ಹುಡುಗಿಯರೇ ಎಚ್ಚರ: ಟಾಕ್ಸಿಕ್ ಗಂಡಸರ ಲಕ್ಷಣಗಳಿವು, ಮೆಚ್ಚಿ ಒಲಿದರೆ ಬಲಿಯಾಗುವಿರಿ -ಡಾ ರೂಪಾ ರಾವ್ ಬರಹ

ಆಲ್ಫಾ ಮೇಲ್ ಎಂದು ಬಿಂಬಿತವಾಗಿರುವ ಗಂಡಸರು ನಿಜಕ್ಕೂ ಅಸಹಜ ನಡವಳಿಕೆ (ಅಬ್‌ನಾರ್ಮಲ್) ಹೊಂದಿರುತ್ತಾರೆ. ಆಲ್ಫಾ ಮೇಲ್ ಗಂಡಸರನ್ನು ಹುಡುಕುವ ಹಪಾಹಪಿಯಲ್ಲಿ ಹೆಂಗಸರು ಈ ರೀತಿಯ ಅಬ್‌ನಾರ್ಮಲ್ ಟಾಕ್ಸಿಕ್ ಹುಡುಗರಿಗೆ ಒಲಿಯುತ್ತಾರೆ.

ಸಜ್ಜನ ಸ್ವಭಾವ, ಒಳ್ಳೆಯತನ ಇರುವುದು ಗಂಡಸರ ದೌರ್ಬಲ್ಯ (ವೀಕ್‌ನೆಸ್) ಎಂದು ಬಿಂಬಿತವಾಗುತ್ತಿರುವ ಅಪಾಯ ಕಾಣಿಸುತ್ತಿದೆ. 'ಗರ್ಲ್‌ಫ್ರೆಂಡ್‌'ನಂಥ ಸಿನಿಮಾ ಕೂಡಾ ಬಂದಾಗಿದೆ. ಆದರೂ ಸಹ ಇನ್ನೂ 'ಅನಿಮಲ್‌'ನಲ್ಲಿ ಬಂದ ಟಾಕ್ಸಿಕ್ ಹೀರೋಗಳಂಥವರ ಬಲೆಗೇ ಹುಡುಗಿಯರು ಬೀಳುತ್ತಿರುವುದು ವಿಷಾದದ ಸಂಗತಿ.

Women Beware

"ನನಗೆ ಈತ ಇತರರೊಡನೆ ಹೊಡೆದಾಡಬೇಕು, ನನಗಾಗಿ ಜಗಳವಾಡಿ ನನ್ನನ್ನು ಕಾಪಾಡಬೇಕು ಅಂತ‌ ಅನಿಸುತ್ತೆ ಅದು ತಪ್ಪಾ?" ಎಂದು ಓರ್ವ ವಿವಾಹಿತೆ ಹೇಳಿದ್ದರು. ಇನ್ನೊಂದಿಷ್ಟು ಮಹಿಳೆಯರು "ಇಷ್ಟು ವರ್ಷ ನನಗೆ ಗಂಡಸರು ಹೀಗೂ ಇರ್ತಾರೆ ಅಂತಲೇ ಗೊತ್ತಿರಲಿಲ್ಲ, ಮೆಟ್ರೋದಲ್ಲಿ/ಚಾಟ್‌ನಲ್ಲಿ/ ಆಫೀಸಿನಲ್ಲಿ ಆ ಹುಡುಗ/ ಗಂಡಸು/ ಮ್ಯಾನೇಜರ್/ ಕಲೀಗ್ ಅನ್ನು ಮೀಟ್ ಆಗೋವರೆಗೂ.. I feel more protected with him" ಎಂದು ಹೇಳಿದ್ದರು.

ಹೆಣ್ಣಿಗೆ ಈ ಥರ ಅನ್ನಿಸುವುದು ಸಹಜ. ಆದರೆ ಇಲ್ಲೊಂದು ಟ್ವಿಸ್ಟ್‌ ಇದೆ. 'ಇತರರೊಂದಿಗೆ ಗುದ್ದಾಟ ನಡೆಸಿಯೋ, ಹೊಡೆದಾಟ ಮಾಡಿಯೋ, ಇನ್ಯಾರ‌ ಬಗ್ಗೆಯೋ ಕೆಟ್ಟದಾಗಿ ಮಾತಾಡೋ ಆ ಗಂಡಸು ನಿಮ್ಮನ್ನು ಯಾವ ರೀತಿ ನಡೆಸಿಕೊಳ್ಳಬಲ್ಲ ಎಂದು ಯೋಚಿಸಿದ್ದೀರಾ' ಎಂದು ನನಗೆ ಪ್ರಶ್ನಿಸಬೇಕು ಎನಿಸುತ್ತದೆ. ಅದಕ್ಕೆ ಉದಾಹರಣೆಗಳು ನನ್ನ ಕಣ್ಣಿಗೇ ರಾಚುವಂತೆ ಹತ್ತಾರು ಇವೆ. ಕಣ್ಣೀರಿನಲ್ಲಿ ಕೈತೊಳೆಯುತ್ತಿರುವ ಹಲವಾರು ಹೆಣ್ಣುಮಕ್ಕಳಿದ್ದಾರೆ.

