ಇ ಖಾತಾ ಸೇವಾ ಸೌಲಭ್ಯವನ್ನು ನೀಡಲಾಗುತ್ತಿದೆ. ಆದರೆ ಇದರಲ್ಲಿ ತಾಂತ್ರಿಕ ಸಮಸ್ಯೆಗಳು ಎದುರಾಗಿವೆ. ಅಲ್ಲದೇ ಇ ಖಾತಾ ಇಲ್ಲದೆ ಪ್ರಾಪರ್ಟಿ ರಿಜಿಸ್ಟ್ರೇಷನ್ ಹಾಗೂ ಕೆಲವೊಂದು ಅವ್ಯವಹಾರ ನಡೆದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮಹತ್ವದ ಕ್ರಮವನ್ನು ಅಳವಡಿಸಿಕೊಂಡಿದೆ.
ಬೆಂಗಳೂರಿನ ಅಪಾರ್ಟ್‌ಮೆಂಟ್ ಮಾಲೀಕರು ಎ-ಖಾತಾ ಪಡೆಯುವ ಸಂಭ್ರಮದಲ್ಲಿ ಇದ್ದರು. ಆದರೆ ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಅಥವಾ ಎ ಖಾತಾ ಪಡೆದುಕೊಳ್ಳಬೇಕಾದರೆ ಮೊದಲು ನೀವು ಇ ಖಾತಾವನ್ನು ಕಡ್ಡಾಯವಾಗಿ ಪಡೆದುಕೊಂಡಿರಬೇಕು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ತಿಳಿಸಿದೆ. ಕರ್ನಾಟಕ ಸರ್ಕಾರವು ಅಧಿಕೃತವಾಗಿ ಅನುಮೋದಿತ ಅಪಾರ್ಟ್‌ಮೆಂಟ್ ಸಂಕೀರ್ಣಗಳಲ್ಲಿನ ಫ್ಲಾಟ್‌ಗಳು, ಬಿ-ಖಾತಾ ಹೊಂದಿದ್ದರೂ ಸಹ, ಇ-ಖಾತಾ ವ್ಯವಸ್ಥೆಗೆ ಸೇರಿದ ನಂತರ ಎ-ಖಾತಾ ಪರಿವರ್ತನೆಗೆ ಅರ್ಹರಾಗಿರಲಿದ್ದಾರೆ ಎಂದು ಹೇಳಿದೆ.

ಕಳೆದ ವರ್ಷದಿಂದಲೇ ಜಾರಿ
ಇನ್ನು ರಾಜ್ಯದಲ್ಲಿ ಎಲ್ಲಾ ಆಸ್ತಿಗಳಿಗೂ ಈಗಾಗಲೇ ಇ ಖಾತಾ ಕಡ್ಡಾಯ ಮಾಡಲಾಗಿದೆ. ಪ್ರಾಪರ್ಟಿಗಳ ಮಾರಾಟ ಹಾಗೂ ಖರೀದಿಯಲ್ಲಿ ಮೋಸವಾಗಬಾರದು ಎನ್ನುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದೆ. ಆದರೆ ಅಧಿಕಾರಿಗಳು ಹಾಗೂ ಕೆಲವು ಆಸ್ತಿದಾರರು ಶಾಮೀಲಾಗಿ ಪ್ರಾಪರ್ಟಿ ರಿಜಿಸ್ಟ್ರೇಷನ್‌ನಲ್ಲಿ ಕೆಲವೊಂದು ಮೋಸಗಳನ್ನು ಮಾಡಿರುವ ಹಿನ್ನೆಲೆಯಲ್ಲಿ ಈಗಾಗಲೇ ಇದ್ದ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಬಿ ಖಾತಾ ಪಡೆದುಕೊಳ್ಳಬೇಕಾದರೆ ಇ ಖಾತಾ ಕಡ್ಡಾಯ ಎನ್ನುವುದು ಕಳೆದ ವರ್ಷ ಅಕ್ಟೋಬರ್‌ನಿಂದಲೇ ಜಾರಿಯಲ್ಲಿದೆ.
ಅಪಾರ್ಟ್‌ಮೆಂಟ್ ಮಾಲೀಕರಿಗೆ ಈ ಪ್ರಕ್ರಿಯೆಯು ಎರಡು ಹಂತಗಳಲ್ಲಿ ಇರಲಿದೆ. ಮೊದಲನೆಯದಾಗಿ ಪ್ರತಿಯೊಬ್ಬ ಫ್ಲಾಟ್ ಮಾಲೀಕರು ಆನ್‌ಲೈನ್ ಪೋರ್ಟಲ್‌ನಲ್ಲಿ ಮಾಲೀಕತ್ವದ ದಾಖಲೆಗಳು ಮತ್ತು ತೆರಿಗೆ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ಇ-ಖಾತಾವನ್ನು ಪಡೆಯಬೇಕು. ಇ-ಖಾತಾ ನೀಡಿದ ನಂತರವೇ ಎ-ಖಾತಾಗೆ ಅರ್ಜಿ ಸಲ್ಲಿಸಬಹುದು. ಒಂದೇ ಅಪಾರ್ಟ್‌ಮೆಂಟ್ ಸಂಕೀರ್ಣದ ಒಳಗೆ ಸಹ ವೈಯಕ್ತಿಕ ಅರ್ಜಿಗಳು ಕಡ್ಡಾಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖಾತಾ ಪರಿವರ್ತನೆ ಆಸೆಯಲ್ಲಿದ್ದವರಿಗೆ ನಿರಾಸೆ
ಇನ್ನು ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಮಾಡಿಕೊಳ್ಳಬೇಕು ಎಂದು ಕನಸು ಕಾಣುತ್ತಿದ್ದ ಲಕ್ಷಾಂತರ ಜನರಿಗೆ ಪ್ರಾರಂಭಿಕ ಹಂತದಲ್ಲಿ ಹಿನ್ನಡೆ ಆಗಿದೆ. ಮೊದಲನೆಯದಾಗಿ ಬಿ ಖಾತಾ ಪರಿವರ್ತನೆಗೆ ವಿಧಿಸುತ್ತಿರುವ ಶುಲ್ಕವು ಭಾರೀ ದೊಡ್ಡ ಮಟ್ಟದಲ್ಲಿದೆ. ಇದು ಸಣ್ಣ ಆಸ್ತಿದಾರರಿಗೆ ಸಂಕಷ್ಟವನ್ನು ತಂದೊಡ್ಡಿದೆ. ದುಬಾರಿ ಮೊತ್ತದ ಶುಲ್ಕವನ್ನು ಪಾವತಿ ಮಾಡುವುದಕ್ಕೆ ಆಸ್ತಿದಾರರು ಪರದಾಡುತ್ತಿದ್ದಾರೆ. ಅಲ್ಲದೇ ಬೆಂಗಳೂರಿನ ಎಲ್ಲಾ ಆಸ್ತಿದಾರರಿಗೂ ಇಲ್ಲಿಯ ವರೆಗೆ ಇ ಖಾತಾ ಸೌಲಭ್ಯ ಸಿಕ್ಕಿಲ್ಲ. ಈ ರೀತಿ ಇರುವಾಗ ಬಿ ಖಾತಾ ಪರಿವರ್ತನೆಗೂ ಇ ಖಾತಾ ಕಡ್ಡಾಯ ಮಾಡಿರುವುದರಿಂದ ಪ್ರಾರಂಭಿಕ ಹಿನ್ನಡೆ ಆಗುವ ಸಾಧ್ಯತೆ ಇದೆ.












Click it and Unblock the Notifications