Get Updates
Get notified of breaking news, exclusive insights, and must-see stories!

ಕಾವೇರಿ ನೀರಿನ ಬಾಕಿ ಬಿಲ್ ಕಟ್ಟುವವರಿಗಾಗಿ ಇಂದಿನಿಂದಲೇ 'ಒಟಿಎಸ್' ಆರಂಭ; 5.11 ಲಕ್ಷ ಮಂದಿಗೆ ಬಿಲ್ ಜತೆ ನೋಟಿಸ್

ಬೆಂಗಳೂರು: ರಾಜ್ಯ ಸರ್ಕಾರದ ನಿರ್ಧಾರದಂತೆ ದೀರ್ಘ ಕಾಲದಿಂದ ನೀರಿನ ಬಿಲ್ ಬಾಕಿ ಉಳಿಸಿಕೊಂಡಂತಹ ಗ್ರಾಹಕರಿಗೆ ಅನುಕೂಲ ಒದಗಿಸಲು 'ಒನ್ ಟೈಮ್ ಸೆಟಲ್‌ಮೆಂಟ್' (𝗢𝗻𝗲 𝗧𝗶𝗺𝗲 𝗦𝗲𝘁𝘁𝗹𝗲𝗺𝗲𝗻𝘁 - 𝗢𝗧𝗦) ಯೋಜನೆ ಪ್ರಕ್ರಿಯೆಯನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಅಧಿಕೃತವಾಗಿ ಆರಂಭಿಸಿದೆ. ಇದರ ಜೊತೆಗೆ ಮತ್ತೊಂದು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (𝗕𝗪𝗦𝗦𝗕) ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ಸೋಮವಾರ ತಿಳಿಸಿದರು.

ಬಾಕಿ ನೀರಿನ ಬಿಲ್ ಮೊತ್ತದ ಮೇಲಿನ ಶೇ. 100 ಅಂದರೆ ಸಂಪೂರ್ಣ ಬಡ್ಡಿ ಕೈ ಬಿಟ್ಟು ಶುಲ್ಕ ಪಾವತಿಸಗೆ ಒಟಿಎಸ್ ಮೂಲಕ ಅವಕಾಶ ನೀಡಲಾಗಿದೆ. ಈ ಯೋಜನೆ ಪ್ರಕ್ರಿಯೆ ಆರಂಭವಾದ ಹಿನ್ನೆಲೆಯಲ್ಲಿ ಈ ತಿಂಗಳ ನೀರಿನ ಬಿಲ್ ಜೊತೆಯಲ್ಲೇ ಒಟಿಎಸ್ ಯೋಜನೆ ಅಡಿಯಲ್ಲಿ ಬರುವ ಗ್ರಾಹಕರಿಗೆ ಪಾವತಿ ಮಾಹಿತಿ ಇರುವ ನೋಟಿಸ್ ಜಾರಿ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

BWSSB OTS Scheme

ಯುಗಾದಿ ಹಬ್ಬದ ವಿಶೇಷ ಕೊಡುಗೆಯಾಗಿ ಜಲಮಂಡಳಿ ವತಿಯಿಂದ ಈ ಒಟಿಎಸ್ ಯೋಜನೆಯನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಸ್ವತಃ ಪ್ರಕಟಿಸುವ ಮೂಲಕ ಸಿಹಿ ಸುದ್ದಿ ಕೊಟ್ಟಿದ್ದರು. ಜಲಮಂಡಳಿ ವ್ಯಾಪ್ತಿಯಲ್ಲಿರುವ ಸುಮಾರು 𝟭𝟭 ಲಕ್ಷ ನೀರಿನ ಸಂಪರ್ಕಗಳ ಪೈಕಿ, 𝟱.𝟭𝟭 ಲಕ್ಷ ಗ್ರಾಹಕರು ಬಿಲ್ ಬಾಕಿ ಉಳಿಸಿಕೊಂಡಿರುವುದಾಗಿ ಅವರು ವಿವರಿಸಿದ್ದಾರೆ.

