Namma metro: 90% ಕಾಮಗಾರಿ ಪೂರ್ಣ, 2024ರ ಫೆಬ್ರವರಿ ವೇಳೆಗೆ ಈ ಮಾರ್ಗದಲ್ಲಿ ಮೆಟ್ರೋ ಸಂಚಾರ

ಬೆಂಗಳೂರು, ಅಕ್ಟೋಬರ್‌, 05: ಬೆಂಗಳೂರಿನಲ್ಲಿ ಮೆಟ್ರೋ ಲೈನ್‌ ವಿಸ್ತರಣೆ ಆಗುತ್ತಲೇ ಇದೆ. ಅದೇ ರೀತಿ ಆನೇಕಲ್ ತಾಲೂಕಿನ ಬೊಮ್ಮಸಂದ್ರ-ಆರ್.ವಿ.ರಸ್ತೆಯ ಹಳದಿ ಮಾರ್ಗ ಮೆಟ್ರೊ ಯೋಜನೆ ಅತ್ಯಂತ ಪ್ರಮುಖ ಆಗಿದೆ. ಐಟಿ-ಬಿಟಿ, ಕೈಗಾರಿಕಾ ಮತ್ತು ವಸತಿ ಪ್ರದೇಶಗಳನ್ನು ಹೊಂದಿರುವ ಮಾರ್ಗ ಇದಾಗಿದೆ. ಈ ಮಾರ್ಗದಲ್ಲಿ ಪ್ರತಿದಿನ 2.5ಲಕ್ಷ ಪ್ರಯಾಣಿಕರು ಸಂಚರಿಸುವ ನಿರೀಕ್ಷೆಯಿದೆ. ಇದು ಫೆಬ್ರವರಿ 2024ರ ವೇಳೆಗೆ ಸಾರ್ವಜನಿಕರ ಸೇವೆಗೆ ಲಭ್ಯವಾಗುವ ನಿರೀಕ್ಷೆಯಿದೆ ಎಂದು ಸಂಸದ ತೇಜಸ್ವಿ ಸೂರ್ಯ ಮಾಹಿತಿ ನೀಡಿದ್ದಾರೆ.

ಆನೇಕಲ್ ತಾಲೂಕಿನ ಬೊಮ್ಮಸಂದ್ರದ ಬಳಿ ಮೆಟ್ರೊ ಕಾಮಗಾರಿಯನ್ನು ಬುಧವಾರ ಪರಿಶೀಲಿಸಿ ಮಾತನಾಡಿದ ಅವರು, ಆನೆಕಲ್‌ ತಾಲೂಕಿನ ಬೊಮ್ಮಸಂದ್ರದಿಂದ ಬೆಂಗಳೂರಿನ ಆರ್.ವಿ ರಸ್ತೆ ಸಂಪರ್ಕಿಸುವ 18.8 ಕಿಲೋ ಮೀಟರ್‌ ದೂರದ ಮೆಟ್ರೊ ರೈಲು ಕಾಮಗಾರಿ ಶೇಕಡಾ 90ರಷ್ಟು ಪೂರ್ಣಗೊಂಡಿದೆ. ಈ ಮಾರ್ಗದಲ್ಲಿ ಪ್ರತಿನಿತ್ಯ 2.5ಲಕ್ಷ ಪ್ರಯಾಣಿಕರು ಸಂಚರಿಸುವ ನಿರೀಕ್ಷೆಯಿದ್ದು, ಇದರಿಂದ ಈ ಭಾಗದ ಸಂಚಾರ ಒತ್ತಡ ಕಡಿಮೆ ಆಗಲಿದೆ ಎಂದರು.

