Railway Board: ಗಂಟೆಗೆ 220 ಕಿಮೀ ಸಂಚರಿಸಬಲ್ಲ ದೇಶಿ ಸೆಮಿ-ಹೈಸ್ಪೀಡ್ ರೈಲುಗಳ ತಯಾರಿಕೆಗೆ ಗ್ರೀನ್ ಸಿಗ್ನಲ್

ನವದೆಹಲಿ; ಕೇಂದ್ರ ರೈಲ್ವೆ ಮಂಡಳಿಯು ಸ್ವದೇಶಿಯವಾಗಿ ರೈಲುಗಳ ಉತ್ಪಾದನೆಗೆ ಒತ್ತು ನೀಡುತ್ತಿದೆ. ಈಗಾಗಲೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ತಯಾರಿಸಿ ಹೆಸರುವಾಸಿಯಾದ ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ಸೆಮಿ-ಹೈ ಸ್ಪೀಡ್ ರೈಲುಗಳ ತಯಾರಿಕೆಯು ರೈಲ್ವೆ ಮಂಡಳಿಯಿಂದ ಅನುಮೋದನೆ ಪಡೆದಿದೆ. ಈ ಮೂಲಕ ಹೊಸ ಹೊಸ ಮಾರ್ಗಗಳಲ್ಲಿ ಗಂಟೆಗೆ 200ಕ್ಕೂ ಅಧಿಕ ಕಿಲೋ ಮೀಟರ್ ವೇಗದಲ್ಲಿ ಸಂಚರಿಸುವ ರೈಲುಗಳ ತಯಾರಿಕೆ ಇನ್ನೆರಡು ವರ್ಷಗಳಲ್ಲಿ ಆಗಲಿವೆ.

ರೈಲ್ವೆ ಮಂಡಳಿಯು ಕಳೆದ ತಿಂಗಳು ಮಾರ್ಚ್ 23ರಂದು ತನ್ನ ಅಧಿಕೃತವಾಗಿ ಆದೇಶದಲ್ಲಿ ಅನುಮೋದನೆ ನೀಡಿದ್ದಾಗಿ ತಿಳಿಸಿತ್ತು. 2027-28 ರ ಹಣಕಾಸು ವರ್ಷದಲ್ಲಿ ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ (ICF) ಎರಡು ಬ್ರಾಡ್ ಗೇಜ್ ಟ್ರೈನ್‌ಸೆಟ್ ರೇಕ್‌ಗಳ ತಯಾರಿಸಲಿದೆ. ಈ ಉತ್ಪಾದನೆಗೆ ಅನುಮೋದನೆ ನೀಡಲಾಗಿದೆ ಎಂದು ಆದೇಶದ ಮೂಲಕ ಮಾಹಿತಿ ನೀಡಿದೆ.

Semi-High Speed Rails

16 ಬೋಗಿಗಳ ರೈಲು, ಗರಿಷ್ಠ ವೇಗ 220 ಕಿಮೀ!

