E Khata: ಇ -ಖಾತಾ ವಿತರಣೆಯಲ್ಲಿ ಹೊಸ ಬದಲಾವಣೆ, ಇಲ್ಲಿದೆ ಮಾಹಿತಿ!
E Khata: ಆಸ್ತಿದಾರರಿಗೆ ಎರಡು ದಿನಗಳಲ್ಲಿ ಇ ಖಾತಾ ನೀಡುವುದಾಗಿ ಹೇಳಿದ್ದ ಬಿಬಿಎಂಪಿಯು ಇದೀಗ ಮತ್ತೊಂದು ಗುಡ್‌ನ್ಯೂಸ್ ಕೊಟ್ಟಿದೆ. ಬೆಂಗಳೂರಿನಲ್ಲಿರುವ ಆಸ್ತಿದಾರರಿಗೆ ಇ ಖಾತಾ ಸಿಗುವುದರಲ್ಲಿ ಗೊಂದಲ ಸೃಷ್ಟಿಯಾಗುತ್ತಿದ್ದು. ಇದನ್ನು ತಪ್ಪಿಸುವ ಉದ್ದೇಶದಿಂದ ಬಿಬಿಎಂಪಿಯು ಇದೀಗ ಇ ಖಾತಾದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಲು ಮುಂದಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಆಯುಕ್ತರು ಈ ಸಂಬಂಧ ಹೊಸ ಅಪ್ಡೇಟ್ ನೀಡಿದ್ದಾರೆ. ಇ ಖಾತಾ ನೀಡುವುದನ್ನು ಪ್ರಾರಂಭ ಮಾಡಿ 6 ತಿಂಗಳಿಗೂ ಹೆಚ್ಚಾಗಿದ್ದರೂ. ಹಲವು ಆಸ್ತಿದಾರರಿಗೆ ಇಲ್ಲಿಯ ವರೆಗೆ ಇ - ಖಾತಾ ಲಭ್ಯವಾಗಿಲ್ಲ. ಇದೀಗ ಆಸ್ತಿದಾರರಿಗೆ ಗುಡ್‌ನ್ಯೂಸ್ ಕೊಡಲಾಗಿದೆ.
ಬೆಂಗಳೂರಿನಲ್ಲಿ ಆಸ್ತಿದಾರರಿಗೆ ಶೀಘ್ರ ಇ ಖಾತಾ ನೀಡುವ ನಿಟ್ಟಿನಲ್ಲಿ ಬಿಬಿಎಂಪಿಯು FIFO / ಮೊದಲು ಬಂದವರಿಗೆ ಮೊದಲ ಮೊದಲು ಆದ್ಯತೆ ಎನ್ನುವ ಕ್ರಮವನ್ನು ಅಳವಡಿಸಿಕೊಳ್ಳುವುದಕ್ಕೆ ಬಿಬಿಎಂಪಿ ಮುಂದಾಗಿದೆ. ಇದರಿಂದ ಬೆಂಗಳೂರಿನಲ್ಲಿ ಸುಲಭವಾಗಿ ಆಸ್ತಿದಾರರಿಗೆ ಇ ಖಾತಾ ಲಭ್ಯವಾಗಲಿದೆ. ಅಲ್ಲದೇ ಇ ಖಾತಾದಲ್ಲಿ ಇನ್ನೂ ಹಲವು ಸುಲಭ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಇ-ಖಾತಾ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡುವುದು ಹಾಗೂ ಕ್ರಮಬದ್ಧ ಅರ್ಜಿ ವಿಚಾರಣೆಗೆ ಕ್ರಮ ವಹಿಸಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ಈ ನಿಟ್ಟಿನಲ್ಲಿ ಹೊಸ ಅಪ್ಡೇಟ್‌ವೊಂದನ್ನು ಕೊಟ್ಟಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಇ ಖಾತಾಗೆ ಸಂಬಂಧಿಸಿದಂತೆ ವೆಬ್‌ಸೈಟ್‌ನಲ್ಲಿ ಮಹತ್ವದ ಬದಲಾವಣೆಯೊಂದನ್ನು ತರುವುದಕ್ಕೆ ಮುಂದಾಗಿದೆ. ಇ ಖಾತಾ ವೆಬ್‌ಸೈಟ್‌ನಲ್ಲಿ FIFO ಅಳವಡಿಸಿಕೊಳ್ಳುವುದಕ್ಕೆ ಮುಂದಾಗಿದೆ. ಇದರಿಂದ ಮೊದಲು ಅರ್ಜಿ ಸಲ್ಲಿಕೆ ಮಾಡಿದವರಿಗೆ ಅಥವಾ ಮೊದಲು ಬಂದವರಿಗೆ ಮೊದಲ ಆದ್ಯತೆ ಎನ್ನುವಂತೆ ಪರಿಗಣಿಸಲಾಗುತ್ತದೆ. ಇದರಿಂದ ಇ ಖಾತಾ ಬೇಗ ಸಿಗಲಿದೆ ಎಂದು ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
