Namma Metro: ಹಸಿರು ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಸ್ಥಗಿತ-ಕಾರಣ ಏನು?

Namma Metro: ನಮ್ಮ ಮೆಟ್ರೋ ಬೆಂಗಳೂರು ಜನರ ಜೀವನಾಡಿ ಪ್ರಮುಖ ಸಾರಿಗೆಗಳಲ್ಲಿ ಒಂದಾಗಿದೆ. ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಮಂಗಳವಾರ (ಜುಲೈ 30) ಸಂಜೆ ರೈಲುಗಳ ಸಂಚಾರ ಭಾಗಶಃ ಸ್ಥಗಿತವಾಗಿದೆ. ಹಾಗಾದರೆ ಇದಕ್ಕೆ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ವಿದ್ಯುತ್ ಸರಬರಾಜು ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಹಿನ್ನೆಲೆ ಇಂದು ಸಂಜೆ 5:33ರಿಂದ ಹಸಿರು ಮಾರ್ಗದಲ್ಲಿ ರೈಲುಗಳ ಸಂಚಾರ ವ್ಯತ್ಯಯ ಆಗಿದೆ. ನಾಗಸಂದ್ರ-ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣದವರೆಗೆ ಮಾತ್ರ ಮೆಟ್ರೋ ರೈಲುಗಳು ಓಡಲಿವೆ ಎಂದು ತನ್ನ ಅಧಿಕೃತ ಟ್ವೀಟ್‌ ಮೂಲಕ ಬಿಎಂಆರ್‌ಸಿಎಲ್‌ ತಿಳಿಸಿದೆ. ಇನ್ನು ಉಂಟಾದ ಅನಾನುಕೂಲತೆಗಾಗಿ ವಿಷಾದಿಸುತ್ತೇವೆ ಎಂದು ತಿಳಿಸಿದೆ.

Namma Metro Train service cancel on Green Line what is the reason

ಇನ್ನು ಸದ್ಯ ಹಸಿರುವ ಮಾರ್ಗದಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ಸಮಸ್ಯೆಯಾಗಿದ್ದು, ಉಳಿದಂತೆ ನೇರಳೆ ಮಾರ್ಗದ ರೈಲುಗಳ ಸಂಚಾರ ಎಂದಿನಂತೆ ಚಲಘಟ್ಟ-ವೈಟ್‌ಫೀಲ್ಡ್‌ ನಡುವೆ ಸಂಚರಿಸಲಿವೆ.

ಬನಶಂಕರಿ, ಜೆಪಿ ನಗರ, ಯಲಚೇನಹಳ್ಳಿ, ಕೋಣನಕುಂಟೆ ಕ್ರಾಸ್‌, ದೊಡ್ಡಕಲ್ಲಸಂದ್ರ, ವಜರಹಳ್ಳಿ, ತಲಘಟಪುರ, ರೇಷ್ಮೇ ಮಂಡಳಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಇರುವುದಿಲ್ಲ. ಇನ್ನು ನೇರಳೆ ಮಾರ್ಗದಲ್ಲಿ ಎಂದಿನಂತೆ ಮೆಟ್ರೋ ರೈಲು ಸಂಚಾರ ಮಾಡಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.

ನಮ್ಮ ಮೆಟ್ರೋ ರೈಲುಗಳಲ್ಲಿ ಆಗಾಗ ಸಮಸ್ಯೆ ಕಾಣಿಸಿಕೊಂಡಾಗ ಪ್ರಯಾಣಿಕರಿಗೆ ಅನುಕಾಲವಾಗಲೆಂದು ಇರುವ ವಿಷಯವನ್ನು ಹೇಳಲಾಗುತ್ತದೆ. ಕಾಮಗಾರಿ, ವಿದ್ಯುತ್‌ ಸಮಸ್ಯೆ, ಮಳೆ ಹಿನ್ನೆಲೆ ಟ್ರಾಕ್‌ ಮೇಲೆ ಮರ ಬಿದ್ದು, ಅಥವಾ ಟ್ರ್ಯಾಕ್‌ಗೆ ಪ್ರಯಾಣಿಕರು ಜಿಗಿದ ವೇಳೆಯಲ್ಲಿ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿರುವ ಘಟನೆಗಳು ಈಗಾಗಲೇ ಜರಿಗಿವೆ. ಇನ್ನು ಇಂದು ವಿದ್ಯುತ್‌ ಸಮಸ್ಯೆ ಹಿನ್ನೆಲೆ ತಾತ್ಕಾಲಿಕವಾಗಿ ಸಂಚಾರ ರದ್ದು ಮಾಡಲಾಗಿತ್ತು.

ಹಸಿರುವ ಮಾರ್ಗದಲ್ಲಿ ವಿದ್ಯುತ್‌ ಸರಬರಾಜು ಸಮಸ್ಯೆ ಆಗಿದ್ದು, ಈ ಬಗ್ಗೆ ತಾಂತ್ರಿಕ ತಂಡ ಪರಿಶೀಲನೆ ನಡೆಸುತ್ತಿದೆ. ಆದಷ್ಟು ಬೇಗ ಸಮಸ್ಯೆಯನ್ನು ಪರಿಹರಿಸಿ ರೈಲುಗಳ ಸಂಚಾರವನ್ನು ಆರಂಭಿಸಲಾಗುವುದು ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಮಾಹಿತಿ ರವಾನಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+