Namma Metro: ಎಲೆಕ್ಟ್ರಾನಿಕ್ ಸಿಟಿ & ಬೊಮ್ಮಸಂದ್ರ ಮಾರ್ಗದಲ್ಲಿ ಮೆಟ್ರೋ ಓಡಾಟ ಆರಂಭ!
'ನಮ್ಮ ಮೆಟ್ರೋ' ಪ್ರಯಾಣಿಕರಿಗೆ ಭರ್ಜರಿ ಸುದ್ದಿ ಸಿಕ್ಕಿದೆ. ಟ್ರಾಫಿಕ್ ಸಮಸ್ಯೆಯ ಪರಿಣಾಮ ನರಳಾಡುತ್ತಿದ್ದ ಪ್ರಯಾಣಿಕರಿಗೆ ಇದೀಗ, ಬೆಂಗಳೂರಿನ ಹೆಮ್ಮೆ 'ನಮ್ಮ ಮೆಟ್ರೋ' ಹೊಸ ಹುಮ್ಮಸ್ಸು ತುಂಬುತ್ತಿದೆ. ಅದೇ ರೀತಿ ಈಗ ಎಲೆಕ್ಟ್ರಾನಿಕ್ ಸಿಟಿ & ಬೊಮ್ಮಸಂದ್ರ ಮಾರ್ಗದಲ್ಲಿ ಮೆಟ್ರೋ ಓಡಾಟ ಆರಂಭ ಆಗಿದೆ! ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.
ಮೆಟ್ರೋ ಇಲ್ಲದೆ ಬೆಂಗಳೂರಲ್ಲಿ ಓಡಾಡುವುದೇ ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೆಟ್ರೋ ಬೆಂಗಳೂರು ನಗರದಲ್ಲಿ ದೊಡ್ಡ ಸಕ್ಸಸ್ ಕಂಡಿದೆ. ಅದರಲ್ಲೂ ಬೆಂಗಳೂರಿನಲ್ಲಿ, ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್ ನಡುವೆ ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿತ್ತು. ಆದರೆ ಈಗ ಆ ಚಿಂತೆಗೂ ಅಂತ್ಯ ಹಾಡಿದೆ ಬೆಂಗಳೂರಿನ 'ನಮ್ಮ ಮೆಟ್ರೋ' ಸಂಸ್ಥೆ. ಈಗಾಗಲೇ ನಮ್ಮ ಹೆಮ್ಮೆ ಬೆಂಗಳೂರು ನಗರ ಭಾಗದ ಬಹುತೇಕ ಎಲ್ಲಾ ಕಡೆಗೂ ಮೆಟ್ರೋ ಸೇವೆ ಲಭ್ಯ ಇದೆ.

ರೈಟ್.. ರೈಟ್.. ಮೆಟ್ರೋ ಶುರು!
ಆದ್ರೆ ಬೆಂಗಳೂರು ಹೊರ ವಲಯಗಳಿಗೆ ಬಸ್ & ಕ್ಯಾಬ್ ನಂಬಿಕೊಂಡೇ ಜನಗಳೆಲ್ಲಾ ಜೀವನ ನಡೆಸಬೇಕಿತ್ತು. ಆದರೆ ಇದೀಗ ಎಲೆಕ್ಟ್ರಾನಿಕ್ ಸಿಟಿ & ಬೊಮ್ಮಸಂದ್ರ ಮಾರ್ಗದಲ್ಲಿ ಮೆಟ್ರೋ ಓಡಾಟ ಆರಂಭ ಆಗಿದ್ದು, ಆನೇಕಲ್ ಸುತ್ತಮುತ್ತಲ ಲಕ್ಷಾಂತರ ಜನರಿಗೆ ಇದು ಜಾಕ್‌ಪಾಟ್ ಆಗಿದೆ. ಹಾಗಾದ್ರೆ ಪ್ರಯಾಣಿಕರು ಯಾವಾಗ ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಹತ್ತಬಹುದು ಗೊತ್ತೆ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
ಎಲೆಕ್ಟ್ರಾನಿಕ್ ಸಿಟಿ & ಬೊಮ್ಮಸಂದ್ರ ಮೆಟ್ರೋ...
