ಬೆಂಗಳೂರಿಗೆ ಹೊಸ ಪ್ರದೇಶಗಳ ಸೇರ್ಪಡೆ: ಈ ಭಾಗದ ಆಸ್ತಿದಾರರಿಗೆ ಗುಡ್ ನ್ಯೂಸ್, ಕೋಟ್ಯಾಧಿಪತಿಗಳಾಗುವ ಲಕ್!
ಬೆಂಗಳೂರಿನ ಆಡಳಿತಕ್ಕೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆ ಆಗುತ್ತಿದೆ. ಬೆಂಗಳೂರಿನ ಆಡಳಿತದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬದಲಿಗೆ ಗ್ರೇಟರ್ ಬೆಂಗಳೂರು ಆಡಳಿತ ಜಾರಿ ಮಾಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಇದರಿಂದ ಬೆಂಗಳೂರಿಗೆ ಹೊಸ ಪ್ರದೇಶಗಳು ಸೇರ್ಪಡೆ ಆಗಲಿದ್ದು. ಹೊಸ ಪ್ರದೇಶದಲ್ಲಿ ಇರುವವರು ಕೋಟ್ಯಾಧಿಪತಿಗಳು ಆಗಲಿದ್ದಾರೆ ಎಂದೇ ಹೇಳಲಾಗುತ್ತಿದೆ. ಆದರೆ, ಕೆಲವೊಂದು ಪ್ರದೇಶಗಳು ಈ ಹೊಸ ಐದು ಮಹಾನಗರ ಪಾಲಿಕೆಗಳ ಲಿಸ್ಟ್‌ನಿಂದ ಕೈ ಬಿಡಲಾಗಿದೆ. ಬೆಂಗಳೂರನ್ನು ಗ್ರೇಟರ್ ಬೆಂಗಳೂರು ಪ್ರದೇಶ (ಜಿಬಿಎ) ಎಂದು ಗುರುತಿಸಿ, ಐದು ಪಾಲಿಕೆ ರಚನೆ ಮಾಡಲಾಗುತ್ತಿದೆ. ಇದರ ಸಂಪೂರ್ಣ ಮಾಹಿತಿ ಹಾಗೂ ಬೆಂಗಳೂರಿನ ಯಾವ ಭಾಗದಲ್ಲಿ ಭೂಮಿಗೆ ಬಂಗಾರದ ಬೆಲೆ ಬರಲಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರು ಅಭಿವೃದ್ಧಿ ಆಗುತ್ತಿದ್ದು ಬೆಂಗಳೂರಿನಲ್ಲಿ ಐದು ಪಾಲಿಕೆಗಳನ್ನು ರಚನೆ ಮಾಡುತ್ತಿರುವುದರಿಂದ ಕೆಲವು ಪ್ರದೇಶಗಳಲ್ಲಿ ಭೂಮಿಗೆ ಚಿನ್ನದ ಬೆಲೆ ಬಂದಿದೆ. ಈ ಭಾಗದಲ್ಲಿ ಇರುವವರು ಮುಂದಿನ ದಿನಗಳಲ್ಲಿ ಕೋಟ್ಯಾಧಿಪತಿಗಳು ಆಗಲಿದ್ದಾರೆ ಎಂದೇ ಹೇಳಲಾಗುತ್ತಿದೆ. ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ- 2024 (ಜಿಬಿಜಿಎ)ಯನ್ನು ಸರ್ಕಾರ ಪರಿಚಯಿಸಿದೆ. ಗ್ರೇಟರ್ ಬೆಂಗಳೂರು ಪ್ರದೇಶದಲ್ಲೇ ಹೊಸ ಐದು ನಗರ ಪಾಲಿಕೆಗಳನ್ನು ರಚಿಸಲಾಗಿದೆ. ಆದರೆ, ಪಾಲಿಕೆಯ ಸಂಖ್ಯೆಯನ್ನು ಹೆಚ್ಚಿಸಿಲ್ಲ. ಈ ಹಿಂದಿನಂತೆಯೇ 198 ಪಾಲಿಕೆಗಳು ಇರಲಿವೆ.

ಯಾವ ಪ್ರದೇಶಗಳು ಸೇರ್ಪಡೆ, ಯಾವುದು ಔಟ್: ಬೆಂಗಳೂರಿನ ಐದು ಹೊಸ ಪಾಲಿಕೆಗೆ ಹಲವು ಪ್ರದೇಶಗಳು ಸೇರ್ಪಡೆ ಆಗಲಿವೆ. ಈ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಈ ಹಿಂದೆಯೇ ಸುಳಿವು ನೀಡಿದ್ದರು. ಬೆಂಗಳೂರಿನ ಪ್ರಮುಖ ಪ್ರದೇಶಗಳೇ ಹೊಸ ಪಾಲಿಕೆ ವ್ಯಾಪ್ತಿಗೆ ಸೇರಲಿದ್ದು. ಈ ಭಾಗದಲ್ಲಿ ಭೂಮಿ ಬೆಲೆ ಹೆಚ್ಚಳವಾಗಲಿದೆ. ಇಲ್ಲಿರುವವರು ಕೋಟ್ಯಾಧಿಪತಿಗಳು ಆಗಲಿದ್ದಾರೆ ಎಂದೇ ಹೇಳಲಾಗುತ್ತಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರ, ದಾಸರಹಳ್ಳಿ, ಪದ್ಮನಾಭನಗರ, ಯಶವಂತಪುರ ಹಾಗೂ ಮಹದೇವಪುರ ವಿಧಾನಸಭೆ ವ್ಯಾಪ್ತಿಯ ವಾರ್ಡ್ ಪ್ರದೇಶಗಳು ಈಗ ರಚನೆ ಮಾಡಲಾಗಿರುವ ಹೊಸ ಎರಡು ಮಹಾನಗರ ಪಾಲಿಕೆಗಳ ವ್ಯಾಪ್ತಿಗೆ ಸೇರಿಸಲಾಗಿದೆ. ಇದರಿಂದ ಈ ಭಾಗದಲ್ಲಿ ರಿಯಲ್ ಎಸ್ಟೇಟ್ ಬೂಸ್ಟ್ ಆಗಲಿದೆ ಎಂದೇ ಹೇಳಲಾಗುತ್ತಿದೆ.
ಈ ಪ್ರದೇಶ ಔಟ್: ಬೆಂಗಳೂರಿನ ಹಲವು ಪ್ರದೇಶಗಳು ಹೊಸ ಪಾಲಿಕೆ ವ್ಯಾಪ್ತಿಗೆ ಸೇರಿರುವುದರ ನಡುವೆಯೇ ಒಂದು ಪ್ರದೇಶವನ್ನು ಈ ಲಿಸ್ಟ್ ನಿಂದ ಕೈ ಬಿಡಲಾಗಿದೆ.
ಆನೇಕಲ್ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಕೂಡ್ಲು ವಾರ್ಡ್ ಹೊಸ ಮಹಾನಗರ ಪಾಲಿಕೆಗಳ ವ್ಯಾಪ್ತಿಯಿಂದ ಕೈಬಿಡಲಾಗಿದೆ ಇದು ಈ ಭಾಗದ ಆಸ್ತಿದಾರರಲ್ಲಿ ನಿರಾಸೆ ಮೂಡಿಸಿದೆ. ಬೆಂಗಳೂರಿನ ಭಾಗವಾಗಿದ್ದರೆ ಈ ಭಾಗದಲ್ಲೂ ಭೂಮಿಗೆ ರಿಯಲ್ ಎಸ್ಟೇಟ್ ನಿಂದ ಭಾರೀ ಡಿಮ್ಯಾಂಡ್ ಇತ್ತು.












Click it and Unblock the Notifications