Get Updates
Get notified of breaking news, exclusive insights, and must-see stories!

Census: ಮಾದರಿಯಾದ ಪಾಲಿಕೆ ಆಯುಕ್ತರು: 100ಕ್ಕೂ ಹೆಚ್ಚು ಗಣತಿದಾರರಿಂದ ಏಕಕಾಲಕ್ಕೆ 'ಸ್ವಯಂ ಗಣತಿ'

National Census 2027: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ರಾಷ್ಟ್ರೀಯ ಜನಗಣತಿ 2027 ಕಾರ್ಯ ಮುಂದಿನ ವಾರದಿಂದ ಆರಂಭವಾಗಲಿದೆ. ಈ ಸಂಬಂಧ ಅಗತ್ಯ ಸಿಬ್ಬಂದಿಗೆ ತರಬೇತಿ ಕೊಡಲಾಗುತ್ತಿದೆ. ತರಬೇತಿ ಶಿಬರಕ್ಕೆ ಭೇಟಿ ನೀಡಿದ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ ಎನ್ ರಮೇಶ್ ಅವರು ಸ್ವಯಂ ಗಣತಿಗೆ ಒಳಗಾಗಿದ್ದು ವಿಶೇಷವಾಗಿತ್ತು. ಅವರು ಮಾತ್ರವಲ್ಲದೇ ಸುಮಾರು 100 ಮಂದಿ ಗಣತಿದಾರರು ಸ್ವಯಂ ಗಣತಿ ಮಾಡಿಕೊಂಡು ಗಣತಿ ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವಂತೆ ಅವರು ಉತ್ತೇಜಿಸಿದರು.

ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಜನಗಣತಿ ಕಾರ್ಯವನ್ನು ವ್ಯವಸ್ಥಿತವಾಗಿ ನಡೆಸಲು ಅಗತ್ಯ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಇದೆಲ್ಲ ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ, ಪಾಲಿಕೆ ಆಯುಕ್ತರು ಹಾಗೂ ಪ್ರಧಾನ ಜನಗಣತಿ ಅಧಿಕಾರಿಗಳಾದ ಕೆ. ಎನ್. ರಮೇಶ್ ಅವರು ಜೆ.ಪಿ. ನಗರದ ಆರ್‌ ವಿ ಡೆಂಟಲ್ ಕಾಲೇಜಿನಲ್ಲಿ ನಡೆಯುತ್ತಿರುವ ತರಬೇತಿ ಶಿಬಿರಕ್ಕೆ ಭೇಟಿ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.

National Census 2027

ಆಯುಕ್ತರಿಂದ ಸ್ವಯಂ ಗಣತಿ

ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆಯುಕ್ತರು ಸ್ವತಃ ತಾವೇ 'ಸ್ವಯಂ ಜನಗಣತಿ' (Self-Enumeration) ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ತಮ್ಮ ವಿವರಗಳನ್ನು ನೋಂದಾಯಿಸುವ ಮೂಲಕ ಗಣತಿದಾರರು ಹಾಗೂ ಮೇಲ್ವಿಚಾರಕರು ಸಹ ಅವರೊಂದಿಗೆ ಸ್ವಯಂ ಗಣತಿಯಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸಿದರು. ಇದರಿಂದ ತರಬೇತಿ ಕೊಠಡಿಯಲ್ಲಿದ್ದ ಸುಮಾರು 100ಕ್ಕೂ ಹೆಚ್ಚು ಗಣತಿದಾರರು ಮತ್ತು ಮೇಲ್ವಿಚಾರಕರು ಏಕಕಾಲದಲ್ಲಿ ಈ ಸ್ವಯಂ ಗಣತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.

