Metro Walkway: ಮೆಟ್ರೋ ನಿಲ್ದಾಣಗಳ ಜೊತೆ ನೇರ ಸಂಪರ್ಕಕ್ಕಾಗಿ ಅಪೊಲೋ, ಬಾಗ್ಮನೆ ಗ್ರೂಪ್ ಮನವಿ, ವಿವರ

ಬೆಂಗಳೂರು, ಮಾರ್ಚ್ 20: ಬೆಂಗಳೂರು ನಮ್ಮ ಮೆಟ್ರೊ ಅಧಿಕಾರಿಗಳಿಗೆ ಪ್ರತಿಷ್ಠಿತ ಟೆಕ್ ಪಾರ್ಕ್ ಸೇರಿದಂತೆ ಎರಡು ಸಂಸ್ಥೆಗಳು ಮನವಿ ಮಾಡಿವೆ. 4 ಮೆಟ್ರೋ ನಿಲ್ದಾಣಗಳ ಜೊತೆ ನೇರ ಸಂಪರ್ಕ ಸಾಧಿಸಲು ಸೌಲಭ್ಯ ಕಲ್ಪಿಸುವಂತೆ ಕೇಳಿಕೊಂಡಿದ್ದಾರೆ.

ನಮ್ಮ ಮೆಟ್ರೋ ಗುಲಾಬಿ ಮಾರ್ಗ (Metro Pink Line) ಹಾಗೂ ಮೆಟ್ರೋ ನೀಲಿ (Metro Blue Line) ಮಾರ್ಗದ ನಾಲ್ಕು ಮೆಟ್ರೋ ನಿಲ್ದಾಣಗಳಿಗೆ ನೇರ ಸಂಪರ್ಕ ಕಲ್ಪಿಸುವಂತೆ BMRCL ಗೆ ಮನವಿ ಮಾಡಲಾಗಿದೆ. ಬನ್ನೇರುಘಟ್ಟದ ರಸ್ತೆಯಲ್ಲಿನ ಅಪೋಲೋ ಆಸ್ಪತ್ರೆ ಸೇರಿದಂತೆ ಎರಡು ಕಂಪನಿಗಳು ಈ ಬಗ್ಗೆ ಮಾತುಕತೆ ನಡೆಸಿದ್ದರ ಬಗ್ಗೆ 'ಡಿಎಚ್' ವರದಿ ಮಾಡಿದೆ.

Namma Metro Two More Companies Ask to BMRCL for Direct Connectivity With Metro Station

ಯಾವ ಕಂಪನಿಗಳಿಗೆ ಎಲ್ಲೆಲ್ಲಿ ನೇರ ಸಂಪರ್ಕ?

ಬನ್ನೇರುಘಟ್ಟ ರಸ್ತೆಯಲ್ಲಿ ಬರುವ 'ಗುಲಾಬಿ ಮಾರ್ಗ'ದನಲ್ಲಿರುವ ಐಐಎಂಬಿ ಮೆಟ್ರೋ ನಿಲ್ದಾಣಕ್ಕೆ ನೇರ ಸಂಪರ್ಕ ಕಲ್ಪಿಸುವಂತೆ ಅಪೋಲೋ ಆಸ್ಪತ್ರೆಗಳು ಕೇಳಿಕೊಂಡಿವೆ. ಹಲವು ಟೆಕ್ ಪಾರ್ಕ್‌ಗಳನ್ನು ನಿರ್ಮಿಸಿರುವ ಬಾಗ್ಮನೆ ಗ್ರೂಪ್, ನೀಲಿ ಮಾರ್ಗದಲ್ಲಿ ಬೆಳ್ಳಂದೂರು, ಇಸ್ರೋ ಮತ್ತು ಜಕ್ಕೂರ್ ಕ್ರಾಸ್ ಮೆಟ್ರೋ ನಿಲ್ದಾಣಗಳಿಗೆ ನೇರ ಒದಗಿಸುವಂತೆ ಕೇಳಿಕೊಂಡಿದೆ,

ಇತ್ತ ವಿವಿಧ ಕಂಪನಿಗಳ ಮನವಿ ಮೇರೆಗೆ ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಶೀಘ್ರದಲ್ಲೇ ಸಹಿ ಹಾಕುವ ನಿರೀಕ್ಷೆಯಿದೆ. ಈ ಸಂಬಂಧ ಅಧಿಕಾರಿಗಳು ಎಲ್ಲ ಮಧ್ಯಸ್ಥಗಾರರೊಂದಿಗೆ ಸಕ್ರಿಯವಾಗಿದ್ದಾರೆ ಎಂದು BMRCL ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ತಿಳಿಸಿದರು.

ಕಂಪನಿ- ಮೆಟ್ರೋ ನಿಲ್ದಾಣ ಮಧ್ಯೆ ವಾಕ್‌ವೇ?

ಕಂಪನಿಗಳಿಗೆ ಮೆಟ್ರೋನಿಂದ ಯಾವ ರೀತಿಯ ಮಾರ್ಗ ಸೌಲಭ್ಯ ಕಲ್ಪಿಸಬಹುದು ಎಂಬುದರ ಮೇಲೆ ಅಧಿಕಾರಿಗಳು ಯೋಜನೆ ರೂಪಿಸಲಿದ್ದಾರೆ. ವಾಕ್‌ವೇಗಳು ಕಂಪನಿಯ ಆವರಣವನ್ನು ಆಯಾ ಮೆಟ್ರೋ ನಿಲ್ದಾಣಗಳ ಕಾನ್ಕೋರ್‌ಗಳೊಂದಿಗೆ ಸಂಪರ್ಕ ಕಲ್ಪಿಸುಂತೆ ಮಾಡಬಹುದು ಎನ್ನಲಾಗಿದೆ.

