Bengaluru Property: ಬೆಂಗಳೂರಿನ ರಿಯಲ್ ಎಸ್ಟೇಟ್‌ಗೆ ಹೊಸ ಸೇರ್ಪಡೆ: ಈ ಪ್ರಾಪರ್ಟಿಗೆ ಹೆಚ್ಚಿದ ಬೇಡಿಕೆ

Bengaluru Property: ಬೆಂಗಳೂರು ನಗರ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ಬೂಸ್ಟ್‌ ಆಗುತ್ತಿದೆ. ಇದೀಗ ರಿಯಲ್ ಎಸ್ಟೇಟ್‌ಗೆ ಪೂರಕವಾಗಿ ಫ್ಲಾಟ್, ಅಪಾರ್ಟ್‌ಮೆಂಟ್ ಹಾಗೂ ಮನೆಗಳು ಮಾತ್ರವಲ್ಲದೇ ಹೊಸ ಸೇರ್ಪಡೆಯೂ ಆಗಿದೆ. ಬೆಂಗಳೂರಿನಲ್ಲಿ ಮತ್ತೊಂದು ಪ್ರಾಪರ್ಟಿಗೂ ಬೂಸ್ಟ್‌ ಸಿಕ್ಕಿದ್ದು, ಇದರಿಂದ ಭೂಮಿ ಬೆಲೆ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ. ಅದರ ವಿವರ ನೋಡೋಣ.

ಬೆಂಗಳೂರಿನಲ್ಲಿ ಮಾಲ್‌ಗಳ ಬೇಡಿಕೆ ಹೆಚ್ಚಾಗುತ್ತಿದ್ದು, ಇದೀಗ 2026ನೇ ಸಾಲಿನಲ್ಲಿ ಮಾಲ್‌ಗಳ ಬೇಡಿಕೆ ಇನ್ನಷ್ಟು ಹೆಚ್ಚಳವಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಅಲ್ಲದೇ ಮಾಲ್‌ಗಳಲ್ಲಿ ಬಾಡಿಗೆಯೂ ಹೆಚ್ಚಳವಾಗಲಿದೆ. 2026ರಲ್ಲಿ ಬೆಂಗಳೂರಿನ ಮಾಲ್‌ಗಳು 0.9 ಮಿಲಿಯನ್ ಚದರ ಅಡಿಗಳಷ್ಟು ಹೆಚ್ಚಾಗಲಿವೆ. ಹೆಚ್ಚುತ್ತಿರುವ ಬೇಡಿಕೆ ಹಾಗೂ ಸ್ಥಿರವಾದ ಗುತ್ತಿಗೆ, ಬಾಡಿಗೆಗಳು 2% ರಷ್ಟು ಹೆಚ್ಚಾಗಲಿವೆ ಎಂದು News First Prime ವರದಿ ಮಾಡಿದೆ.

New Boost to Bengaluru Real Estate Rising Demand for This Property Segment

ಮುಂದಿನ ದಿನಗಳಲ್ಲಿ ಮಾಲ್ ಪ್ರಾಪರ್ಟಿ ಮೌಲ್ಯವು ಅಂದಾಜು ಶೇ 3% ರಿಂದ 5% ರಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ. ನಗರದ ಚಿಲ್ಲರೆ ಮಾರುಕಟ್ಟೆ ಹೆಚ್ಚಳ ಹಾಗೂ ರಿಯಲ್ ಎಸ್ಟೇಟ್ ಬೆಳವಣಿಗೆ ಇದಕ್ಕೆ ಪೂರಕವಾಗಿ ಇದೆ ಎಂದು ವರದಿ ಹೇಳಿದೆ. ಬೆಂಗಳೂರಿನ ಚಿಲ್ಲರೆ ರಿಯಲ್ ಎಸ್ಟೇಟ್ ಮಾರುಕಟ್ಟೆ ವಿಸ್ತರಣೆ ಆಗುತ್ತಿದೆ. 2026 ರ ಅಂತ್ಯದ ವೇಳೆಗೆ ಸುಮಾರು 0.9 ಮಿಲಿಯನ್ ಚದರ ಅಡಿಗಳಷ್ಟು ಹೊಸ ಮಾಲ್ ಸ್ಥಳಾವಕಾಶ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇದರೊಂದಿಗೆ ಮಾಲ್‌ಗಳ ಬಾಡಿಗೆ ಮೌಲ್ಯವೂ ಸಹ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ಅಂದಾಜಿಸಲಾಗಿದೆ.

