Namma Metro Red line Property: ಹೆಬ್ಬಾಳ-ಸರ್ಜಾಪುರ ಮೆಟ್ರೋ: ಭೂ ಸ್ವಾಧೀನವಾದ್ರೆ ಎಷ್ಟು ಕಟ್ಟಡಗಳು ನೆಲಸಮ?
Namma Metro: ಬೆಂಗಳೂರಿಗರ ಜೀವನಾಡಿ ಸಾರಿಗೆಗಳಲ್ಲಿ ನಮ್ಮ ಮೆಟ್ರೋ ಕೂಡ ಒಂದಾಗಿದೆ. ಟ್ರಾಫಿಕ್ ಜಂಜಾಟದಿಂದ ತಪ್ಪಿಸಿಕೊಳ್ಳಲು ನಗರದ ಬಹುತೇಕ ಮಂದಿ ಈ ಸಾರಿಗೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಅಲ್ಲದೆ, ಪ್ರಯಾಣಿಕರ ಬೇಡಿಕೆ ಮೇರೆಗೆ ಮೆಟ್ರೋ ಜಾಲ ವಿಸ್ತರಣೆಯಾಗುತ್ತಲೇ ಇದೆ. ಇನ್ನೂ ಹೆಬ್ಬಾಳ-ಸರ್ಜಾಪುರ ಮಾರ್ಗದಲ್ಲಿ ಮೆಟ್ರೋ ಆದರೆ ಎಷ್ಟು ಕಟ್ಟಡಗಳು ನೆಲಸಮವಾಗಲಿವೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಬೆಂಗಳೂರಿನ ಜೀವನಾಡಿ ಸಾರಿಗೆಯಾಗಿರುವ ಮೆಟ್ರೋದಲ್ಲಿ ಪ್ರತಿನಿತ್ಯವೂ ಏನಿಲ್ಲ ಅಂದರೂ ಲಕ್ಷಾಂತರ ಮಂದಿ ಪ್ರಯಾಣ ಮಾಡುತ್ತಾರೆ. ಪ್ರಯಾಣಿಕರ ಬೇಡಿಕೆ ಮೇರೆಗೆ ಮೆಟ್ರೋ ಜಾಲ ಕೂಡ ವಿಸ್ತರಣೆ ಆಗುತ್ತಲೇ ಇದೆ. ಈಗಾಗಲೇ ಹಲವೆಡೆ ಮೆಟ್ರೋ ವಿಸ್ತರಣೆಯಿಂದ ಬೃಹತ್ ಮರಗಳು ಧರೆಗುರುಳಿದ ಘಟನೆಗಳು ಕೂಡ ನಗರದ ಹಲವೆಡೆ ನಡೆದಿವೆ. ಅಷ್ಟೇ ಪ್ರಮಾಣದಲ್ಲಿ ಗಿಡ ನೆಡುವುದಾಗಿಯೂ ಬಿಎಂಆರ್‌ಸಿಎಲ್ ಹೇಳುತ್ತಾ ಬಂದಿದೆ.