namma-metro

ಈ ಮಾರ್ಗದಲ್ಲಿ 16 ಮೆಟ್ರೊ ನಿಲ್ದಾಣಗಳಿವೆ. ಈ ಪೈಕಿ 15 ನಿಲ್ದಾಣಗಳ ಕಾಮಗಾರಿ ಶೇಕಡಾ 95ರಷ್ಟು ಪೂರ್ಣಗೊಂಡಿದೆ. ಡಿಸೆಂಬರ್ 31ರೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಯೋಜನೆಯಿಂದಾಗಿ ಈ ಭಾಗದ ಸಂಚಾರ ಸುಗಮ ಆಗಲಿದೆ. ಇನ್ಫೋಸಿಸ್ ಪ್ರತಿಷ್ಠಾನವು ಬಿಎಂಆರ್‌ಸಿಎಲ್‌ ಸಹಯೋಗದಲ್ಲಿ ನಿಲ್ದಾಣವೊಂದರ ನಿರ್ಮಾಣಕ್ಕೆ ಸುಮಾರು 7180 ಕೋಟಿ ರೂಪಾಯಿ ನೀಡಿ ಸಾರ್ವಜನಿಕ ಸಹಭಾಗಿತ್ವಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ಸದ್ಯ ಜಯದೇವ ಮೆಟ್ರೋ ಸ್ಟೇಷನ್‌ನಲ್ಲಿ ಶೇಕಡ 70%ರಷ್ಟು ಕೆಲಸ ಮುಗಿದಿದ್ದು, ಸ್ಟೇಷನ್ ಸಂಪೂರ್ಣಗೊಂಡ ನಂತರ ದೇಶಕ್ಕೆ ಮಾದರಿ ಮೆಟ್ರೋ ಸ್ಟೇಷನ್ ಆಗಿ ಹೊರಹೊಮ್ಮಲಿದೆ. ಈ ಅದ್ಭುತ ಮೆಟ್ರೋ ನಿಲ್ದಾಣಕ್ಜೆ 200 ಕೋಟಿಗೂ ಅಧಿಕ ವೆಚ್ಚ ತಗುಲಲಿದೆ. ಈ ನಿಲ್ದಾಣದ 6 ಹಂತಗಳನ್ನ ನೋಡುವುದಾದರೆ, ಮೊದಲನೇ ಹಂತದಲ್ಲಿ ಬನ್ನೇರುಘಟ್ಟದಿಂದ ಡೈರಿ ಸರ್ಕಲ್‌ವರೆಗಿನ ಅಂಡರ್ ಪಾಸ್, ಎರಡನೇ ಹಂತದಲ್ಲಿ ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗಿನ ರಸ್ತೆ, ಮೂರನೇ ಹಂತದಲ್ಲಿ ಇದೇ ಮಾರ್ಗದಲ್ಲಿ ಫ್ಲೈಓವರ್.

ನಾಲ್ಕನೇ ಹಂತ ಮೆಟ್ರೋ ಕಾನ್ ಕೋರ್ಸ್ ಲೆವಲ್, ಐದನೇ ಹಂತ ಆರ್ .ವಿ ರಸ್ತೆಯಿಂದ ಬೊಮ್ಮಸಂದ್ರವರೆಗಿನ ರೀಚ್ 5, ಆರನೇ ಹಂತದಲ್ಲಿ ಕಾಳೆನ ಅಗ್ರಹಾರ ನಾಗವಾರದವರೆಗಿನ ರೀಚ್ 6 ನ ಮೆಟ್ರೋ ರೈಲು ಓಡಾಡಲಿದೆ. 18 ಕಿಲೋ ಮೀಟರ್ ಉದ್ದದ ಈ ಮಾರ್ಗದಲ್ಲಿ 16 ನಿಲ್ದಾಣಗಳಿದ್ದು, ನಿತ್ಯ ಎರಡೂವರೆ ಲಕ್ಷ ರೈಡರ್ ಶಿಫ್ ಆಗುವ ನಿರೀಕ್ಷೆ ಇದೆ‌ .‌ಜೊತೆಗೆ ಜಯನಗರ ಕ್ಷೇತ್ರದ ಸುತ್ತಮುತ್ತಲಿನ ಟ್ರಾಫಿಕ್‌ಗೂ ಬ್ರೇಕ್ ಬೀಳಲಿದೆ.

ಒಟ್ಟಾರೆ ಈ ಭಾಗದ ಬಹುನೀರಿಕ್ಷಿತ ಮಾರ್ಗ ಡೆಡ್ ಲೈ‌ನ್ ಪ್ರಕಾರ ಮುಂಬರುವ ಫೆಬ್ರವರಿ ಒಳಗಾಗಿ ಸಂಚಾರ ಮುಕ್ತಾವಾದರೆ ನಗರದ ಒಂದು ಭಾಗದ ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಬೀಳಲಿದೆ. ಆದರೆ ಅಂದುಕೊಂಡಂತೆ ಸಮಯವಕಾಶದ ಒಳಗಾಗಿ ಕಾಮಗಾರಿ ಮುಗಿಯುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+