ಬೆಂಗಳೂರಿಗೆ ಹೊಸ 5 ಪಾಲಿಕೆ: ಈ ಭಾಗದ ಭೂಮಿಗೆ ಚಿನ್ನದ ಬೆಲೆ ನಿರೀಕ್ಷೆ! ಹೊಸ ಪಾಲಿಕೆ ವಿವರ ಇಲ್ಲಿದೆ
ಬೆಂಗಳೂರಿನ ರಿಯಲ್ ಎಸ್ಟೇಟ್ ಅಭಿವೃದ್ಧಿ ಆಗುತ್ತಿದೆ. ಈಗಾಗಲೇ ಬೆಂಗಳೂರಿನ ಹಲವು ಭಾಗಗಳಲ್ಲಿ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಇದೀಗ ಬೆಂಗಳೂರಿನಲ್ಲಿ ಆಗಿರುವ ಮಹತ್ವದ ಬೆಳವಣಿಗೆಯು ರಿಯಲ್ ಎಸ್ಟೇಟ್ ಬೂಸ್ಟ್‌ಗೆ ಕಾರಣವಾಗಿದೆ. ಕರ್ನಾಟಕ ಸರ್ಕಾರವು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಭಾಗವಾಗಿ ಬೆಂಗಳೂರಿನಲ್ಲಿ ಐದು ಮಹಾನಗರ ಪಾಲಿಕೆಗಳನ್ನು ರಚನೆ ಮಾಡುವುದಕ್ಕೆ ಮುಂದಾಗಿದೆ. ಈ ಪಾಲಿಕೆಗಳು ರಚನೆಯಾದರೆ, ಬೆಂಗಳೂರಿನ ಐದು ಪ್ರಮುಖ ಪ್ರದೇಶಗಳು ಸಪರೇಟ್ ಆಗಲಿವೆ. ಇದರಿಂದ ರಿಯಲ್ ಎಸ್ಟೇಟ್ ಭರ್ಜರಿ ಬೆಳೆಯಲಿದೆ. ವಿವಿಧ ಪ್ರದೇಶಗಳ ಭೂಮಿಗೆ ಬಂಗಾರದ ಬೆಲೆ ಬರಲಿದೆ ಎಂದೇ ಅಂದಾಜಿಸಲಾಗುತ್ತಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರಿನಲ್ಲಿ ಭೂಮಿಗೆ ಚಿನ್ನದ ಬೆಲೆ ಇದೆ. ಇನ್ನು ಬೆಂಗಳೂರಿನಲ್ಲಿ ಭೂಮಿಯನ್ನು ಚಿನ್ನದ ಮೊಟ್ಟೆ ಇರಿಸುವ ಕೋಳಿಗೆ ಹೋಲಿಕೆ ಮಾಡುವುದು ಸಹ ಇದೆ. ಇದಕ್ಕೆ ಕಾರಣ ಭೂಮಿ ಬೆಲೆಯು ವರ್ಷದಿಂದ ವರ್ಷಕ್ಕೆ ವಿವಿಧ ಕಾರಣಗಳಿಗೆ ಹೆಚ್ಚಳ ಆಗುತ್ತಲ್ಲೇ ಇದೆ. ಅದರಲ್ಲೂ ಹಳೆಯ ಬೆಂಗಳೂರು ಹಾಗೂ ಹೊಸ ಬೆಂಗಳೂರಿನಲ್ಲಿ ಭೂಮಿಯ ಬೆಲೆ ಅಪಾರ ವ್ಯತ್ಯಾಸವಿದೆ. ಹಳೆಯ ಬೆಂಗಳೂರು ಭಾಗದಲ್ಲಿ ವಿಶಾಲವಾದ ರಸ್ತೆಗಳಿವೆ. ಅಲ್ಲದೇ ಈ ಭಾಗದಲ್ಲಿ ಹೊಸ ಬೆಂಗಳೂರು ಪ್ರದೇಶಗಳಿಗೆ ಹೋಲಿಕೆ ಮಾಡಿದರೆ ಮಳೆಯಿಂದ ಕೃತಕ ಪ್ರವಾಹ ಪರಿಸ್ಥಿತಿ ಹಾಗೂ ಮಳೆ ಅನಾಹುತ ಸೇರಿದಂತೆ ಕೆಲವೊಂದು ಸಮಸ್ಯೆಗಳು ಆಗುವುದು ತುಂಬಾ ಕಡಿಮೆ.

ಬೆಂಗಳೂರಿಗೆ ಐದು ಮಹಾನಗರ ಪಾಲಿಕೆ: ಇನ್ನು ಈಗ ಇರುವ ಒಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಐದು ಮಹಾನಗರ ಪಾಲಿಕೆಗಳನ್ನಾಗಿ ಬದಲಾಯಿಸಲು ಸರ್ಕಾರ ಮುಂದಾಗಿದೆ. ಅದರಲ್ಲಿ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ, ಬೆಂಗಳೂರು ಪಶ್ಚಿಮ ಹಾಗೂ ಬೆಂಗಳೂರು ಕೇಂದ್ರ ಪ್ರದೇಶಗಳಾಗಲಿವೆ. ಇದರಿಂದ ಈ ಹೊಸ ಮಹಾನಗರ ಪಾಲಿಕೆಗಳಿಗೆ ಇನ್ನಷ್ಟು ಹೊಸ ಪ್ರದೇಶಗಳು ಸೇರಲಿವೆ. ಅಲ್ಲದೇ ಈ ರೀತಿ ಹೊಸ ಪ್ರದೇಶಗಳು ಸೃಷ್ಟಿ ಆಗುವುದರಿಂದ ಅಭಿವೃದ್ಧಿ ಆಗಲಿದೆ. ಭೂಮಿಗೆ ಚಿನ್ನದ ಬೆಲೆ ಬರಲಿದೆ ಎಂದು ನಿರೀಕ್ಷೆ ಮಾಡಲಾಗುತ್ತಿದೆ.












Click it and Unblock the Notifications