ಆದರೆ 2024ರಲ್ಲಿ ಮೆಟ್ರೋ ಕಾಮಗಾರಿ ನೋಡುವುದಾದರೆ, ಹೇಳಿಕೊಳ್ಳುವಷ್ಟು ಏನು ಅಭಿವೃದ್ಧಿಯಾಗಿಲ್ಲ ಎನ್ನುವ ಮಾಹಿತಿ ಇತ್ತೀಚೆಗಷ್ಟೇ ಬಹಿರಂಗಗೊಂಡಿದೆ. ಇದೇ ಡಿಸೆಂಬರ್‌ನಲ್ಲಿ ಉದ್ಘಾಟನೆಯಾಗಬೇಕಿದ್ದ ಬಹುನಿರೀಕ್ಷಿತ ಹಳದಿ ಮಾರ್ಗದ ದಿನಾಂಕ ಮತ್ತೆ ಮುಂದೂಡಿಕೆಯಾಗಿದೆ. 2024ರ ಡಿಸೆಂಬರ್ ಮುಗಿಯಲು ಇನ್ನೂ ಕೆಲವ ಎರಡು ದಿನಗಳಷ್ಟೇ ಬಾಕಿಯಿದೆ. 2025ರ ಜನವರಿಯಲ್ಲಿ ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಮಾಡಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇದೀಗ ಮತ್ತೊಂದೆಡೆ ನಮ್ಮ ಮೆಟ್ರೋ ಹೆಬ್ಬಾಳ-ಸರ್ಜಾಪುರ ಕೆಂಪು ಮಾರ್ಗದ ಆರಂಭಿಕ ಸಮೀಕ್ಷೆ ನಡೆಸಲಾಗಿದೆ. ಈ ಮಾರ್ಗದಲ್ಲಿ ಭೂಸ್ವಾಧೀನಕ್ಕೆ ಆರಂಭವಾದರೆ, 400ಕ್ಕೂ ಹೆಚ್ಚು ಕಟ್ಟಡಗಳು ನೆಲಸಮವಾಗುವ ಸಾಧ್ಯತೆಯಿದೆ. ಈನ ಹಿನ್ನೆಲೆ ಈ ಭಾಗಗಳ ಜನರು ಆತಂಕಕ್ಕೆ ಒಳಗಾಗಿದ್ದಾರೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ.
ಹೆಬ್ಬಾಳ-ಸರ್ಜಾಪುರ ನಡುವಿನ 36 ಕಿಲೋ ಮೀಟರ್ ಉದ್ದದ ಮೆಟ್ರೋ ಮಾರ್ಗ ನಿರ್ಮಾಣ ಆಗುತ್ತಿದೆ. ಒಟ್ಟು 836 ಆಸ್ತಿಗಳ ಮೂಲಕ ಮಾರ್ಗ ಹಾದು ಹೋಗಲಿದೆ. ಭೂ ಸ್ವಾಧೀನ ಮಾಡಿಕೊಳ್ಳಬೇಕಾದ ಆಸ್ತಿಗಳ ಪೈಕಿ ಹೆಚ್ಚಿನ ಜಮೀನು, ಕಟ್ಟಡಗಳು ಖಾಸಗಿ ವ್ಯಕ್ತಿಗಳಿಗೆ ಸೇರಿದವವಾಗಿವೆ. ಮತ್ತಷ್ಟು ಹೆಬ್ಬಾಳ ಕೆರೆಯ ಪಕ್ಕದಲ್ಲಿರುವ 45 ಹೆಕ್ಟೇರ್ ಜಮೀನು ಆಗಿದೆ ಎಂದು ತಿಳಿದುಬಂದಿದೆ.
ಮಾರ್ಗ ಮಧ್ಯೆ ಗುರುತಿಸಿರುವ ಕಟ್ಟಡಗಳ ಪೈಕಿ 314 ವಸತಿ ಕಟ್ಟಡಗಳು, 37 ವಾಣಿಜ್ಯ ಕಟ್ಟಡಗಳು, 63 ಕೈಗಾರಿಕಾ ಕಟ್ಟಡಗಳಿವೆ. ಬಿಎಂಆರ್‌ಸಿಎಲ್ ಪ್ರಾಥಮಿಕ ಅಧಿಸೂಚನೆಯನ್ನು ಹೊರಡಿಸಿದ ನಂತರ ಯೋಜನೆಗೆ ಅಗತ್ಯವಿರುವ ಭೂಮಿಯ ವಿಸ್ತೀರ್ಣ ಎಷ್ಟು ಹಾಗೂ ಯಾವೆಲ್ಲಾ ಕಟ್ಟಡಗಳನ್ನು ಭೂಸ್ವಾಧೀನ ಮಾಡಿಕೊಳ್ಳಲಾಗುತ್ತದೆ ಎನ್ನುವ ಮಾಹಿತಿ ಸ್ಪಷ್ಟವಾಗಿ ತಿಳಿದುಬರಲಿದೆ.
