Namma Metro Safety: ಪ್ರಯಾಣಿಕರ ಸುರಕ್ಷತೆಗಾಗಿ ಮತ್ತೆ 3 ನಿಲ್ದಾಣಗಳಲ್ಲಿ ಬ್ಯಾರಿಕೇಡ್ ಅಳವಡಿಕೆ, ಎಲ್ಲೆಲ್ಲಿ?
ಬೆಂಗಳೂರು: ಬೆಂಗಳೂರು ವಾಸಿಗಳು ದಿನೇ ದಿನೆ ನಮ್ಮ ಮೆಟ್ರೋ ಸಾರಿಗೆ ಮೇಲೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ. ಕೆಲವು ನಿಲ್ದಾಣಗಳಲ್ಲಿ ಅತ್ಯಧಿಕ ಪ್ರಯಾಣಿಕರ ದಟ್ಟಣೆ ಕಂಡು ಬರುತ್ತಿದೆ. ಇತ್ತೀಚೆಗೆ ನಿಲ್ದಾಣಗಳಲ್ಲಿ ಆತ್ಮಹತ್ಯೆಯಂತಹ ಪ್ರಕರಣ ಹೆಚ್ಚಾಗುತ್ತಿವೆ. ಇದೆಲ್ಲದರ ತಡೆಗೆ ಹಾಗೂ ಪ್ರಯಾಣಿಕರ ಸುರಕ್ಷತೆಗಾಗಿ ಬಿಎಂಆರ್ಸಿಎಲ್ ಮೆಜೆಸ್ಟಿಕ್ ನಿಲ್ದಾಣದ ನಂತರ ಇತರ ಮೂರು ನಿಲ್ದಾಣಗಳಲ್ಲಿ ಪ್ಲಾಟ್ಫ್ಲಾಮ್ ಸ್ಕ್ರೀನ್ ಡೋರ್ (PSD) ವ್ಯವಸ್ಥೆಯ ಪರ್ಯಾಯವಾಗಿ ಸ್ಟೀಲ್ ಬ್ಯಾರಿಕೇಡ್ ಅಳವಡಿಸಿದೆ.
ಅತ್ಯಧಿಕ ಜನರು ಭೇಟಿ ನೀಡುವ ಪ್ರಮುಖ ಇಂಟರ್ಚೇಂಜ್ ನಿಲ್ದಾಣವಾಗಿರುವ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ (ಮೆಜೆಸ್ಟಿಕ್) ದಲ್ಲಿ ಸ್ಟೀಲ್ ಬ್ಯಾರಿಕೇಡ್ ಹಿಂದೆ ಅಳವಡಿಸಲಾಗಿತ್ತು. ಅದಾದ ಬಳಿಕ ಹಸಿರು ಮಾರ್ಗದಿಂದ ಸಾಗುವ ಹಳದಿ ಮಾರ್ಗದ ಇಂಟರ್ಚೇಂಜ್ ನಿಲ್ದಾಣವಾದ ಅರ್ವಿ.ರಸ್ತೆಯ ನಿಲ್ದಾಣದಲ್ಲೂ ಪ್ಲಾಟ್ಫಾರ್ಮ್ ಮೇಲೆ ಬ್ಯಾರಿಕೇಡ್ ಅಳವಡಿಸಲಾಯಿತು. ಇದೀಗ ಪ್ರಯಾಣಿಕರ ಸುರಕ್ಷತೆ ಹಿನ್ನೆಲೆಯಲ್ಲಿ ಬೆನ್ನಿಗಾನಹಳ್ಳಿ, ಕೆ.ಆರ್.ಪುರಂ ಮತ್ತು ಇಂದಿರಾನಗರ ನಿಲ್ದಾಣಗಳಲ್ಲಿ ಕೂಡ ಅಳವಡಿಸಲಾಗಿದೆ.

ಎಂಜಿ ರಸ್ತೆ ನಿಲ್ದಾಣದಲ್ಲಿ ಬ್ಯಾರಿಕೇಡ್ ಅಳವಡಿಸಿಲ್ಲ
ಈ ಮೂರು ನಿಲ್ದಾಣಗಳ ಮೂಲಕ ಹೆಚ್ಚಿನ ಸಂಖ್ಯೆ ಪ್ರಯಾಣಿಕರು ಮೆಟ್ರೋ ಸೇವೆ ಪಡೆಯುತ್ತಾರೆ. ಇವುಗಳ ಹೊರತಾಗಿ ಎಂಜಿ. ರಸ್ತೆ ನಿಲ್ದಾಣ ಸೇರಿದಂತೆ ವಿವಿಧ ನಿಲ್ದಾಣಗಳಲ್ಲೂ ಪ್ರಯಾಣಿಕರ ದಟ್ಟಣೆ ಕಂಡು ಬರುತ್ತಿದೆ. ಅಲ್ಲಿ ಇನ್ನೂ ಅಳವಡಿಸಲಾಗಿಲ್ಲ. ಆತ್ಮಹತ್ಯೆ ಪ್ರಕರಣಗಳು, ಮಕ್ಕಳು ಹಳಿಯತ್ತ ಹೋಗುವುದು ತಡೆಯಲು ಪ್ಲಾಟ್ಫ್ಲಾಮ್ ಸ್ಕ್ರೀನ್ ಡೋರ್ (PSD) ವ್ಯವಸ್ಥೆ ಅಳವಡಿಕೆಗೆ ಜನರು ಬೇಡಿಕೆ ಇಟ್ಟಿದ್ದರು. ಆದರೆ ಅದಕ್ಕೆ ಅತ್ಯಧಿಕ ಖರ್ಚು ಬರುತ್ತದೆ. ಸದ್ಯಕ್ಕೆ ಬಾರಿಕೇಡ್ ಅಳವಡಿಸಲಾಗಿದೆ. ಈ ಅಳವಡಿಕೆ ಕಾರ್ಯ ಇತರ ಬೇರೆ ಬೇರೆ ನಿಲ್ದಾಣಗಳಲ್ಲೂ ಮುಂದುವರಿಯುವ ಸಾಧ್ಯತೆ ಇದೆ.
ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ, ಸುರಕ್ಷತೆಗೆ ಒತ್ತು
ಹಸಿರು ಮತ್ತು ನೇರಳೆ ಮಾರ್ಗ ಸಂಧಿಸುವ ನಾಲ್ಕು ಪ್ಲಾರ್ಟ್ಫಾರ್ಮ್ ಹೊಂದಿರುವ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ನಿತ್ಯ ಸುಮಾರು 2.5 ಲಕ್ಷ ಮಂದಿ ಬಂದು ಹೋಗುತ್ತಾರೆ. ಅದೇ ರೀತಿ ಹಳದಿ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಸುಮಾರು ಒಂದು ಲಕ್ಷ ದಾಟಿದೆ. ಹೀಗಾಗಿ ಆರ್.ವಿ.ರಸ್ತೆ ನಿಲ್ದಾಣದಲ್ಲಿ ಇಳಿಯುವ, ಹತ್ತುವವರ ಸಂಖ್ಯೆ ನಿತ್ಯ ಸುಮಾರು 55 ಸಾವಿರದಷ್ಟಿದೆ. ಇಂದಿರಾನಗರ ನಿಲ್ದಾಣದಲ್ಲಿ 42 ಸಾವಿರ, ಬೆನ್ನಿಗಾನಹಳ್ಳಿ ನಿಲ್ದಾಣ ಮೂಲಕ 48 ಸಾವಿರ ಮಂದಿ ಸಂಚಾರ ಮಾಡುತ್ತಾರೆ. ಹೀಗಾಗಿ ಮೊದಲು ಬ್ಯಾರಿಕೇಡ್ ಅಳವಡಿಸಲಾಗಿತ್ತು. ಎಂಜಿ ರಸ್ತೆ ನಿಲ್ದಾಣದಲ್ಲಿ ನಿತ್ಯ 35 ಸಾವಿರ ಮಂದಿ ಮೆಟ್ರೋ ಹತ್ತಿಳಿಯುತ್ತಾರೆ. ಅಲ್ಲಿನ್ನು ಬ್ಯಾರಿಕೇಡ್ ಅಳವಡಿಸಲಾಗಿಲ್ಲ. ಭವಿಷ್ಯದಲ್ಲಿ ಪಿಎಸ್ಡಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಚಿಂತನೆಯಲ್ಲಿ ಬೆಂಗಳೂರು ಮೆಟ್ರೋ ನಿಗಮವಿದೆ.
ಪೀಕ್ ಹವರ್ನಲ್ಲಿ ಮೆಟ್ರೋ ನಿಲ್ದಾಣದಲ್ಲಿ ಜನರು ರೈಲು ಹತ್ತಲು ಇಳಿಯಲು ಕಷ್ಟ ಪಡುತ್ತಾರೆ. ಸರತಿ ಸಾಲಿನಲ್ಲಿ ನಿಲ್ಲಲಾಗದೇ ಮೆಟ್ರೋ ಬಾಗಿಲಿನ ಹತ್ತಿರ ಬಂದು ಗುಂಪಾಗಿ ನಿಲ್ಲುವುದರಿಂದ ಇಳಿಯಲು ಹತ್ತಲು ಸಮಸ್ಯೆ ಆಗುತ್ತಿದೆ. ಈ ಬ್ಯಾರಿಕೇಡ್ ಅಳವಡಿಯಿಂದ ಈ ಸಮಸ್ಯೆ ತಪ್ಪಲಿದೆ. ಹಳಿಗೆ ಜಿಗಿಯುವ ಯತ್ನಕ್ಕೆ ತಡೆ ನೀಡಿದಂತಾಗುತ್ತದೆ. ಈ ಮೂಲಕ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮತ್ತಷ್ಟು ಸುರಕ್ಷತೆ ಒದಗಿಸಲಾಗಿದೆ.
-
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications