Namma Metro's Pink line Big Update: ನಮ್ಮ ಮಟ್ರೋ ಗುಲಾಬಿ ಮಾರ್ಗದ ಬಿಗ್ ಅಪ್ಡೇಟ್‌ ಇಲ್ಲಿದೆ

Namma Metro's Pink line: ಸುರಂಗ ಕೊರೆಯುವ ಯಂತ್ರ 'ಭದ್ರಾ' ಕೊರೆಯುವ ಕಾರ್ಯ ಮುಗಿಸಿ ಇಂದು (ಅಕ್ಟೋಬರ್ 30) ಹೊರಗಡೆ ಬಂದಿದೆ. ಈ ಮೂಲಕ ಬಹುನಿರೀಕ್ಷಿತ ನಮ್ಮ ಮೆಟ್ರೋದ ಕಾಳೇನ ಅಗ್ರಹಾರದಿಂದ-ನಾಗವಾರ ನಡುವಿನ ಗುಲಾಬಿ ಮಾರ್ಗದ ಸುರಂಗ ಮಾರ್ಗದ ಕಾಮಗಾರಿ ಮುಕ್ತಾಯವಾಗಿದೆ. ಹಾಗಾದರೆ ಮೆಟ್ರೋ ರೈಲುಗಳು ಯಾವಾಗಿನಿಂದ ಆರಂಭವಾಗಲಿವೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ನಮ್ಮ ಮೆಟ್ರೋದ ಕಾಳೇನ ಅಗ್ರಹಾರದಿಂದ-ನಾಗವಾರದವರೆಗಿನ ಗುಲಾಬಿ ಮಾರ್ಗದ ಸುರಂಗ ಮಾರ್ಗದ ಕಾಮಗಾರಿ ಮುಕ್ತಾಯವಾಗಿದೆ. ಕೊನೆಯದಾಗಿ ಸುರಂಗ ಕೊರೆಯುವ ಭದ್ರಾ ಟಿಬಿಎಂ 937 ಮೀಟರ್‌ ಸುರಂಗ ಕೊರೆದು ನಾಗವಾರ ನಿಲ್ದಾಣದಲ್ಲಿ ಇಂದು ಹೊರಬಂದಿದೆ. ಭದ್ರಾ ಟಿಬಿಎಂ ಅನ್ನು 2024ರ ಏಪ್ರಿಲ್‌ 2ರಂದು ಕೆಜಿ ಹಳ್ಳಿ ನಿಲ್ದಾಣದಿಂದ ಸುರಂಗ ಕೊರೆಯಲು ನಿಯೋಜಿಸಲಾಗಿತ್ತು. ಈ ಮೂಲಕ ಗುಲಾಬಿ ಮಾರ್ಗದ 20,992 ಮೀಟರ್‌ ಸುರಂಗ ಕೆಲಸ ಪೂರ್ಣಗೊಂಡಿದೆ.

Namma Metro s Pink line Tunnel digging work is completed Know Details of Train service start

* ಮೊದಲ ಟಿಬಿಎಂ ಊರ್ಜಾ ಯಂತ್ರವು 2020ರ ಆಗಸ್ಟ್‌ 20ರಂದು ಕಂಟೋನ್ಮೆಂಟ್‌ನಿಂದ ಶಿವಾಜಿನಗರ ನಿಲ್ದಾಣ ನಡುವೆ ಸುರಂಗ ಕೊರೆಯುವ ಕಾಮಗಾರಿಯನ್ನು ಪ್ರಾರಂಭಿಸಿತ್ತು. ಈ ಮಾರ್ಗದಲ್ಲಿ ತುಂಗಾ ಟಿಬಿಎಂ ಇದೇ ವರ್ಷ ಜುಲೈ ತಿಂಗಳಲ್ಲಿ 308 ಮೀಟರ್‌ ಸುರಂಗ ಕೊರೆದು ದಾಖಲೆ ನಿರ್ಮಿಸಿದೆ. ಸುರಂಗ ಕೊರೆಯಲು 9 ಟಿಬಿಎಂಗಳನ್ನು ನಿಯೋಜಿಸಲಾಗಿದ್ದು, 9 ಟಿಬಿಎಂಗಳು ಸುರಂಗ ಮಾರ್ಗದ ಕಾಮಗಾರಿ ಪೂರ್ಣಗೊಳಿಸಿವೆ.

