ಟ್ರಾಫಿಕ್ ಉಲ್ಲಂಘನೆ, ದುಬಾರಿ ಫೈನ್: ಬೆಂಗಳೂರು ಪೊಲೀಸ್ ಆಯುಕ್ತರ ಮಹತ್ವದ ಆದೇಶ

Recommended Video

      ಟ್ರಾಫಿಕ್ ಉಲ್ಲಂಘನೆಗೆ ದುಬಾರಿ ಫೈನ್ ! | Oneindia Kannada

      ಬೆಂಗಳೂರು, ಸೆ 2: ಕೇಂದ್ರ ಸರಕಾರ ಹೊಸದಾಗಿ ಜಾರಿಗೆ ತಂದಿರುವ ಮೋಟರ್ ವಾಹನ ಕಾಯ್ದೆ ಉಲ್ಲಂಘನೆಯ ಪರಿಸ್ಕೃತ ಜುಲ್ಮಾನೆ, ಸೆಪ್ಟಂಬರ್ ಒಂದರಿಂದ ಜಾರಿಗೆ ಬರಬೇಕಾಗಿತ್ತು. ಆದರೆ, ಬೆಂಗಳೂರಿನಲ್ಲಿ ಅದು ಕೆಲವು ದಿನದ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತಿಲ್ಲ.

      ಬೆಂಗಳೂರು ನಗರ ಪೊಲೀಸರಿಗೆ ಈ ಹೊಸ ಕಾನೂನು ಜಾರಿಗೆ ತರಲು ತಾಂತ್ರಿಕ ಸಮಸ್ಯೆ ಎದುರಾಗಿರುವುದರಿಂದ, ಈ ವಾರಾಂತ್ಯದೊಳಗೆ (ಸೆ 7) ಜಾರಿಗೆ ತರುವುದಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.

      ನಿಯಮ ಉಲ್ಲಂಘನೆಗೆ ಕೇಂದ್ರ ಸರಕಾರ ಬಹುತೇಕ ಹತ್ತುಪಟ್ಟು ಹೆಚ್ಚು ದಂಡವನ್ನು ವಿಧಿಸುವ ನಿರ್ಣಯಕ್ಕೆ ಬಂದ ನಂತರ, ಹೊಸ ನಿಯಮ ಜಾರಿಗೆ ಬರಬೇಕಾಗಿತ್ತು.

      New Motor Vehicle Violation Fine Structure Will Be Delayed For Couple Of Days

      ಆದರೆ, ಗಣೇಶ ಹಬ್ಬದ ವಾರಾಂತ್ಯದ ಹಿನ್ನಲೆಯಲ್ಲಿ ಅಧಿಸೂಚನೆ ಕೈಸೇರಲು ಇನ್ನೂ ಮೂರ್ನಾಲ್ಕು ದಿನ ಬೇಕಾಗಿರುವುದರಿಂದ, ಬೆಂಗಳೂರು ಪೊಲೀಸರು, ಸದ್ಯಕ್ಕೆ ಹಳೆಯ ದಂಡ ಪದ್ದತಿಯನ್ನೇ ಮುಂದುವರಿಸಲಿದ್ದಾರೆ.

      " ಕೆಲವು ತಾಂತ್ರಿಕ ಸಮಸ್ಯೆಗಳು ಬಗೆಹರಿದ ನಂತರ, ಹೊಸ ನಿಯಮವನ್ನು ಜಾರಿಗೆ ತರಲಾಗುವುದು" ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಹೇಳಿದ್ದಾರೆ.

      "ಹೊಸ ನಿಯಮದ ಪ್ರಕಾರ ದಂಡ ವಿಧಿಸಲು, ಪರ್ಸನಲ್ ಡಿಜಿಟಲ್ ಅಸಿಸ್ಟೆಂಟ್ (ಪಿಡಿಎ) ಆಪ್ ಅನ್ನು ಅಪ್ಡೇಟ್ ಮಾಡಲು ಸಂಚಾರ ಪೊಲೀಸರಿಗೆ ಕಾಲಾವಕಾಶ ಬೇಕಾಗಿದೆ" ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ಹೇಳಿದ್ದಾರೆ.

      ಹೊಸ ತೆರಿಗೆ ನಿಯಮಗಳು ಸೆಪ್ಟೆಂಬರ್ 01 ರಿಂದ ದೇಶದಾದ್ಯಂತ ಚಾಲ್ತಿಗೆ ಬಂದಿದೆ. ಹೊಸ ತೆರಿಗೆ ನಿಯಮಗಳು ಗ್ರಾಹಕರಿಗೆ ಇನ್ನಷ್ಟು ಹೊರೆಯನ್ನು ಹೆಚ್ಚಿಸಲಿವೆ. ಇದರಲ್ಲಿ, ಹೊಸ ಸಂಚಾರಿ ನಿಯಮ ಉಲ್ಲಂಘನೆಯ ದಂಡವೂ ಒಂದು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+