Property: ಮೆಟ್ರೋ ಹೊಸ ಯೋಜನೆ: ಬೆಂಗಳೂರಿನ ಈ ಭಾಗದಲ್ಲಿ ಭೂಮಿ ಬೆಲೆ & ಬಾಡಿಗೆ ಭರ್ಜರಿ ಹೆಚ್ಚಳ, ಆಸ್ತಿದಾರರಿಗೆ ಧಮಾಕ !
Namma Metro Red Line New Project: ರಿಯಲ್ ಎಸ್ಟೇಟ್ ವಿಚಾರದಲ್ಲಿ ಬೆಂಗಳೂರಿಗೆ ಮತ್ತೊಂದು ಗಿಫ್ಟ್ ಸಿಕ್ಕಿದೆ. ಬೆಂಗಳೂರಿನಲ್ಲಿ ಈಗಾಗಲೇ ರಿಯಲ್ ಎಸ್ಟೇಟ್‌ಗೆ ಬಂಪರ್ ಬಂದಿದೆ. ನಮ್ಮ ಮೆಟ್ರೋ, ಬೆಂಗಳೂರು ಎರಡನೇ ವಿಮಾನ ನಿಲ್ದಾಣ ಹಾಗೂ ವಿವಿಧ ಕಾಮಗಾರಿಗಳಿಂದ ಈಗಾಗಲೇ ನಗರದಲ್ಲಿ ಭೂಮಿಯ ಬೆಲೆಯು ಭರ್ಜರಿ ಹೆಚ್ಚಳವಾಗಿದೆ.
ಇದರ ನಡುವೆ ಇದೀಗ ಬೆಂಗಳೂರಿನಲ್ಲಿ ಮೆಟ್ರೋ ವಿಸ್ತರಣೆಯಿಂದಾಗಿ ಮತ್ತಷ್ಟು ಪ್ರಮುಖ ಪ್ರದೇಶಗಳಲ್ಲಿ ಭೂಮಿಯ ಬೆಲೆಯು ಭರ್ಜರಿ ಹೆಚ್ಚಳವಾಗುತ್ತಿದೆ. ನಮ್ಮ ಮೆಟ್ರೋ ಸೇವೆ ನಗರದ ಹಲವು ಭಾಗಗಳಿಗೆ ವಿಸ್ತರಣೆಯಾಗುತ್ತಿರುವ ಬೆನ್ನಲ್ಲೇ ರಿಯಲ್ ಎಸ್ಟೇಟ್ ಬೂಮ್ ಸೃಷ್ಟಿಯಾಗಿದೆ. ನಗರದ ಯಾವ ಪ್ರದೇಶದಲ್ಲಿ ಭೂಮಿಯ ಬೆಲೆ ಹೆಚ್ಚಳವಾಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ ಭೂಮಿ ಅಥವಾ ಆಸ್ತಿ ಇದೆ ಎಂದಾದರೆ ಚಿನ್ನದ ಮೊಟ್ಟೆ ಇರಿಸುವ ಕೋಳಿ ಇದ್ದಂತೆಯೇ. ಇದೀಗ ವಿವಿಧ ಯೋಜನೆಗಳ ಜಾರಿ ಕಾರಣಕ್ಕೆ ಭೂಮಿಯ ಬೆಲೆಯು ಇನ್ನಷ್ಟು ಹೆಚ್ಚಳವಾಗಿದೆ. ಬೆಂಗಳೂರು ಮೆಟ್ರೋ ರೆಡ್‌ಲೈನ್‌ನಿಂದಾಗಿ ಬೆಂಗಳೂರಿನ ಕೆಲವೊಂದು ಪ್ರಮುಖ ಭಾಗದಲ್ಲಿ ಭೂಮಿಯ ಬೆಲೆಯು ಭರ್ಜರಿ ಹೆಚ್ಚಳವಾಗಿದೆ. ಅದರಲ್ಲಿ ಪ್ರಮುಖವಾಗಿ ಹೆಬ್ಬಾಳ ಹಾಗೂ ಸರ್ಜಾಪುರ ಪ್ರದೇಶಗಳು ಸೇರಿವೆ. ನಮ್ಮ ಮೆಟ್ರೋ ರೆಡ್‌ಲೈನ್ ಬೆಂಗಳೂರು ಉತ್ತರ ಭಾಗದ ಹೆಬ್ಬಾಳ ಹಾಗೂ ಆಗ್ನೇಯದ ಸರ್ಜಾಪುರದ ನಡುವೆ ಸಂಪರ್ಕವನ್ನು ಕಲ್ಪಿಸುತ್ತದೆ. ಇದು ನಮ್ಮ ಮೆಟ್ರೋ 3ನೇ ಎ ಹಂತ ಎಂದು ಗುರುತಿಸಲಾಗಿದೆ.