* ಏಪ್ರಿಲ್‌ 25, 2022ರಂದು ಟಿಬಿಎಂ ಉರ್ಜಾ ಯಂತ್ರವು ಕಂಟೋನ್ಮೆಂಟ್‌ ಮತ್ತು ಪಾಟರಿ ಟೌನ್‌ ನಿಲ್ದಾಣದ ನಡುವೆ ಒಂದೇ ದಿನದಲ್ಲಿ 27 ಮೀಟರ್‌ ಸುರಂಗವನ್ನು ಕೊರೆದಿದೆ.

* ಜುಲೈ 2024ರಲ್ಲಿ ಟಿಬಿಎಂ ತುಂಗ ಯಂತ್ರವು ಕೆ.ಜಿ ಹಳ್ಳಿ ಮತ್ತು ನಾಗಾವಾರದ ನಡುವೆ ಒಂದು ತಿಂಗಳಲ್ಲಿ ಗರಿಷ್ಠ 308 ಮೀಟರ್‌ ಸುರಂಗವನ್ನು ಕೊರೆದಿದೆ.

ಸುರಂಗ ಮಾರ್ಗದ ವಿವರಗಳು: ದಕ್ಷಿಣ ರಾಂಪ್‌ (ಡೃರಿ ಸರ್ಕಲ್‌)-ನಾಗವಾರ

* ಭೂಗತ ಮಾರ್ಗದ ಉದ್ದ- 13.76 ಕಿ.ಮೀ

* ಒಟ್ಟು ಸುರಂಗದ ಉದ್ದ- 20.99 ಕಿ.ಮೀ

* ಪೂರ್ಣಗೊಂಡಿರುವ ಸುರಂಗದ ಉದ್ದ- 20.99 ಕಿ.ಮೀ (ಶೇ.100)

* ನಿಯೋಜಿಸಲಾದ ಟಿಬಿಎಂಗಳ ಸಂಖ್ಯೆ - 9

* ಕಾಮಗಾರಿ ಪೂರ್ಣಗೊಳಿಸಿದ ಟಿಬಿಎಂಗಳ ಸಂಖ್ಯೆ - 9

* ಸುರಂಗ ಮಾರ್ಗದ ನಿಲ್ದಾಣಗಳು - 12

* ನಿಲ್ದಾಣಗಳ ಕಾಮಗಾರಿ ಪ್ರಗತಿ - ಶೇಕಡ 90

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) 13 ಕಿಲೋ ಮೀಟರ್‌ ಸುರಂಗ ಮಾರ್ಗವನ್ನು ಮೂರು ಹಂತದಲ್ಲಿ ಕೊರೆಯುವ ಕಾರ್ಯವನ್ನು ಕೈಗೆತ್ತಿಕೊಂಡಿತ್ತು. ಮೊದಲ ಹಂತದಲ್ಲಿ ಶಾದಿಮಹಲ್‌ನಿಂದ-ವೆಂಕಟೇಶಪುರದವರೆಗೆ ಹಾಗೂ ಎರಡನೇ ಹಂತದಲ್ಲಿ ವೆಂಕಟೇಶಪುರದಿಂದ -ಕೆಜಿ ಹಳ್ಳಿವರೆಗೆ ಸುರಂಗ ಕಾಮಗಾರಿ ಸಂಪೂರ್ಣ ಆಗಿದೆ. ಇದೀಗ ಮೂರನೇ ಹಂತದಲ್ಲಿ ಕೆಜಿ ಹಳ್ಳಿಯಿಂದ ನಾಗವಾರವರೆಗಿನ ಸುರಂಗ ಕೊರೆಯುವ ಕಾಮಗಾರಿಯನ್ನು ತುಂಗಾ ಮತ್ತು ಭದ್ರಾ ಟಿಬಿಎಂ ಯಶಸ್ವಿಯಾಗಿ ಪೂರ್ಣಗೊಳಿಸಿವೆ.