Namma Metro Two More Companies Ask to BMRCL for Direct Connectivity With Metro Station

ಮೆಟ್ರೋ ನಿಲ್ದಾಣಗಳಿಗೆ ನೇರ ಸಂಪರ್ಕ ಕಲ್ಪಿಸುವ ಯೋಜನೆ ಜಾರಿಯಾದರೂ ಬಾಗ್ಮನೆ ಟೆಕ್ ಪಾರ್ಕ್‌ಗಳಲ್ಲಿ ಕೆಲಸ ಮಾಡುವ ಸಾವಿರಾರು ಉದ್ಯೋಗಿಗಳಿಗೆ ಹಾಗೂ ಅಪೊಲೊ ಆಸ್ಪತ್ರೆಗಳಿಗೆ ಭೇಟಿ ನೀಡುವ ರೋಗಿಗಳು ಮತ್ತದರ ಸಿಬ್ಬಂದಿಗೆ ಸಹಾಯವಾಗಲಿದೆ. ಸದ್ಯ ಈ ಗುಲಾಬಿ ಮತ್ತು ನೀಲಿ ಮೆಟ್ರೋ ಮಾರ್ಗ ಹಾಗೂ ನಿಲ್ದಾಣಗಳು ನಿರ್ಮಾಣ ಹಂತದಲ್ಲಿವೆ.

30 ವರ್ಷದ ವರೆಗೆ ಮೆಟ್ರೋ ಜತೆ ಒಪ್ಪಂದ

ಈ ಒಪ್ಪಂದಗಳು ಕಾರ್ಯರೂಪಕ್ಕೆ ಬಂದರೆ BMRCL ಮೂಲಸೌಕರ್ಯವನ್ನು ನಿರ್ಮಿಸುತ್ತದೆ. ಅದಕ್ಕೆ ಕಂಪನಿಗಳು ಹಣವನ್ನು ಒದಗಿಸುತ್ತದೆ. ಈ ಒಪ್ಪಂದವು ಮೂರು ದಶಕಗಳ ವರೆಗೆ ಮುಂದುವರಿಯಬಹುದು. ಇದೇ ರೀತಿ ಈಗಾಗಲೇ ಕೆಲವು ಮೆಟ್ರೋ ನಿಲ್ದಾಣಗಳಿಗೆ ಮೀಸಲು ಪ್ರವೇಶಕ್ಕಾಗಿ ಅನೇಕ ಕಂಪನಿಗಳು BMRCL ಜೊತೆ ಒಪ್ಪಂದ ಮಾಡಿಕೊಂಡಿವೆ. ಆ ಸಾಲಿಗೆ ಅಪೊಲೊ, ಬಾಗ್ಮನೆ ಟೆಕ್ ಪಾರ್ಕ್ ಕಂಪನಿಗಳು ಸೇರಿವೆ.

ಯಾವೆಲ್ಲ ಕಂಪನಿಗಳ ಜತೆ ಒಪ್ಪಂದ ಆಗಿದೆ

ಈಗಾಗಲೇ ನಮ್ಮ ಮೆಟ್ರೋದ ಪಟ್ಟಂದೂರು ಅಗ್ರಹಾರ ಮೆಟ್ರೋ ಸ್ಟೇಷನ್ (ನೇರಳೆ ಮಾರ್ಗ), ಎಂಬಸಿ ಪ್ರಾಪರ್ಟಿ ಡೆವಲಪ್ಮೆಂಟ್ಸ್ ಪ್ರೈವೇಟ್ ಲಿಮಿಟೆಡ್ (ಕಡುಬೀಸನಹಳ್ಳಿ; ನೀಲಿ ಮಾರ್ಗ), ಇನ್ಫೋಸಿಸ್ ಫೌಂಡೇಶನ್ (ಕೋನಪ್ಪನ ಅಗ್ರಹಾರ, ಹಳದಿ ಮಾರ್ಗ), ಬಯೋಕಾನ್ ಫೌಂಡೇಶನ್ (ಹೆಬ್ಬಗೋಡಿ, ಹಳದಿ ಮಾರ್ಗ), ಬಾಷ್ ಲಿಮಿಟೆಡ್ (ಲಕ್ಕಸಂದ್ರ, ಗುಲಾಬಿ ಮಾರ್ಗ), ಮಾಹಿತಿ ತಂತ್ರಜ್ಞಾನ ಪಾರ್ಕ್ ಲಿಮಿಟೆಡ್ (ಐಟಿಪಿಎಲ್) ಗಳು ಒಪ್ಪಂದ ಮಾಡಿಕೊಂಡಿವೆ.

ಇನ್ಫೋಸಿಸ್ ಫೌಂಡೇಶನ್ ಮತ್ತು ಬಯೋಕಾನ್ ಫೌಂಡೇಶನ್ ಸಹ ಮೆಟ್ರೋ ನಿಲ್ದಾಣಗಳಿಗೆ ನೇರ ಸಂಪರ್ಕಕ್ಕಾಗಿ ಒಪ್ಪಂದಂತೆ ಹಣ ನೀಡುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+