ರಿಯಲ್ ಎಸ್ಟೇಟ್‌ಗೆ ಬಂಪರ್: ಇನ್ನು ಹೊಸ ಮೆಟ್ರೋ ಮಾರ್ಗದಿಂದ ಬೆಂಗಳೂರಿಗೆ ಎರಡು ಪ್ರಮುಖ ಲಾಭಗಳಾಗಲಿವೆ ಎಂದು ಅಂದಾಜಿಸಲಾಗಿದೆ. ಅದರಲ್ಲಿ ಈಗಾಗಲೇ ಚರ್ಚೆಯಾಗಿರುವಂತೆ ನಗರದ ಟ್ರಾಫಿಕ್ ಜಾಮ್ ಕಡಿಮೆಯಾಗುವುದು ಮತ್ತೊಂದು ಈ ಮಾರ್ಗಗಳಲ್ಲಿ ಭೂಮಿಯ ಬೆಲೆ ಏರಿಕೆಯಾಗುವುದು.
ಈ ಯೋಜನೆಯಿಂದ ಈ ಭಾಗದಲ್ಲಿ ಮನೆಗಳ ಬಾಡಿಗೆ ಹೆಚ್ಚಳ ಹಾಗೂ ಆಸ್ತಿಗಳ ಮೌಲ್ಯ ಹೆಚ್ಚಾಗುತ್ತಿದೆ. ಮೆಟ್ರೊ ನಿಲ್ದಾಣಗಳ 500 ಮೀಟರ್ ವ್ಯಾಪ್ತಿಯಲ್ಲಿ ಭೂಮಿಗೆ ಬಂಗಾರದ ಬೆಲೆ ಬರುವ ನಿರೀಕ್ಷೆ ಹೆಚ್ಚಳವಾಗಿದೆ.
ಎಲ್ಲೆಲ್ಲಿ ಸಂಪರ್ಕ ಕಲ್ಪಿಸಲಿದೆ: ಇನ್ನು ಈ ಯೋಜನೆಯ ಮೂಲಕ ವಿವಿಧ ಪ್ರಮುಖ ಪ್ರದೇಶಗಳಲ್ಲಿ ಮೆಟ್ರೋ ಹಾದು ಹೋಗಲಿದ್ದು. ಈ ಮಾರ್ಗಗಳಲ್ಲಿ ಭೂಮಿ ಬೆಲೆ ಹಚ್ಚಳವಾಗುತ್ತಿದೆ. ಆ ಪ್ರಮುಖ ಪ್ರದೇಶಗಳ ವಿವರ ಈ ರೀತಿ ಇದೆ.
* ಹೆಬ್ಬಾಳ
* ಗಂಗಾನಗರ (ಎತ್ತರಿಸಿದ)
* ಪಶುವೈದ್ಯಕೀಯ ಕಾಲೇಜಿನ ಸುತ್ತಮುತ್ತಲಿನ ಪ್ರದೇಶ
* ಕೋರಮಂಗಲ II ಬ್ಲಾಕ್
* ಸರ್ಜಾಪುರ
ಇನ್ನು ಉದ್ದೇಶಿತ ಹೊಸ ಮಾರ್ಗದಿಂದಾಗಿ ಇದೀಗ ಬೆಂಗಳೂರಿನ ಸರ್ಜಾಪುರ ಹಾಗೂ ಹೆಬ್ಬಾಳದಲ್ಲಿ ದಿನ ನಿತ್ಯವೂ ಉಂಟಾಗುತ್ತಿರುವ ಟ್ರಾಫಿಕ್ ಜಾಮ್‌ಗೆ ಕಡಿವಾಣ ಬೀಳಲಿದೆ ಎಂದೇ ಹೇಳಲಾಗುತ್ತಿದೆ. ಹೆಬ್ಬಾಳ ಹಾಗೂ ಸರ್ಜಾಪುರದಲ್ಲಿ ಮಿತಿ ಮೀರಿದ ಟ್ರಾಫಿಕ್ ಜಾಮ್ ಇದೆ.
ಹೀಗಾಗಿ ಹೊಸ ಮೆಟ್ರೋ ಮಾರ್ಗದಿಂದ ಅನುಕೂಲವಾಗಲಿದೆ. ಇನ್ನು ಈ ಉದ್ದೇಶಿತ ಯೋಜನೆಯು 2030ರ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆಯಾದರೂ. ಇನ್ನಷ್ಟು ಮುಂದಕ್ಕೆ ಹೋಗುವ ಸಾಧ್ಯತೆಯೂ ಇದೆ. ಮೆಟ್ರೋ ರೆಡ್‌ಲೈನ್ ಕಾಮಗಾರಿಗೆ ಅಂದಾಜು 28,405 ಕೋಟಿ ರೂ. ಆಗಲಿದೆ ಎಂದು ಹೇಳಲಾಗಿದೆ.












Click it and Unblock the Notifications