ಭಾನುವಾರದಿಂದಲೇ ಹೆಚ್ಚಳವಾಗಿದೆ ನವಯುಗ ಟೋಲ್ ದರ
ಬೆಂಗಳೂರು, ಜುಲೈ 1: ಬೆಂಗಳೂರು-ನೆಲಮಂಗಲ ಎಕ್ಸ್‌ಪ್ರೆಸ್ ವೇ ಟೋಲ್ ಭಾನುವಾರದಿಂದ ದುಬಾರಿಯಾಗಿದೆ.
ನೆಲಮಂಗಲದ ಮೂಲಕ ತುಮಕೂರಿಗೆ ಹೋಗುವವರಿಗೆ ಬಿಸಿ ತಟ್ಟಿದೆ. ಕಾರು, ಜೀಪು, ಲಘು ವಾಹನಗಳು, ಮಿನಿ ಬಸ್ ಏಕಮುಖ ಪ್ರಯಾಣ ದರ ಅಷ್ಟೇ ಇರಲಿದೆ. ಆದರೆ ನಿತ್ಯದ ಬಸ್ ಪಾಸಿನ ದರ ಮಾತ್ರ ಐದು ರೂ ಹೆಚ್ಚಳವಾಗಿದೆ.
ಕಾರು, ಜೀಪುಗಳ ತಿಂಗಳ ಪಾಸಿನ ದರ 50 , ಲಘು ವಾಹನಗಳು, ಮಿನಿಬಸ್ ಪಾಸಿನ ದರ 75 ರೂ, ಬಸ್, ಟ್ರಕ್‌ಗಳ ದರವೂ ಏರಿಕೆಯಾಗಿದೆ. ದ್ವಿಚಕ್ರ ವಾಹನಗಳಿಗೆ ಯಾವುದೇ ಟೋಲ್ ಇಲ್ಲ.

ಬೆಂಗಳೂರಿನ ನವಯುಗ ಟೋಲ್ ಪ್ರೈವೇಟ್ ಲಿಮಿಟೆಡ್ ಭಾನುವಾರ ಟೋಲ್ ದರ ಪ್ರಕಟಿಸಿದೆ. 19.5 ಕಿ.ಮೀಗೆ ದರ ಪರಿಷ್ಕರಣೆ ಮಾಡಿದೆ. ನಿತ್ಯ 45,000 ವಾಹನಗಳು ಸಂಚರಿಸುತ್ತವೆ. ಇತ್ತೀಚೆಗೆ ಎಲೆಕ್ಟ್ರಾನಿಕ್ಸ್‌ಸಿಟಿ, ಅತ್ತಿಬೆಲೆ ಮಾರ್ಗದ ಟೋಲ್ ದರ ಹೆಚ್ಚಳ ಮಾಡಲಾಗಿತ್ತು.
ದ್ವಿಚಕ್ರ ವಾಹನ ಸವಾರರು ಎರಡೂ ಮಾರ್ಗಗಳಿಗ ಸೇರಿ 20-30 , ನಾಲ್ಕು ಚಕ್ರ ವಾಹನ ಸವಾರರು 45-70 ನೀಡಬೇಕಿದೆ.ಮಾಸಿಕ ಪಾಸಿನ ದರವನ್ನು ಕೂಡ ದ್ವಿಚಕ್ರ ವಾಹನ ಸವಾರರಿಗೆ 20 ರೂ ಹಾಗೂ ಕಾರಿಗೆ 40, ಎಸ್‌ಯುವಿಗೆ 60 ರೂ , ಟ್ರಕ್ಸ್, ಬಸ್‌ಗಗಳಿಗೆ 120 ರೂ ನೀಡಬೇಕಿದೆ. ಈಗ ದ್ವಿಚಕ್ರ ವಾಹನ ಸವಾರರು 620 ರೂ , ಕಾರಿಗೆ 1,405, ವಾಣಿಜ್ಯ ವಾಹನಗಳು 1,965 ಟ್ರಕ್ ಬಸ್ ಗಳು 3,930 ರೂ ಪಾವತಿಸುತ್ತಿದ್ದಾರೆ.












Click it and Unblock the Notifications