ಉದ್ದೇಶಿತ ಈ ಎರಡು ಸೆಮೈ ಹೈ ಸ್ಪೀಡ್ ರೈಲುಗಳು ಒಟ್ಟು 16 ಬೋಗಿಗಳನ್ನು ಹೊಂದಿರಲಿವೆ. ಬ್ರಾಡ್‌ ಗೇಟ್‌ ಟ್ರೈನ್ ಸೆಟ್ ಇವಾಗಿರಲಿವೆ. ಈ ರೈಲುಗಳ ವೈಶಿಷ್ಟ್ಯ ನೋಡುವುದಾದರೆ ಪ್ರತಿ ಗಂಟೆಗೆ 220 ಕಿಲೋ ಮೀಟರ್ ವೇಗದಲ್ಲಿ ಚಲಿಸಬಲ್ಲ ವಿನ್ಯಾಸ ಹೊಂದಿವೆ. ಗರಿಷ್ಠ 200 ಕಿಲೋ ಮಿಟರ್ ಕಾರ್ಯಾಚರಣೆಯ ವೇಗದ ಸಾಮರ್ಥ್ಯ ತಡೆದುಕೊಳ್ಳುವ ಸ್ಟೀಲ್-ಬಾಡಿಯು ಈ ಬೋಗಿಗಳಿಗೆ ಇರಲಿವೆ. ಆ ರೀತಿಯಲ್ಲಿ ಇವುಗಳನ್ನು ತಯಾರಿಸಲು ಕಂಪನಿಗೆ ಸೂಚನೆ ನೀಡಲಾಗಿದೆ. 2028ರಲ್ಲಿ ಈ ಗಟ್ಟಿಮುಟ್ಟಾದ ಹೊಸ ರೈಲುಗಳನ್ನು ಭಾರತೀಯ ರೈಲ್ವೆ ಜಾಲದಲ್ಲಿ ಸೆಮಿ-ಹೈ ಸ್ಪೀಡ್ ಸೇವೆಗೆ ನಿಯೋಜಿಸಲು ಚಿಂತನೆ ನಡೆಸಿದೆ.

ರೈಲ್ವೆ ಮಂಡಳಿಯು ಈ ಅನುಮೋದನೆಯು ದೇಶೀಯವಾಗಿ ಸೆಮಿ-ಹೈ ಸ್ಪೀಡ್ ರೋಲಿಂಗ್ ಸ್ಟಾಕ್ ಉತ್ಪಾದನೆ ವಿಸ್ತರಿಸುವಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ನಗರಗಳ ನಡುವಿನ ರೈಲು ಸಂಚಾರದ ಕಾರ್ಯಕ್ಷಮತೆಯನ್ನು ಸುಧಾರಿಸಲು ವಂದೇ ಭಾರತ್ ಮಾದರಿಯಲ್ಲಿ ಈ ರೈಲುಗಳು ಮೂಲಕ ಸೇವೆ ನೀಡಲು ಭಾರತೀಯ ರೈಲ್ವೆ ಪ್ಲ್ಯಾನ್ ಮಾಡಿಕೊಂಡಿದೆ.

ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ

ದೇಶಾದ್ಯಂತ ವಿವಿಧೆಡೆ ಏಳು ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಬೆಂಗಳೂರು-ಚೆನ್ನೈ, ಬೆಂಗಳೂರು-ಹೈದರಾಬಾದ್ ಮಾರ್ಗದಲ್ಲೂ ಈ ಕಾರಿಡಾರ್ ತಲೆ ಎತ್ತಲಿದೆ. ಈ ಮಾರ್ಗಗಳಲ್ಲಿ ದೇಶಿಯ ಈ ಸೆಮಿ ಹೈಸ್ಪೀಡ್ ರೈಲುಗಳು ಸಂಚರಿಸಬಹುದೆಂದು ಹೇಳಲಾಗುತ್ತಿದೆ.

ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ಈಗಾಗಲೇ ವಂದೇ ಭಾರತ್ ರೈಲುಗಳನ್ನು ಯಶಸ್ವಿಯಾಗಿ ನಿರ್ಮಿಸಿ ಜಗತ್ತಿನ ಗಮನ ಸೆಳೆದಿದೆ. ಅದೇ ಕಂಪನಿಗೆ ರೈಲ್ವೆ ಮಂಡಳಿಯು 2027-28ರ ಹಣಕಾಸು ವರ್ಷದಲ್ಲಿ ಎರಡು ಪೂರ್ಣ ಪ್ರಮಾಣದ (ತಲಾ 16 ಬೋಗಿಗಳ) ರೇಕ್‌ಗಳನ್ನು ತಯಾರಿಸಲು ಒಪ್ಪಿಗೆ ನೀಡಿದೆ. ಇದು ಇದು ಸಂಪೂರ್ಣ 'ಮೇಕ್ ಇನ್ ಇಂಡಿಯಾ' ಯೋಜನೆಯ ಭಾಗವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+