ನಿಮ್ಮ‌ ಜೊತೆ‌ ಇರುವ, ನಿಮ್ಮ ಪ್ರಕಾರ 'ಕೈಲಾಗದ ಒಳ್ಳೆಯತನ' ಇರುವವನನ್ನು ಬಿಟ್ಟು ಇನ್ನೊಬ್ಬ ವ್ಯಕ್ತಿಯತ್ತ ವಾಲುವ ಮೊದಲು ನೀವು ಯೋಚಿಸಿಕೊಳ್ಳಬೇಕು. ಈಗಾಗಲೇ ಕಟ್ಟಿಕೊಂಡು ಜೊತೆಯಲ್ಲಿರುವವಳನ್ನು ಲೆಕ್ಕಿಸದೇ ನಿಮ್ಮನ್ನು ಇಂಪ್ರೆಸ್ ಮಾಡುವವ, ನಾಳೆ ಹೀಗೇ ರಕ್ಷಕ ಎಂಬ ಫೀಲಿಂಗ್ ಕೊಟ್ಟು ಇನ್ನೊಬ್ಬಳಿಗಾಗಿ ನಿಮ್ಮನ್ನು ಇಗ್ನೋರ್ ಮಾಡಲಾರ ಎಂಬುದಕ್ಕೆ ಏನು ಗ್ಯಾರಂಟಿ?

ದಯವಿಟ್ಟು ನಿಮ್ಮ ಈ ಆಲ್ಫಾ ಮೇಲ್ ಕನಸು ಬಿಟ್ಟು ವಾಸ್ತವದತ್ತ ನೋಡಿ‌. ನಿಮ್ಮ ಸಂಗಾತಿ ನಿಮಗಾಗಿ ನಿಜಕ್ಕೂ ಏನೂ ಮಾಡಿಲ್ಲವೇ? ಯೋಚಿಸಿ.. ನಿಮ್ಮ ಕಷ್ಟದ ಕಾಲದಲ್ಲಿ ನಿಮಗೆ ಆಸರೆಯಾಗಿ ನಿಂತಿದ್ದು ಈ ನಿಮ್ಮ ಸಂಗಾತಿಯೇ‌ ಅಲ್ಲವೇ ? ಅಷ್ಟಕ್ಕೂ ನಿಮಗೆ ಇರುವ ಹಾಗೆಯೇ ಅವರಿಗೂ ಇನ್ಯಾವುದೋ ಹುಡುಗಿಯ‌ ಕನಸು ಇರುತ್ತೆ ಎಂದುಕೊಳ್ಳಿ. ಅವರು ಹಾಗೆಯೇ ಅವಳ ಹಿಂದೆ ಹೋದರೆ ನಿಮಗೆ ಯಾವ ರೀತಿ ಹರ್ಟ್ ಆಗುತ್ತೆ ಊಹಿಸಿಕೊಳ್ಳಿ.

ತಮಾಷೆ ಅಂದರೆ 'ನಿಲ್ಲೇ‌ ಪತಂಗ‌, ಬೇಡ ಬೇಡ ಬೆಂಕಿಯ‌‌ ಸಂಗ' ಎನ್ನುವುದು ಗೊತ್ತಿದ್ದರೂ ಮನಸೇ ‌ಹಾಗೆ. ಅದಕ್ಕೆ ಸುಟ್ಟುಕೊಂಡು ಹಿಂದಿರುಗುವ ತನಕ ಅರ್ಥವೇ ಆಗುವುದಿಲ್ಲ. ‌ಹಿಂದಿರುಗುವವರಾದರೂ ಸರೀ ಆದರೆ ‌ಹಿಂದಿರುಗಿ ಬರಲೂ ಮನಸಾಗದಂತಹ ಬಲೆಗೆ ಬಿದ್ದವರ ಬದುಕು ಮುರುಟಿ ಹೋಗುವುದದಂತೂ ಖಂಡಿತ.

ಯಾರನ್ನೂ ಹೆದರಿಸುವ ಉದ್ದೇಶದಿಂದ ಬರೆದ ಬರಹ ಅಲ್ಲ ಇದು. ಆಕರ್ಷಣೆಯ ಬೆಂಕಿಯ ತೀವ್ರತೆಯ ಬಗ್ಗೆ ಅರಿವು ಮೂಡಿಸುವುದಷ್ಟೇ ನನ್ನ ಉದ್ದೇಶ.

ಬರಹ: ಡಾ ರೂಪಾ ರಾವ್
(ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ, ಬೆಂಗಳೂರು. ಮೊ: 97408 66990)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+