ಹೌದು, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಅಂದ್ರೆ ಬಿಎಂಆರ್‌ಸಿಎಲ್ (BMRCL) ಈಗ ಭರ್ಜರಿ ಸುದ್ದಿ ನೀಡಿದೆ. ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಈಗ ಚಾಲಕ ರಹಿತ ರೈಲಿಗೆ ಡೈನಾಮಿಕ್ ಸಿಗ್ನಲಿಂಗ್ ಪರೀಕ್ಷೆ ಪ್ರಾರಂಭಿಸಿದೆ. ಈ ಮಾರ್ಗ ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು RV ರಸ್ತೆಯನ್ನ ಬೊಮ್ಮಸಂದ್ರಕ್ಕೆ ಸಂಪರ್ಕಿಸುತ್ತದೆ. ಹೀಗಾಗಿ ಬೆಂಗಳೂರಿನ ಐಟಿ ಹಬ್ ಅಂತಾನೇ ಕರೆಸಿಕೊಳ್ಳುವ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಹೊಸ ಮಂದಹಾಸ ಮೂಡಿದೆ.
ಹೀಗೆ ಚಾಲಕ ರಹಿತ ಮೆಟ್ರೋ ಮೊದಲ ಭಾಗದ ಪರೀಕ್ಷೆಗಳು ಶುರು ಆಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಈ ಮಾರ್ಗದಲ್ಲಿ ಜನರು ಓಡಾಡಲು ಅನುಕೂಲ ಆಗಲಿದೆ. ಮೆಟ್ರೋ ಸಂಪೂರ್ಣ ಜನಗಳ ಓಡಾಟಕ್ಕೆ ತೆರೆಯಲಿದೆಯಂತೆ. ಈಗಾಗಲೇ ಈ ಮಾರ್ಗದಲ್ಲಿ ಮೆಟ್ರೋ ನಿಲ್ದಾಣ & ಇತರ ಕಾಮಾಗರಿಗಳು ಪೂರ್ಣವಾಗಿವೆ. ಹೀಗಾಗಿ ಇದೀಗ ಹಳಿಯ ಮೇಲೆ ರೈಲು ಹತ್ತಿಸಿದ್ದು ಪರೀಕ್ಷೆ ನಡೆಸಲಾಗುತ್ತಿದೆ. ಈ ಪರೀಕ್ಷೆಯ ನಂತರ ನಮ್ಮ ಮೆಟ್ರೋ ಜನರ ಬಳಕೆಗೆ ಕೂಡ ಲಭ್ಯವಾಗಲಿದೆ.
ಬೆಂಗಳೂರು ಮೆಟ್ರೋ ಹವಾ ಜೋರು!
'ನಮ್ಮ ಮೆಟ್ರೋ' ಅಂದ್ರೆ ಒಂದು ಹೆಮ್ಮೆ. ಈಗ ನಮ್ಮ ಮೆಟ್ರೋ ದೊಡ್ಡ ಬ್ರ್ಯಾಂಡ್ ಆಗಿದೆ ಹಾಗೇ ದೊಡ್ಡ ಮಟ್ಟದಲ್ಲಿ ಜಗತ್ತಿನಾದ್ಯಂತ ತಿರುಗಿ ನೋಡುವಂತೆ ಬೆಳೆದಿದೆ. ಭಾರತದ ಹಲವು ರಾಜ್ಯಗಳು ಬೆಂಗಳೂರು ಮೆಟ್ರೋ ಸೇವೆ ಅಳವಡಿಸಿಕೊಂಡಿವೆ. ಹಾಗೇ ದೇಶದಲ್ಲೇ ಅತ್ಯುತ್ತಮ ಸೇವೆ ನೀಡುವ ಸಂಸ್ಥೆಗಳ ಪೈಕಿಯು ಒಂದಾಗಿದೆ. ಅದರಲ್ಲೂ ಬೆಂಗಳೂರಿನ ಟ್ರಾಫಿಕ್ ನರಕದಲ್ಲಿ ಪರದಾಡುತ್ತಿದ್ದ ಬಸ್ ಪ್ರಯಾಣಿಕರಿಗೆ ಮೆಟ್ರೋ ದೇವರ ರೀತಿ ಎಂಟ್ರಿ ಕೊಟ್ಟಿದೆ. ಹೀಗಿದ್ದಾಗ ಬೆಂಗಳೂರು ಹೊರ ವಲಯಕ್ಕೂ ಮೆಟ್ರೋ ಸೇವೆ ಸಿಗುತ್ತಿರುವುದು ಖುಷಿ ಹೆಚ್ಚು ಮಾಡಿದೆ.












Click it and Unblock the Notifications