ಕಾವೇರಿ ನೀರಿನ ಬಾಕಿ ಬಿಲ್ ಕಟ್ಟುವವರಿಗಾಗಿ ಇಂದಿನಿಂದಲೇ 'ಒಟಿಎಸ್' ಆರಂಭ; 5.11 ಲಕ್ಷ ಮಂದಿಗೆ ಬಿಲ್ ಜತೆ ನೋಟಿಸ್
ಕಾವೇರಿ ನೀರಿನ ಬಾಕಿ ಬಿಲ್ ಕಟ್ಟುವವರಿಗಾಗಿ ಇಂದಿನಿಂದಲೇ 'ಒಟಿಎಸ್' ಆರಂಭ; 5.11 ಲಕ್ಷ ಮಂದಿಗೆ ಬಿಲ್ ಜತೆ ನೋಟಿಸ್

ನಗರದ ಸಾರ್ವಜನಿಕರು ಆನ್‌ಲೈನ್ ಮೂಲಕ ತಮ್ಮ ವಿವರಗಳನ್ನು ತಾವೇ ದಾಖಲಿಸುವುದರಿಂದ ಸಮಯ ಉಳಿತಾಯವಾಗುವುದಲ್ಲದೆ, ನಿಖರವಾದ ಮಾಹಿತಿ ಲಭ್ಯವಾಗುತ್ತದೆ. ಇದನ್ನು ಉತ್ತೇಜಿಸಲು ಅಧಿಕಾರಿಗಳೇ ಮೊದಲು ಭಾಗವಹಿಸುವುದು ಅಗತ್ಯ ಎಂದು ಆಯುಕ್ತರು ತಿಳಿಸಿದರು.

ಗಣತಿದಾರರಿಗೆ ತಾಂತ್ರಿಕ ಸವಾಲು: ಸಂವಾದ

ಗಣತಿ ಮಾಡಲು ಸಜ್ಜಾಗುತ್ತಿರುವ ತರಬೇತಿ ಕೇಂದ್ರದಲ್ಲಿ ಗಣತಿದಾರರು ಎದುರಿಸುತ್ತಿರುವ ತಾಂತ್ರಿಕ ಸವಾಲುಗಳು ಮತ್ತು ಕ್ಷೇತ್ರಕಾರ್ಯದ ವೇಳೆ ಉದ್ಭವಿಸಬಹುದಾದ ಸಮಸ್ಯೆಗಳ ಕುರಿತು ಆಯುಕ್ತರು ಸುದೀರ್ಘವಾಗಿ ಚರ್ಚಿಸಿದರು. ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದಾಗಿ ತಿಳಿಸಿದರು.

ಆಯುಕ್ತರು ಕೇವಲ ಭಾಷಣ ಮಾಡದೆ, ಪ್ರತಿಯೊಬ್ಬ ಗಣತಿದಾರರ ಬಳಿ ತೆರಳಿ ಅವರ ಸಂದೇಹಗಳನ್ನು ಆಲಿಸಿದರು. ಹಾಗೂ ಮೊಬೈಲ್ ಆಪ್ ಬಳಕೆ, ದತ್ತಾಂಶ ಸುರಕ್ಷತೆ ಮತ್ತು ಮನೆಗಳ ಗುರುತಿಸುವಿಕೆಯಲ್ಲಿ ಇರುವ ಗೊಂದಲಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದರು.

ಜನಗಣತಿಯು ದೇಶದ ಭವಿಷ್ಯದ ಯೋಜನೆಗಳ ರೂಪಿಸುವಿಕೆಗೆ ಬುನಾದಿಯಾಗಿದೆ. ಬೆಂಗಳೂರಿನಂತಹ ಪ್ರದೇಶದಲ್ಲಿ ಪ್ರತಿ ಮನೆಯನ್ನು ತಲುಪುವುದು ಸವಾಲಿನ ಕೆಲಸ. ಬೆಂಗಳೂರು ದಕ್ಷಿಣದ ಪ್ರತಿಯೊಬ್ಬ ನಾಗರಿಕನ ಮಾಹಿತಿ ಸರಿಯಾಗಿ ದಾಖಲಾಗುವುದನ್ನು ಖಚಿತಪಡಿಸಿಕೊಳ್ಳುವುದು ಪ್ರತಿಯೊಬ್ಬ ಗಣತಿದಾರನ ಕರ್ತವ್ಯ ಎಂದು ಸಲಹೆ ನೀಡಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+