ಹಂತ -2ರ ಯೋಜನೆಯಡಿ ರೀಚ್‌ - 6 ಮಾರ್ಗವು ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಒಟ್ಟು 21.26 ಕಿಲೋ ಮೀಟರ್ ಉದ್ದ ಇದೆ. ಇದು 18 ನಿಲ್ದಾಣಗಳನ್ನು ಹೊಂದಿದೆ. ಇದರಲ್ಲಿ 7.50 ಕಿ ಲೋ ಮೀಟರ್ ಎತ್ತರಿಸಿದ ಮಾರ್ಗ ಆಗಿದೆ. ಕಾಳೇನ ಅಗ್ರಹಾರದಿಂದ ಸ್ವಾಗತ್‌ ರಸ್ತೆವರೆಗೆ 6 ನಿಲ್ದಾಣ ಮತ್ತು 13.76 ಕಿ.ಮೀ. ಸುರಂಗ ಮಾರ್ಗದಲ್ಲಿ ಡೇರಿ ವೃತ್ತದಿಂದ ನಾಗವಾರದವರೆಗೆ 12 ನಿಲ್ದಾಣಗಳನ್ನು ಹೊಂದಿದೆ. ಭೂಗತ ನಿಲ್ದಾಣಗಳ ಶೇಕಡಾ 90ರಷ್ಟು ಸಿವಿಲ್‌ ಕಾಮಗಾರಿ ಕೂಡ ಪೂರ್ಣವಾಗಿದೆ.

ನಿಲ್ದಾಣಗಳ ವಿವರ: 9 ಸುರಂಗ ಕೊರೆಯುವ ಯಂತ್ರಗಳಲ್ಲಿ ವರದ, ಊರ್ಜಾ, ವಿಂದ್ಯಾ, ಲವಿ, ವಮಿಕ, ರುದ್ರ ಮತ್ತು ತುಂಗಾ ಯಂತ್ರಗಳು ಕೆಲಸ ಮುಗಿಸಿದ್ದವು. ಇನ್ನು ಕೊನೇ ಹಂತದ ಕಾರ್ಯವನ್ನು ಭದ್ರಾ ನಡೆಸುತ್ತಿತ್ತು. ಇದೀಗ ಇದು ಕೂಡ ಪೂರ್ಣವಾಗಿದೆ. ಇನ್ನು ಗುಲಾಬಿ ಮಾರ್ಗದಲ್ಲಿ ಕಾಳೇನ ಅಗ್ರಹಹಾರ, ಹುಳಿಮಾವು, ಐಐಎಂಬಿ, ಜಿ.ಪಿ.ನಗರ ನಾಲ್ಕನೇ ಹಂತ, ಜಯದೇವ ಆಸ್ಪತ್ರೆ, ಸ್ವಾಗತ್‌ ರೋಡ್‌ ಕ್ರಾಸ್, ಡೇರಿ ಸರ್ಕಲ್‌, ಮೈಕೊ ಇಂಡಸ್ಟ್ರೀಸ್, ಲ್ಯಾಂಗ್‌ ಫೋರ್ಡ್‌, ಟೌನ್‌, ವೆಲ್ಲಾರ, ಎಂಜಿ.ರಸ್ತೆ ಶಿವಾಜಿನಗರ, ಕಂಟೋನ್ಮೆಂಟ್, ಪಾಟರಿ ಟೌನ್‌, ಟ್ಯಾನರಿ ರಸ್ತೆ, ವೆಂಕಟಾಪುರ, ಅರೇಬಿಕ್‌ ಕಾಲೇಜು, ನಾಗವಾರದಲ್ಲಿ ಮೆಟ್ರೋ ನಿಲ್ದಾಣಗಳು ನಿರ್ಮಾಣ ಆಗುತ್ತಿವೆ. 2025ರ ವೇಳೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+