Bengaluru Metro: ನೇರಳೆ- ಹಸಿರು ಮಾರ್ಗದ ಸಂಚಾರ ದಟ್ಟಣೆಗೆ ಮುಕ್ತಿ, ಹೊಸ ರೈಲುಗಳಿಗೆ ಬೋರ್ಡ್ ಅನುಮತಿ
Bengaluru Metro: ನೇರಳೆ- ಹಸಿರು ಮಾರ್ಗದ ಸಂಚಾರ ದಟ್ಟಣೆಗೆ ಮುಕ್ತಿ, ಹೊಸ ರೈಲುಗಳಿಗೆ ಬೋರ್ಡ್ ಅನುಮತಿ

𝟮𝟬𝟮𝟲 ರ ಫೆಬ್ರವರಿ ಅಂತ್ಯದ ಮಾಹಿತಿಯಂತೆ, ಒಟ್ಟು ಬಾಕಿ ಮೊತ್ತ ರೂ. 𝟴𝟱𝟭.𝟯𝟯 ಕೋಟಿಗಳಾಗಿವೆ. ಇದರಲ್ಲಿ ಅಸಲು ಮೊತ್ತ ರೂ. 𝟱𝟯𝟵.𝟰𝟯 ಕೋಟಿ ಹಾಗೂ ಬಡ್ಡಿ ರೂ. 𝟯𝟭𝟭.𝟵𝟬 ಕೋಟಿ ಸೇರಿದೆ. ಈ ಬೃಹತ್ ಬಾಕಿಯನ್ನು ಸುಲಭವಾಗಿ ಪಾವತಿಸಲು ಹಾಗೂ ಗ್ರಾಹಕರ ಮೇಲಿನ ಆರ್ಥಿಕ ಹೊರೆ ತಗ್ಗಿಸಲು, ಏಪ್ರಿಲ್ 𝟮𝟬𝟮𝟲 ರಿಂದ ಜೂನ್ 𝟮𝟬𝟮𝟲 ರವರೆಗೆ (𝟯 ತಿಂಗಳ ಅವಧಿ) ಈ ಒಟಿಎಸ್ ಯೋಜನೆ ಜಾರಿಗೆ ತರಲಾಗುತ್ತಿದೆ.

ಬಿಲ್ ಜೊತೆಯಲ್ಲೇ ಸಮಗ್ರ ಮಾಹಿತಿ

"ಯೋಜನೆಯ ಯಶಸ್ವಿ ಜಾರಿಗೆ ಈಗಾಗಲೇ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಒಟಿಎಸ್ ಯೋಜನೆಗೆ ಅರ್ಹರಾಗಿರುವ ಗ್ರಾಹಕರಿಗೆ ಈ ತಿಂಗಳ ನೀರಿನ ಬಿಲ್ ಜೊತೆಯಲ್ಲಿಯೇ ಸಮಗ್ರ ಮಾಹಿತಿ ಒದಗಿಸಲಾಗುವುದು. ಬಾಕಿ ಮೊತ್ತ, ಮನ್ನಾ ಆಗುವ ಬಡ್ಡಿ, ಪಾವತಿಸಬೇಕಾದ ಅಂತಿಮ ಮೊತ್ತ, ಪಾವತಿಸುವ ವಿಧಾನ ಹಾಗೂ ಯೋಜನೆಯ ಮಾನದಂಡಗಳ ಸಂಪೂರ್ಣ ವಿವರಗಳನ್ನು ಒಳಗೊಂಡಿರುವ ಪ್ರತ್ಯೇಕ ಪತ್ರವನ್ನು ಬಿಲ್ ಜೊತೆಯಲ್ಲೇ ನೀಡಲಾಗುವುದು ಎಂದು ಅವರು ವಿವರಿಸಿದರು.

𝟯𝟭𝟭.𝟵𝟬 ಕೋಟಿ ರೂ. ಬಡ್ಡಿ ಮನ್ನ

ಇಷ್ಟು ದೊಡ್ಡ ಪ್ರಮಾಣದಲ್ಲಿ ನೀರಿನ ಬಾಕಿ ಬಿಲ್ ಮೇಲಿನ ಬಡ್ಡಿ ಮನ್ನಾಗೆ ಸರ್ಕಾರ ನಿರ್ಧರಿಸಿದೆ. ನಗರದಲ್ಲಿ ಬಹಳ ದಿನಗಳಿಂದ ನೀರಿನ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರು, ಬಡ್ಡಿ ಮನ್ನಾದ ಈ ಸುವರ್ಣಾವಕಾಶ ಪಡೆದುಕೊಳ್ಳಬೇಕು. ತಮ್ಮ ಅಸಲು ಹಣವನ್ನು ಪಾವತಿಸುವ ಮೂಲಕ ಮಂಡಳಿಯೊಂದಿಗೆ ಕೈಜೋಡಿಸಬೇಕು ಎಂದು ಜಲಮಂಡಳಿ ಅಧ್ಯಕ್ಷರು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+