17 ಎಲಿವೇಟೆಡ್ ಮತ್ತು 11 ಅಂಡರ್‌ಪಾಸ್ ನಿಲ್ದಾಣಗಳನ್ನು ಒಳಗೊಂಡಿರುವ ಹೆಬ್ಬಾಳ-ಸರ್ಜಾಪುರ ಮೆಟ್ರೋ ಮಾರ್ಗದಲ್ಲಿ 26 ನಿಲ್ದಾಣಗಳು ತಲೆ ಎತ್ತಲಿವೆ. ಇನ್ನು ಈ ಮೆಟ್ರೋ ಮಾರ್ಗದ ನಿರ್ಮಾಣಕ್ಕೆ ಅಂದಾಜು ಏನಲ್ಲ ಅಂದರೂ 16,500 ಕೋಟಿ ರೂಪಾಯಿ ವೆಚ್ಚ ತಗುಲಲಿದೆ ಎಂದು ಅಂದಾಜಿಸಲಾಗಿದೆ.
ಮೆಟ್ರೋ ನಿಲ್ದಾಣಗಳ ವಿವರ: ಸರ್ಜಾಪುರ, ಕಾಡ ಅಗ್ರಹಾರ ರಸ್ತೆ, ಸೋಮಾಪುರ, ದೊಮ್ಮಸಂದ್ರ, ಮುತ್ತನಲ್ಲೂರು ಕ್ರಾಸ್, ಕೊಡತಿ ಗೇಟ್, ಅಂಬೇಡ್ಕರ್ ನಗರ, ದೊಡ್ಡಕನ್ನಳ್ಳಿ, ಕೈಕೊಂಡನಹಳ್ಳಿ, ಬೆಳ್ಳಂದೂರು ಗೇಟ್, ಅಗರ, ಜಕ್ಕಸಂದ್ರ, ಕೋರಮಂಗಲ 3ನೇ ಬ್ಲಾಕ್, ಕೋರಮಂಗಲ 2ನೇ ಬ್ಲಾಕ್, ಡೈರಿ ಸರ್ಕಲ್, ನಿಮ್ಹಾನ್ಸ್, ಶಾಂತಿ ನಗರ, ಟೌನ್ ಹಾಲ್, ಕೆಆರ್ ಸರ್ಕಲ್.
ಬಸವೇಶ್ವರ ಸರ್ಕಲ್, ಬೆಂಗಳೂರು ಗಾಲ್ಫ್ ಕೋರ್ಸ್, ಪ್ಯಾಲೇಸ್ ಗುಟ್ಟಹಳ್ಳಿ, ಮೇಖ್ರಿ ಸರ್ಕಲ್, ವೆಟರ್ನರಿ ಕಾಲೇಜ್, ಗಂಗಾ ನಗರ ಹೆಬ್ಬಾಳದಲ್ಲಿ ಒಟ್ಟು 26 ನಿಲ್ದಾಣಗಳನ್ನು ಈ ಮಾರ್ಗದಲ್ಲಿ ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಇನ್ನು ಈ ಯೋಜನೆಗೆ ಇತ್ತೀಚೆಗೆ ರಾಜ್ಯ ಸರ್ಕಾರವು ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಒಪ್ಪಗೆ ಸೂಚಿಸಿವೆ. ಸಮೀಕ್ಷೆ ಪೂರ್ಣವಾಗಿ ಕಾಮಗಾರಿ ಇನ್ನೆರಡು ವರ್ಷದೊಳಗೆ ಆರಂಭ ಆಗಲಿದ್ದು, 2030ಕ್ಕೆ ಈ ಮಾರ್ಗದಲ್ಲಿ ಮೆಟ್ರೋ ರೈಲುಗಳು ಓಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.












Click it and Unblock the Notifications