ಮಾಲ್ ಸಂಸ್ಕೃತಿ ಹೆಚ್ಚಳ: ಕರ್ನಾಟಕದ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಮಾಲ್ ಸಂಸ್ಕೃತಿ ಹೆಚ್ಚಾಗಿದೆ. ವಾರಾಂತ್ಯದಲ್ಲಿ ಮಾಲ್‌ಗಳಿಗೆ ಭೇಟಿ ನೀಡುವವರ ಸಂಖ್ಯೆ ಸಹ ಹೆಚ್ಚಳವಾಗುತ್ತಿದ್ದು, ಇದರಿಂದ ಸಹಜವಾಗಿಯೇ ಮಾಲ್‌ಗಳಿಗೂ ಬೇಡಿಕೆ ಹೆಚ್ಚಾಗುತ್ತಿದೆ. ಇದು ಪರೋಕ್ಷವಾಗಿ ಬೆಂಗಳೂರಿನಲ್ಲಿ ಹೊಸ ಮಾಲ್‌ಗಳ ನಿರ್ಮಾಣಕ್ಕೂ ಕಾರಣವಾಗಿದೆ. ಬೆಂಗಳೂರಿನಲ್ಲಿ ಸದ್ಯ ಅಂದಾಜು 200ಕ್ಕೂ ಹೆಚ್ಚು ಮಾಲ್‌ಗಳಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಾಲ್‌ಗಳು ಪ್ರಾರಂಭವಾಗುವ ನಿರೀಕ್ಷೆ ಇದೆ.

ಬೆಂಗಳೂರಿನ ರಿಯಲ್ ಎಸ್ಟೇಟ್ ಅವಕಾಶ: ಇನ್ನು ಬೆಂಗಳೂರಿನ ರಿಯಲ್ ಎಸ್ಟೇಟ್ ಅವಕಾಶ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ವಿವಿಧ ಪ್ರಾಪರ್ಟಿಯೊಂದಿಗೆ ಇದೀಗ ಮಾಲ್‌ಗಳಲ್ಲಿನ ಜಾಗಕ್ಕೂ ಡಿಮ್ಯಾಂಡ್ ಹೆಚ್ಚಾಗಿದ್ದು, ಆಸ್ತಿ ಮೌಲ್ಯ ಹೆಚ್ಚಾಗುತ್ತಿದೆ. ಇನ್ನು ಬೆಂಗಳೂರಿನ ಮಾಲ್‌ಗಳಲ್ಲಿ ಬಾಡಿಗೆ ದರಗಳು 2025 ರ ಅಂತ್ಯದ ವೇಳೆಗೆ ಶೇ 1.5 ರಿಂದ ಶೇ 2% ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಆದರೆ ಬಂಡವಾಳ ಮೌಲ್ಯಗಳು 2.5-3% ವಾರ್ಷಿಕ ವೇಗದಲ್ಲಿ ಬೆಳೆಯುವ ನಿರೀಕ್ಷೆಯಿದೆ. ಹೀಗಾಗಿ, ಹೊಸ ಮಾಲ್‌ಗಳ ಪ್ರಾರಂಭ ಹಾಗೂ ಈಗಾಗಲೇ ಇರುವ ಮಾಲ್‌ಗಳ ವಿಸ್ತೀರ್ಣ ಪ್ರಕ್ರಿಯೆ ಸಹ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+