FIFOನಿಂದಾಗಿ ಈಗಾಗಲೇ ಸಲ್ಲಿಕೆಯಾಗಿರುವ ಇಲ್ಲವೇ ಇ ಖಾತಾ ಪಡೆದಿರುವ ಅರ್ಜಿಗಳನ್ನು ವೆಬ್‌ಸೈಟ್‌ನಿಂದ ರಿಮೂವ್ ಮಾಡಲಾಗುತ್ತದೆ. ಇದರಿಂದ ಡಿಜಿಟಲ್ ಗೊಂದಲ ಕಡಿಮೆ ಆಗಲಿದೆ. ಸೈಬರ್ ಸುರಕ್ಷತೆ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಈ ಹಿಂದೆ ಇ ಖಾತಾ ಆಗಿದ್ದ ಕೆಲವು ಪ್ರಮುಖ ದಾಖಲೆಗಳು ಕ್ರ್ಯಾಶ್ ಆದ ಸಂದರ್ಭದಲ್ಲಿ ಹಾಳಾಗಿದ್ದವು ಎನ್ನುವ ಬಗ್ಗೆ ಚರ್ಚೆ ನಡೆದಿತ್ತು. ಇದರಿಂದ ಈಗಾಗಲೇ ಇ ಖಾತಾ ಮಾಡಿಸಿಕೊಂಡಿರುವವರಿಗೆ ಸಂಕಷ್ಟವಾಗಿದೆ ಎನ್ನಲಾಗಿತ್ತು.
ಇನ್ನು ಇದೀಗ ಬಿಬಿಎಂಪಿಯ ವೆಬ್‌ಸೈಟ್‌ನಲ್ಲಿ ಆಸ್ತಿದಾರರು ಇ ಖಾತಾಗೆ ಅರ್ಜಿ ಸಲ್ಲಿಕೆ ಮಾಡುವ ದಾಖಲೆಗಳ ಆಧಾರದ ಮೇಲೆ ಅವರ ಅರ್ಜಿಗಳನ್ನು ವಿಲೇವಾರಿ ಅಥವಾ ಇ ಖಾತಾ ಪ್ರಮಾಣಪತ್ರವನ್ನು ನೀಡಲಾಗುತ್ತಿದೆ. ಇ ಖಾತಾವನ್ನು ಬೆಂಗಳೂರಿನ ಆಸ್ತಿದಾರರಿಗೆ 2 ದಿನಗಳ ಒಳಗಾಗಿ ನೀಡಲಾಗುವುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳು ಹೇಳಿದ್ದಾರಾದರೂ ಬೆಂಗಳೂರಿನಲ್ಲಿ ಇ ಖಾತಾ ಪಡೆದುಕೊಳ್ಳುವುದಕ್ಕೆ ಆಸ್ತಿದಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇನ್ನೂ ಇ ಖಾತಾ ಮಾಡಿಸಿಕೊಡುವುದಕ್ಕೆ ಕೆಲವು ಭಾಗದಲ್ಲಿ 4000 ಸಾವಿರ ರೂಪಾಯಿಯಿಂದ 5000 ಸಾವಿರ ರೂಪಾಯಿ ವರೆಗೆ ಕೇಳುತ್ತಿದ್ದಾರೆ ಎನ್ನುವ ಆರೋಪವೂ ಇದೆ.
ಇದೀಗ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹಾಗೂ ಬೇಗ ಇ ಖಾತಾ ನೀಡುವುದಕ್ಕೆ ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ. ಇನ್ನು ಬೆಂಗಳೂರಿನಲ್ಲಿ ಮಾರ್ಚ್ 21 ರವರೆಗೆ 2.8 ಲಕ್ಷ ಅಂತಿಮ ಇ-ಖಾತಾಗಳನ್ನು ಆಸ್ತಿದಾರರಿಗೆ ಕೊಡಲಾಗಿದೆ ಎಂದು ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications