ಬೆಂಗಳೂರಲ್ಲಿ ಅಪಾರ್ಟ್‌ಮೆಂಟ್‌ಗಳ ನಿರ್ಮಾಣ ಶೇ.50ರಷ್ಟು ಕುಸಿತ

ಬೆಂಗಳೂರು, ಸೆಪ್ಟೆಂಬರ್ 13: ಕಳೆದ ಒಂದೆರೆಡು ವರ್ಷಗಳಲ್ಲಿ ಬೆಂಗಳೂರಲ್ಲಿ ಹೊಸ ಅಪಾರ್ಟ್‌ಮೆಂಟ್‌ಗಳ ನಿರ್ಮಾಣ ಸಂಖ್ಯೆ ಕಡಿಮೆಯಾಗಿದೆ.

ಅದರಲ್ಲೂ ಜಿ ಪರಮೇಶ್ವರ್ ಉಪಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬೆಂಗಳೂರಲ್ಲಿ ಇನ್ನು 5 ವರ್ಷಗಳ ಕಾಲ ಅಪಾರ್ಟ್‌ಮೆಂಟ್ ಕಟ್ಟುವಂತಿಲ್ಲ ಎಂದು ಸೂಚನೆ ನೀಡಿದ್ದರು.

ಅದಾದ ಬಳಿಕ ಹೊಸ ಅಪಾರ್ಟ್‌ಮೆಂಟ್‌ಗಳ ನಿರ್ಮಾಣ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಅದಕ್ಕೂ ಮೊದಲು ನೋಟು ಅಮಾನ್ಯೀಕರಣ, ಜಿಎಸ್‌ಟಿ ಹಾಗೂ ಹಸಿರು ನ್ಯಾಯಾಧೀಕರಣದ ಕೆಲವು ನಿಯಮಗಳ ಕಾರಣದಿಂದಾಗಿ ಹೊಸ ಅಪಾರ್ಟ್‌ಮೆಂಟ್ ಅಷ್ಟಾಗಿ ನಿರ್ಮಾಣವಾಗಿಲ್ಲ.

New Apartment Construction slumped Over By 50 percent in Bengaluru

ಹಾಗೆಯೇ ಬೆಂಗಳೂರಲ್ಲಿ ಸಮರ್ಪಕವಾಗಿ ನೀರು ಲಭ್ಯವಿಲ್ಲದ ಕಾರಣ, ಹಿಂದಿನ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿತ್ತು. ಆದರೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ಇದೇ ಸೂಚನೆಯನ್ನು ಮುಂದುವರೆಸಿಕೊಂಡು ಹೋಗಲಿದೆಯೇ ಎನ್ನುವುದು ಪ್ರಶ್ನೆಯಾಗಿದೆ.

ಅಪಾರ್ಟ್‌ಮೆಂಟ್ ನಿರ್ಮಾಣ ಮಾಡಲು ಅನುಮತಿ ನೀಡಿ ಎಂದು ಬಿಬಿಎಂಪಿಗೆ ಸಾಕಷ್ಟು ಮನವಿಗಳು ಬಂದಿದ್ದರೂ ಕೂಡ ಅನುಮತಿ ನೀಡಿಲ್ಲ.ಆಗಸ್ಟ್ 2019ರವರೆಗೆ 30ಕ್ಕೂ ಹೆಚ್ಚು ಅರ್ಜಿಗಳು ಬಿಬಿಎಂಪಿಗೆ ಬಂದಿದೆ.

ಆದರೆ ಕಳೆದ ಒಣದೆರೆಡು ವರ್ಷಕ್ಕೆ ಹೋಲಿಸಿದರೆ ಈ ಅರ್ಜಿಗಳು ಕೂಡ ಶೇ. 50ರಷ್ಟು ಕಡಿಮೆಯಾಗಿವೆ ಎಂದು ಬಿಬಿಎಂಪಿ ಎಡಿಟಿಪಿ ಹೆಚ್ಚುವರಿ ನಿರ್ದೇಶಕರು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಮನೆಗಳ ನಿರ್ಮಾಣ ಸಂಖ್ಯೆಯೂ ಕೂಡ ಕಡಿಮೆಯಾಗಿದೆ. ಪ್ರತಿ ವರ್ಷವೂ 100ಕ್ಕೂ ಹೆಚ್ಚು ಮನವಿ ಪತ್ರಗಳು ಬಿಬಿಎಂಪಿ ಕೈಸೇರುತ್ತಿತ್ತು.

2010-2013ರವರೆಗಂತೂ ವರ್ಷಕ್ಕೆ 300ಕ್ಕೂ ಹೆಚ್ಚು ಅರ್ಜಿಗಳು ಬರುತ್ತಿದ್ದವು. ಅದಕ್ಕೆ ಹೋಲಿಸಿದರೆ 2019ರಲ್ಲಿ ಶೇ.50ರಷ್ಟು ಕಡಿಮೆಯಾಗಿದೆ.

ಕೇವಲ ನೋಟು ಅಮಾನ್ಯೀಕರಣ, ಜಿಎಸ್‌ಟಿಯನ್ನೇ ದೂಷಿಸುವುದು ತಪ್ಪು, ಆದಾಯ ತೆರಿಗೆ, ರೇರಾ, ಎನ್‌ಜಿಟಿಯ ಕೆಲವು ನಿಯಮಗಳೂ ಕೂಡ ಕಾರಣವಾಗಿವೆ ಎಂದು ಕ್ರೆಡಾಯ್ ಮುಖ್ಯಸ್ಥ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+